ಚಾಕು ತೋರಿಸಿ ನನ್ನ ಸ್ನೇಹಿತೆಯಾಗು ಎಂದವನನ್ನು ಜೈಲಿಗಟ್ಟಿದ ಪೊಲೀಸರು!; ಮುಂದೇನಾಯ್ತು ನೋಡಿ

Untitled design (5)
Published on

ಜಾರ್ಖಂಡ್: ಮಹಿಳೆಯ ಮನೆಗೆ ನುಗ್ಗಿ, ಚಾಕು(Knife) ತೋರಿಸಿ ನನ್ನ ಸ್ನೇಹಿತೆಯಾಗಿರಬೇಕು ಎಂದು ಒತ್ತಾಯಿಸಿದ ವ್ಯಕ್ತಿಯನ್ನು ಇದೀಗ ಪೊಲೀಸರು(Police) ಬಂಧಿಸಿದ್ದಾರೆ.

ಗುರುವಾರ ಜಾರ್ಖಂಡ್​ನ(Jharkhand) ರಾಮ್​ಗರ್​ನಲ್ಲಿ ಮಹಿಳೆಯ ಮನೆಗೆ ನುಗ್ಗಿ, ಬೆದರಿಕೆ ಹಾಕಿದ ಆರೋಪಿಯನ್ನು(Accused) ಅರ್ಜು ಮನ್ಸೂರಿ ಎಂದು ಗುರುತಿಸಲಾಗಿದ್ದು, ರಾಮ್​ಗರ್ ನಗರದ ಸೌದಗರ್ ಮಹುಲ್ಲಾದ ನಿವಾಸಿ ಎಂದು ತಿಳಿಸಲಾಗಿದೆ.

accused

ಮೇ 31 ರಂದು ಮನೆಗೆ ನುಗ್ಗಿದ ಆರೋಪಿ, ತನ್ನ ನಿವೇದನೆಯನ್ನು(Proposal) ಒಪ್ಪದಿದ್ದರೆ ಮುಂದೆ ಕಠಿಣ ಪರಿಸ್ಥಿತಿಗಳನ್ನು ಎದುರಿಸಬೇಕಾಗುತ್ತದೆ ಎಂದು ಮಹಿಳೆಗೆ ಬೆದರಿಕೆ ಹಾಕಿರುವುದಾಗಿ ವರದಿಗಳು ಉಲ್ಲೇಖಿಸಿವೆ.

ಈ ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಮಹಿಳೆಯ ಕುಟುಂಬದವರು ಮತ್ತು ನೆರೆಹೊರೆಯವರು ರಾಮ್​ಗರ್ ಪೊಲೀಸ್ ಠಾಣೆಗೆ ಭೇಟಿ ನೀಡಿ, ಆರೋಪಿಯನ್ನು ತಕ್ಷಣವೇ ಬಂಧಿಸಬೇಕು(Arrest) ಎಂದು ಆಗ್ರಹಿಸಿ, ದೂರು ದಾಖಲಿಸಿದ್ದಾರೆ. ದೂರನ್ನು ಪಡೆಯುತ್ತಿದ್ದಂತೆ ಪೊಲೀಸರು ಆರೋಪಿ ಅರ್ಜು ಮನ್ಸೂರಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net