

ಬೆಂಗಳೂರು: ಯುವತಿಯ ಬಟ್ಟೆ ಹಾಗೂ ದೇಹದ ಆಕಾರದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಲ್ಲದೆ, ಪ್ರಶ್ನೆ ಮಾಡಿದ್ದಕ್ಕೆ ಆಕೆಯ ಜತೆಗೆ ಬಂದಿದ್ದ ಯುವಕನ ಮೇಲೆ ಪುಂಡರ ಗ್ಯಾಂಗ್ ಹಲ್ಲೆ ಮಾಡಿರುವ ಘಟನೆ ಕೊತ್ತನೂರು ಬಳಿಯಿರುವ ಒಯಾ ಪಬ್ನಲ್ಲಿ ನಡೆದಿದೆ.
ತಿಲಕ್ ಹಲ್ಲೆಗೊಳಗಾದ ಯುವಕ. ಸಂಬಂಧಿ ಯುವತಿ ಸಂಧ್ಯಾ ಕುಮಾರ್ ಜತೆ ತಿಲಕ್ ಒಯಾ ಪಬ್ಗೆ ಭೇಟಿ ನೀಡಿದ್ದ. ಈ ವೇಳೆ ಯುವತಿಯ ಬಾಡಿ ಶೇಪ್ ಬಗ್ಗೆ ಕೇರಳ ಮೂಲದ ಯುವಕರ ಗ್ಯಾಂಗ್ ಅಶ್ಲೀಲವಾಗಿ ಮಾತನಾಡಿದೆ. ಈ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಅವಾಚ್ಯ ಶಭ್ಧಗಳಿಂದ ನಿಂದಿಸಿ, ಬಿಯರ್ ಬಾಟಲ್ನಿಂದ ಗ್ಯಾಂಗ್ ಹಲ್ಲೆ ಮಾಡಿದೆ.
ರಾಜು, ಹರಿಕೃಷ್ಣ ಹಾಗೂ ಅಜಯ್ ಎಂಬುವರು ವಿರುದ್ಧ ಹಲ್ಲೆ ಮಾಡಿದ ಆರೋಪ ಕೇಳಿಬಂದಿದೆ. ವಿನಾಕಾರಣ ಎಳೆದಾಡಿ ಹಲ್ಲೆ ನಡೆಸಿ, ಪ್ರಾಣ ಬೆದರಿಕೆ ಹಾಕಿದ್ದು, ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 323, 324, 354, 504, 506ರ ಅಡಿಯಲ್ಲಿ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ದೂರಿನ ಆಧಾರದ ಮೇಲೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. (ದಿಗ್ವಿಜಯ ನ್ಯೂಸ್)