ISSF ಜೂನಿಯರ್​ ವಿಶ್ವಕಪ್​: ಶೂಟಿಂಗ್‌ನಲ್ಲಿ ಚಿನ್ನದ ಪದಕ ಗೆದ್ದ ಭಾರತದ ಜೋಡಿ

Mixed air rifle gold
Published on

ಜರ್ಮನಿ: ಭಾರತದ ಶೂಟರ್‌ಗಳಾದ ಅಭಿನವ್ ಶಾ ಮತ್ತು ಗೌತಮಿ ಭಾನೋಟ್ ಜರ್ಮನಿಯಲ್ಲಿ ನಡೆದ ಐಎಸ್‌ಎಸ್‌ಎಫ್ ಜೂನಿಯರ್ ವಿಶ್ವಕಪ್‌ನ ಮಿಶ್ರ ತಂಡ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಪಡೆದರು. ಈ ಗೆಲುವಿನಿಂದ ಪ್ರತಿಷ್ಠಿತ ಟೂರ್ನಿಯಲ್ಲಿ ಭಾರತಕ್ಕೆ ಎರಡನೇ ಚಿನ್ನ ಲಭಿಸಿದೆ.

ಗಮನಾರ್ಹ ಪ್ರದರ್ಶನವನ್ನು ನೀಡಿದ ಭಾರತದ ಜೋಡಿಯು ಫ್ರಾನ್ಸ್‌ನ ಓಸಿಯಾನ್ ಮುಲ್ಲರ್ ಮತ್ತು ರೊಮೈನ್ ಔಫ್ರೆರೆರನ್ನು 10-ಮೀಟರ್ ಏರ್ ರೈಫಲ್ ಮಿಶ್ರ ತಂಡ ವಿಭಾಗದ ಫೈನಲ್‌ನಲ್ಲಿ 17-7ರಿಂದ ಸೋಲಿಸಿ ಅದ್ಭುತ ಜಯವನ್ನು ಸಾಧಿಸಿದರು.

ಇನ್ನು ಪದಕ ಪಟ್ಟಿಯಲ್ಲಿ ಭಾರತವು ಎರಡು ಚಿನ್ನ, ಒಂದು ಬೆಳ್ಳಿ ಮತ್ತು ಒಂದು ಕಂಚಿನೊಂದಿಗೆ ಅಗ್ರಸ್ಥಾನದಲ್ಲಿದ್ದದೆ. ಕೊರಿಯಾ ಒಂದು ಚಿನ್ನ ಮತ್ತು ಎರಡು ಬೆಳ್ಳಿಯೊಂದಿಗೆ ಎರಡನೇ ಸ್ಥಾನದಲ್ಲಿ ಹಾಗೂ ಇಟಲಿ ಮೂರನೇ ಸ್ಥಾನದಲ್ಲಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net