More

    ಭಾರಿ ಮಳೆ; ಮನೆ ಕುಸಿದು ಹಾವೇರಿ, ದಾವಣಗೆರೆಯ ಪ್ರತ್ಯೇಕ ಘಟನೆಯಲ್ಲಿ 2 ಕಂದಮ್ಮಗಳ ದಾರುಣ ಸಾವು

    ದಾವಣಗೆರೆ/ಹಾವೇರಿ: ನಿರಂತರ ಮಳೆ ಹಿನ್ನೆಲೆ, ಮನೆ ಗೋಡೆ ಕುಸಿದು ಹಾವೇರಿ,ದಾವಣಗೆರೆಯ ಪ್ರತ್ಯೇಕ ಘಟನೆಯಲ್ಲಿ 2 ಕಂದಮ್ಮಗಳ ದಾರುಣವಾಗಿ ಸಾವನ್ನಪ್ಪಿವೆ.

    haveri

    ಭಾಗ್ಯ ಚಲಮರದ್ (3) ಮೃತಪಟ್ಟ ಮಗು. ತಾಲೂಕಿನ ಮಾಳಪುರ ಗ್ರಾಮದ 3 ವರ್ಷದ ಮಗು ಮೃತಪಟ್ಟಿದೆ. ಮತ್ತೊಂದು ಮಗು ಗಾಯಗೊಂಡಿದೆ.

    ಇದನ್ನೂ ಓದಿ:  ಲಿಂಗ ಬದಲಾವಣೆ ನಿಷೇಧ; ಹೊಸ ಶಾಸನಕ್ಕೆ ಸಹಿ ಹಾಕಿದ ರಷ್ಯಾ

    ಕಳೆದ ಎರಡು ದಿನಗಳ ಹಿಂದೆ ನಿರಂತರ ಮಳೆಗೆ ಮನೆ ಕುಸಿದು ಬಿದ್ದಿತ್ತು. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಮಗುವನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಪುಟ್ಟ ಕಂದಮ್ಮ ಅಸುನೀಗಿದೆ. ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

    ಇದನ್ನೂ ಓದಿ: VIDEO| ದೇಶ ಸೇವೆಗಾಗಿ ತನ್ನ 9 ತಿಂಗಳ ಮಗುವನ್ನು ಬಿಟ್ಟು ಹೋದ BSF ಮಹಿಳಾ ಯೋಧೆ

    ಸ್ಪೂರ್ತಿ ಮೃತ ಮಗು, ದಾವಣಗೆರೆ ಜಿಲ್ಲೆಯ‌ ಹರಿಹರ ತಾಲೂಕಿನ ಕುಂಬಳೂರು ಗ್ರಾಮದಲ್ಲಿ ನಿರಂತರ ಮಳೆ ಹಿನ್ನೆಲೆ ರಾತ್ರಿ ವೇಳೆ ಸುಮಾರು 50 ವರ್ಷದಷ್ಟು ಹಳೆ ಮನೆ ಕುಸಿದಿದೆ. ಗೋಡೆಯ ಅಡಿ ಸಿಲುಕಿದ ಕೆಂಚಪ್ಪ ಮಗು ಸ್ಪೂರ್ತಿ ಹಾಗೂ‌ ಪತ್ನಿ ಲಕ್ಷ್ಮಿ ಮೂವರು ಮಲಗಿಕೊಂಡ ವೇಳೆ ಗೋಡೆ ಕುಸಿದು ಬಿದ್ದಿದೆ. ಗೋಡೆ ಬಿದ್ದ ಶಬ್ದ ಕೇಳಿ ಘಟನಾ ಸ್ಥಳಕ್ಕೆ ಅಕ್ಕ ಪಕ್ಕದ ಜನ ಸ್ಥಳಕ್ಕೆ ಧಾವಿಸಿದ್ದಾರೆ. ತಕ್ಷಣ ಗೋಡೆಯ ಮಣ್ಣು ತೆಗೆದು ಕೆಂಚಪ್ಪ ಮತ್ತು ಲಕ್ಷ್ಮೀಯನ್ನು ಗ್ರಾಮಸ್ಥರು ಪ್ರಾಣಾಪಾಯದಿಂದ ಕಾಪಾಡಿದ್ದಾರೆ. ಎಷ್ಟೇ ಪ್ರಯತ್ನಿಸಿದರು ಮಗು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.

    haveri

    ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಜನವೋ ಜನ; ಸರ್ವರ್ ಡೌನ್ ಹಿನ್ನೆಲೆ

    ಸ್ಥಳಕ್ಕೆ ತಹಶೀಲ್ದಾರ್ ಭೇಟಿ ಪರಿಶೀಲನೆ, ಮಲೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮಗುವನ್ನು ಕಳೆದುಕೊಂಡ ಕುಟುಂಬಸ್ಥರ ಅಕ್ರಂಧನ ಮುಗಿಲು ಮುಟ್ಟಿದೆ.

    VIDEO| ದೇಶ ಸೇವೆಗಾಗಿ ತನ್ನ 9 ತಿಂಗಳ ಮಗುವನ್ನು ಬಿಟ್ಟು ಹೋದ BSF ಮಹಿಳಾ ಯೋಧೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts