

ಮಂಗಳೂರು(ವಿಟ್ಲ): ಕಬಕ-ವಿಟ್ಲ ರಸ್ತೆಯ ಚಂದಳಿಕೆ ತಿರುವಿನಲ್ಲಿ ಕ್ರೆಷರ್ ಉತ್ಪನ್ನ ಸಾಗಾಟ ಘನ ಲಾರಿ ಹಾಗೂ ಕಾರಿನ ನಡುವೆ ಗುರುವಾರ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಮಹಿಳೆಯೊಬ್ಬರಿಗೆ ಗಾಯಗಳಾಗಿದೆ. ಇದನ್ನೂ ಓದಿ: ಸ್ವೀಡನ್‌ನಲ್ಲೀಗ ಸೆಕ್ಸ್‌ಗೆ ಕ್ರೀಡೆಯ ಮಾನ್ಯತೆ; ಜೂ. 8ಕ್ಕೆ ಪ್ರಥಮ ಯೂರೋಪಿಯನ್ ಸೆಕ್ಸ್ ಚಾಂಪಿಯನ್‌ಶಿಪ್!
ಕೇರಳದ ಉಪ್ಪಳ ನಿವಾಸಿಗಳು ಹೊಚ್ಚ ಹೊಸ ಬೆಂಜ್ ಕಾರಿನಲ್ಲಿ ವಿಟ್ಲ ಮೂಲಕವಾಗಿ ಪುತ್ತೂರು ಕಡೆಗೆ ತೆರಳುತ್ತಿದ್ದ ವೇಳೆ ಎದುರಿನಿಂದ ಬರುತ್ತಿದ್ದ ಘನ ಲಾರಿ ಡಿಕ್ಕಿ ಹೊಡೆದಿದೆ. ಕಾರಿನ ಎರಡು ಏರ್ ಬಲೂನ್ಗಳು ತೆರೆದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮಹಿಳೆಯೊಬ್ಬರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಸ್ಥಳೀಯರು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿದ್ದಾರೆ. ಘಟನೆಯಿಂದ ಕಾರು ಸಂಪೂರ್ಣವಾಗಿ ಹಾನಿಗೊಂಡಿದೆ.
ಘಟನೆಗೆ ಕಾರಣವಾದ ಘನ ಲಾರಿ ರಾತ್ರಿಯವರೆಗೂ ತಿರುವಿನಲ್ಲಿ ರಸ್ತೆಯ ಮಧ್ಯದಲ್ಲೇ ಇದ್ದು, ಮುಖ್ಯ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತಿತ್ತು. ಘನ ಲಾರಿಗಳ ಯದ್ವಾತದ್ವ ಸಂಚಾರದಿಂದ ಜನರಿಗೆ ಸಮಸ್ಯೆಯಾಗುತ್ತಿದ್ದರೂ ವಿಟ್ಲದಲ್ಲಿ ಕೇಳುವವರು ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.