ಸಾಲುಸಾಲು ರಜೆಯೆಂದು ಊರಿಗೆ ಹೊರಟ ಮಂದಿ; ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಚ್ಚಾದ ಸಂಚಾರ ದಟ್ಟಣೆ

Highway
Published on

ನವದೆಹಲಿ: ವಾರಾಂತ್ಯ ಸಮೀಪಿಸುತ್ತಿದ್ದಂತೆ, ದೀಪಾವಳಿ ಹಬ್ಬವೂ ಹತ್ತಿರವಾಗುತ್ತಿದೆ. ಈ ನಿಟ್ಟಿನಲ್ಲಿ ಸಾಲು ಸಾಲು ರಜೆಗಳು ಬರಲಿವೆ. ಹೀಗಾಗಿ ಬಹುತೇಕ ನಗರ ನಿವಾಸಿಗಳು ತಮ್ಮ ತಮ್ಮ ಊರಿನತ್ತ ಮುಖ ಮಾಡಿದ್ದಾರೆ. ಇದರಿಂದಾಗಿ ದೆಹಲಿ ಹಾಗೂ ಗುರುಗ್ರಾಮ್ ಎಕ್ಸ್​ಪ್ರೆಸ್​ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಉಂಟಾಗಿದ್ದು, ವಾಹನಗಳು ಸರತಿ ಸಾಲಿನಲ್ಲಿ ಸಂಚರಿಸುತ್ತಿವೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಉಂಟಾದ ಸಂಚಾರ ದಟ್ಟಣೆಯಿಂದ ವಾಹನ ಸವಾರರು ಹತಾಶೆಯಿಂದ ನಿರಂತರವಾಗಿ ಹಾರ್ನ್​ ಮಾಡುತ್ತಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ ವಾಹನಗಳ ಹಾರ್ನ್​ನಿನ ಸದ್ದು ಗದ್ದಲ ಕೇಳುತ್ತಿವೆ.

ಟ್ರಾಫಿಕ್ ಜ್ಯಾಮ್​ನಿಂದಾಗಿ ಬೃಹತ್ ಲಾರಿಗಳು, ಬಸ್​​ಗಳು ಸಂಚರಸಲಾಗದೆ ಬಾಕಿಯಾಗಿವೆ. ದೆಹಲಿ ಮತ್ತು ಗುರುಗ್ರಾಮ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿದಿನ ಹೆಚ್ಚಿನ ಸಂಖ್ಯೆಯ ಜನರು ಪ್ರಯಾಣಿಸುವುದರಿಂದ ಪೀಕ್ ಅವರ್‌ನಲ್ಲಿ ಹೆಚ್ಚಿನ ಸಂಚಾರ ದಟ್ಟಣೆ ಇರುತ್ತದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net