

ನವದೆಹಲಿ: ಭಾರತದ ಪ್ರಮುಖ ಕಾರು ತಯಾರಿಕಾ ಕಂಪನಿಗಳಲ್ಲಿ ಒಂದಾಗಿರುವ ಮಾರುತಿ ಸುಜುಕಿ, ಸ್ಟೇರಿಂಗ್ ಸಿಸ್ಟಮ್ನ ಟೈ ರಾಡ್ಗಳನ್ನು ಬದಲಾಯಿಸಲು 87,599 ವಾಹನಗಳನ್ನು ಹಿಂಪಡೆಯಲಿದೆ ಎಂದು ಕಂಪನಿ ತಿಳಿಸಿದೆ. ಸ್ಟೇರಿಂಗ್ ಸಿಸ್ಟಮ್ನಲ್ಲಿನ ದೋಷದ ಕಾರಣಕ್ಕಾಗಿ ಈ ನಿರ್ಧಾರ ಮಾಡಿರುವುದಾಗಿ ಕಂಪನಿ ತಿಳಿಸಿದೆ.
ಇದನ್ನೂ ಓದಿ: ಲಿಂಗ ಬದಲಾವಣೆ ನಿಷೇಧ; ಹೊಸ ಶಾಸನಕ್ಕೆ ಸಹಿ ಹಾಕಿದ ರಷ್ಯಾ
ಸ್ಟೇರಿಂಗ್ ಸಿಸ್ಟಮ್ ಸಮಸ್ಯೆ ಎಂದರೇನು?: ವಾಹನಗಳಲ್ಲಿನ ಸ್ಟೀರಿಂಗ್ ಟೈ ರಾಡ್ನಲ್ಲಿನ ಕೆಲವು ಸಮಸ್ಯೆಗಳು ಕಂಡಿವೆ. ಸ್ಟೀರಬಿಲಿಟಿ ಅಂದರೆ, ವಾಹನವನ್ನು ತಿರುಗಿಸುವ ವೇಳೆ ಸಮಸ್ಯೆ ಉಂಟಾಗಲಿದೆ. ಆ ಕಾರಣಕ್ಕಾಗಿ ಈ ಕಾರುಗಳನ್ನು ರಿಕಾಲ್ ಮಾಡುತ್ತಿರುವುದಾಗಿ ಮಾರುತಿ ಸುಜಿಕಿ ತಿಳಿಸಿದೆ.
ಸ್ಟೇರಿಂಗ್ ವ್ಯವಸ್ಥೆಯಲ್ಲಿ ದೋಷ ಕಂಡು ಬಂದಿದ್ದು, ರಿಕಾಲ್ ಮಾಡಿ ಪರಿಶೀಲನೆ ಮಾಡಲಾಗುವುದು. ಬದಲಾವಣೆ ಮಾಡಬೇಕಾದ ಅಗತ್ಯವಿದ್ದಲ್ಲಿ ಸ್ಟೇರಿಂಗ್ ಟೈ ರಾಡ್ಅನ್ನು ಬದಲಾವಣೆ ಮಾಡುವುದಾಗಿ ತಿಳಿಸಿದೆ. ದೋಷವು ಸ್ಟೀರಿಂಗ್ ಟೈ ರಾಡ್ನ ಒಂದು ಭಾಗದಲ್ಲಿದೆ. ಇದು ಅಪರೂಪದ ಸಂದರ್ಭಗಳಲ್ಲಿ, ವಾಹನದ ಸ್ಟೀರಬಿಲಿಟಿ ಮತ್ತು ನಿರ್ವಹಣೆಯ ಮೇಲೆ ಪರಿಣಾಮ ಬೀರಬಹುದು ಇಲ್ಲದೇ ಅದು ಒಡೆದು ಹೋಗಬಹದು ಎಂದು ಕಂಪನಿಯು ಎಕ್ಸ್ಚೇಂಜ್ ಫೈಲಿಂಗ್ನಲ್ಲಿ ತಿಳಿಸಿದೆ.
ಜುಲೈ 24 ರಿಂದ ಕಾರುಗಳನ್ನು ರಿಕಾಲ್ ಮಾಡಲಾಗುವುದು, 2021ರ ಜುಲೈ 5 ರಿಂದ 2023ರ ಫೆಬ್ರವರಿ 15ರವರೆಗೆ ಮಾರಾಟವಾಗಿರುವ ಎಸ್ಪ್ರೆಸ್ಸೋ ಹಾಗೂ ಎಕೋ ಕಾರುಗಳ ರಿಕಾಲ್ ಮಾಡಲಿದ್ದೇವೆ. ಸಮಸ್ಯೆ ಹೊಂದಿರುವ ವಾಹನಗಳ ಮಾಲೀಕರು ಮಾರುತಿ ಸುಜುಕಿ ಅಧಿಕೃತ ಡೀಲರ್ ವರ್ಕ್ಶಾಪ್ಗಳಿಂದ ದೋಷಯುಕ್ತ ಭಾಗವನ್ನು ತಪಾಸಣೆ ಮತ್ತು ಬದಲಿಗಾಗಿ ಉಚಿತವಾಗಿ ಸಂವಹನವನ್ನು ಸ್ವೀಕರಿಸುತ್ತಾರೆ ಎಂದು ಕಂಪನಿ ಹೇಳಿದೆ.