

ಸ್ವೀಡನ್: ಲೈಂಗಿಕತೆಯನ್ನು ಕ್ರೀಡೆಯಾಗಿ ನೋಂದಾಯಿಸಿಕೊಂಡಿರುವ ಮೊದಲ ದೇಶ ಸ್ವೀಡನ್ ಆಗಿದ್ದು, ಇದೀಗ ಯೂರೋಪಿಯನ್ ಸೆಕ್ಸ್ ಚಾಂಪಿಯನ್ ಶಿಪ್ ಆಯೋಜಿಸಿದೆ. ಇದೇ ತಿಂಗಳ 8ನೇ ತಾರೀಖಿನಂದು ಗೋಥೆನ್‌ಬರ್ಗ್‌ನಲ್ಲಿ ಚಾಂಪಿಯನ್‌ಶಿಪ್ ನಡೆಯಲಿದೆ.
16 ವಿಭಾಗಗಳಲ್ಲಿ ಸೆಕ್ಸ್ ಚಾಂಪಿಯನ್‌ಶಿಪ್ ನಡೆಸಲಾಗುತ್ತಿದೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ಸೆಕ್ಸ್ ಚಾಂಪಿಯನ್‌ಶಿಪ್ ಸ್ಪರ್ಧೆಯಲ್ಲಿ ಭಾಗವಹಿಸುವುದಾಗಿ ಈಗಾಗಲೇ ವಿವಿಧ ಯುರೋಪಿಯನ್ ದೇಶಗಳ 20 ಪ್ರತಿನಿಧಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ.
ಸ್ಪರ್ಧೆಯಲ್ಲಿ ವಿಜೇತರು ಯಾರೆಂಬುದನ್ನು ಮೂವರು ತೀರ್ಪುಗಾರು ಮತ್ತು ಪ್ರೇಕ್ಷಕರ ರೇಟಿಂಗ್ ಮೂಲಕ ನಿರ್ಧರಿಸಲಾಗುತ್ತದೆ. ಅಂತಿಮವಾಗಿ ಪ್ರೇಕ್ಷಕರಿಂದ 70% ಮತಗಳನ್ನು ಪರಿಗಣಿಸಲಾಗುತ್ತದೆ. ಉಳಿದ 30% ಮತಗಳನ್ನು ತೀರ್ಪುಗಾರು ನೀಡುತ್ತಾರೆ ಎನ್ನಲಾಗಿದೆ.
ಸ್ವೀಡಿಷ್ ಫೆಡರೇಶನ್ ಆಫ್ ಸೆಕ್ಸ್‌ನ ಅಧ್ಯಕ್ಷ ಡ್ರ್ಯಾಗನ್ ಬ್ರಾಟಿಚ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಲೈಂಗಿಕತೆಯನ್ನು ಕ್ರೀಡೆಯಾಗಿ ಪರಿವರ್ತಿಸುವುದು ಅನಿವಾರ್ಯ. ಇದು ಗಂಡು ಮತ್ತು ಹೆಣ್ಣಿನ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಉತ್ತೇಜಿಸುತ್ತದೆ ಎಂದು ಹೇಳಿಕೊಂಡಿದ್ದಾರೆ. (ಏಜೆನ್ಸೀಸ್)