ಉಚಿತ ವಿದ್ಯುತ್ ಬಾಡಿಗೆದಾರರಿಗೂ ಅನ್ವಯ: ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಯ

Siddaramaiah
ಮಾಜಿ ಮುಖ್ಯಮಂತ್ರಿ ದಿವಂಗತ ಡಿ.ದೇವರಾಜ ಅರಸು ಪುಣ್ಯಸ್ಮರಣೆ ನಿಮಿತ್ತ ವಿಧಾಸೌಧ ಆವರ ಆವರಣದಲ್ಲಿ ಅವರ ಪ್ರತಿಮೆ ಹಾಗೂ ಭಾವಚಿತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗೌರವ ನಮನ ಮಂಗಳವಾರ ಸಲ್ಲಿಸಿದರು.
Published on

ಬೆಂಗಳೂರು: ಉಚಿತ ವಿದ್ಯುತ್ ಸೌಲಭ್ಯ ಬಾಡಿಗೆ ಮನೆಯಲ್ಲಿ ಇರುವವರಿಗೂ ಅನ್ವಯವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಯ ನೀಡಿದ್ದಾರೆ.

ಮಾಜಿ ಸಿಎಂ ದಿವಂಗತ ಡಿ.ದೇವರಾಜ ಅರಸು ಪುಣ್ಯಸ್ಮರಣೆ ನಿಮಿತ್ತ ವಿಧಾನಸೌಧ ಆವರಣದಲ್ಲಿ ಅವರ ಪುತ್ಥಳಿಗೆ ಗೌರವ ನಮನ ಸಲ್ಲಿಸಿದ ಬಳಿಕ ಸುದ್ದಿಗಾರರಿಗೆ ಮಂಗಳವಾರ ಪ್ರತಿಕ್ರಿಯಿಸಿದ ಅವರು, ಈಗಾಗಲೇ ತಿಳಿಸಿರುವಂತೆ ವಾರ್ಷಿಕ ಸರಾಸರಿಗೆ ಶೇಕಡ 10 ಹೆಚ್ಚುವರಿ ಲೆಕ್ಕಾಚಾರದಲ್ಲಿ ಮಾಸಿಕ 50, 70, 100 ಯೂನಿಟ್ ಸೇರಿ 200 ಯೂನಿಟ್ ಒಳಗೆ ಬಳಸಿದ ಎಲ್ಲರಿಗೂ ಉಚಿತ ಗ್ಯಾರಂಟಿ ಲಭಿಸಲಿದ್ದು, ಬಾಡಿಗೆ ಮನೆಯಲ್ಲಿ ಇರುವವರಿಗೆ ಈ ಸೌಲಭ್ಯ ಲಭಿಸಲಿದ್ದು, ವಾಣಿಜ್ಯಿಕ ಉದ್ದೇಶಿತ ಬಳಕೆಗೆ ಅವಕಾಶ ಇಲ್ಲವೆಂದು ಸ್ಪಷ್ಟಪಡಿಸಿದರು.

ನೈತಿಕತೆ ಎಲ್ಲಿದೆ ?

ಬಿಜೆಪಿಯವರಿಗೆ ಮಾಡಲು ಏನೂ ಕೆಲಸವಿಲ್ಲವಲ್ಲ ಅದಕ್ಕೆ ಹೋರಾಟ ಮಾಡುತ್ತಿದ್ದಾರೆ. ಕಾಂಗ್ರೆಸ್ ಉಚಿತ ಗ್ಯಾರಂಟಿಗಳ ಬಗ್ಗೆ ಟೀಕಿಸುವ ನೈತಿಕತೆ ಅವರಿಗೆ ಎಲ್ಲಿದೆ ? ಕೃಷಿ ಭಾಗ್ಯ, ಶಾಲೆ ಮಕ್ಕಳಿಗೆ ಸೈಕಲ್ ವಿತರಣೆ ಹೀಗೆ ಬಿಜೆಪಿ ಆಡಳಿತಾವಧಿಯಲ್ಲಿ ಹೀಗೆ ನಿಲ್ಲಿಸಿದ ಕಾರ್ಯಕ್ರಮಗಳ ದೊಡ್ಡ ಪಟ್ಟಿಯೇ ಇದೆ. ನಮಗೆ ಪಾಠ ಮಾಡಲು ಬರುತ್ತಾರೆ ಎಂದು ಸಿದ್ದರಾಮಯ್ಯ ಹರಿಹಾಯ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net