More

    ಭಾರತೀಯ ಚಿತ್ರರಂಗ ಇತಿಹಾಸದಲ್ಲಿ ದಾಖಲೆ ಬರೆದ ಆದಿಪುರುಷ್​ ಚಿತ್ರದ​ ಪ್ರೀ ರಿಲೀಸ್​ ಇವೆಂಟ್

    ತಿರುಪತಿ: ಆದಿಪುರುಷ್ ಈ ವರ್ಷದ ಬಹುನಿರೀಕ್ಷಿತ ಚಿತ್ರವಾಗಿದ್ದು.​ ಚಿತ್ರತಂಡವು ಭಾರತೀಯ ಸಿನಿ ಇತಿಹಾಸದಲ್ಲಿ ಅತಿದೊಡ್ಡ ಪ್ರೀ ರಿಲೀಸ್​ ಇವೆಂಟ್​​ಗಾಗಿ ಅಯೋಧ್ಯೆ ಸೆಟ್​​ನ್ನು ಮರುನಿರ್ಮಾಣ ಮಾಡಿ ಬೃಹತ್​ ವೇದಿಕೆಯನ್ನು ನಿರ್ಮಿಸಿದೆ.

    ಇದನ್ನೂ ಓದಿ: ಗಂಡನನ್ನು ತೊರೆದು ಕಿರುತೆರೆ ನಿರ್ದೇಶಕಿ ಜತೆ ಲಿವಿಂಗ್​ ಟುಗೆದರ್​! ದುಷ್ಕೃತ್ಯ ಎಸಗಿ ಸಿಕ್ಕಬಿದ್ದ ಜೋಡಿ

    ಇಂದು ಸಂಜೆ ಆರು ಗಂಟೆಯಿಂದ ಮೆಗಾ ಪ್ರೀ ರಿಲೀಸ್​ ಇವೆಂಟ್​​ ಶುರುವಾಗಲಿದ್ದು, ಚಿನ್ನ ಜೀಯರ್​​ ಸ್ವಾಮಿಗಳಿಗೆ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಲಾಗಿದೆ. ಈ ಕಾರ್ಯಕ್ರಮ ಶ್ರೀ ವೆಂಕಟೇಶ್ವರ ವಿವಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, 100ಕ್ಕೂ ಅಧಿಕ ನೃತ್ಯಗಾರರು ಹಾಗೂ ಗಾಯಕರು ಮನರಂಜನೆ ಮೂಲಕ ಅಭಿಮಾನಿಗಳನ್ನು ರಂಜಿಸಲಿದ್ದಾರೆ.

    ಇನ್ನು, ಸಿನಿಮಾ ರಂಗದ ಹಲವು ಸೂಪರ್​ಸ್ಟಾರ್​ಗಳು ಈ ಇವೆಂಟ್​ನಲ್ಲಿ ಭಾಗಿಯಾಗುವ ಸಾಧ್ಯತೆಗಳಿವೆ. ಕ್ರೀಡಾಂಗಣದ ಸುತ್ತಲೂ ರಾಮನ ಅವತಾರದ ಪ್ರಭಾಸ್​ ಬೃಹತ್​ ಕಟೌಟ್​​ಗಳು ರಾರಾಜಿಸುತ್ತಿದ್ದು, ಈ ಇವೆಂಟ್​ ಕಣ್ತುಂಬಿಕೊಳ್ಳಲು 1.5 ಲಕ್ಷಕ್ಕೂ ಅಧಿಕ ಅಭಿಮಾನಿಗಳು ಸೇರುವ ನಿರೀಕ್ಷಿಯಿದೆ.

    ಜೂನ್​ 16ರಂದು ತೆರೆಗೆ ಅಪ್ಪಳಿಸಲಿರುವ ಆದಿಪುರುಷ್​ ಸಿನಿಮಾ ಓಂ ರಾವತ್​ ನಿರ್ದೇಶನದಲ್ಲಿ ಮೂಡಿ ಬರುತ್ತಿದ್ದು, ಪ್ರಭಾಸ್​​, ಸೈಫ್​ ಅಲಿ ಖಾನ್​ ಹಾಗೂ ಕೃತಿ ಸನೂನ್​ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರ ರಾಮಾಯಣದ ಕಥೆಯನ್ನು ಆಧರಿಸಿದ್ದು, 3ಡಿ ವರ್ಷನ್​​ನಲ್ಲಿ ಬಿಡುಗಡೆಯಾಗಲಿದೆ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts