

ಮುಂಬೈ: ಬಾಲಿವುಡ್‌ನಲ್ಲಿ ತಮ್ಮದೇಯಾದ ನಟನೆ ಮೂಲಕ ಅಪಾರ ಮೆಚ್ಚುಗೆ ಗಳಿಸಿ ಸಾಕಷ್ಟು ವಿವಾದಾತ್ಮಕ ಜೀವನವನ್ನು ನಡೆಸಿರುವ ನಟಿ ರೇಖಾ ತಾವು ಅನುಭವಿಸಿದ ಮುಜುಗರದ ಘಟನೆಯೊಂದರ ಬಗ್ಗೆ ಹೇಳಿದ್ದಾರೆ.
ಇಂದಿಗೂ ಯುವನಟಿಯರಿಗೆ ಸೌಂದರ್ಯ ಹಾಗೂ ಫ್ಯಾಷನ್ ಸೆನ್ಸ್ನಲ್ಲಿ ಸ್ಪರ್ಧೆ ನೀಡುವ ಹಿರಿಯ ನಟಿ ತಮ್ಮ ಆತ್ಮಚರಿತ್ರೆ 'ರೇಖಾ: ದಿ ಅನ್‌ಟೋಲ್ಡ್ ಸ್ಟೋರಿ'ಯಲ್ಲಿ ಚಿತ್ರರಂಗದ ಸಾಕಷ್ಟು ಕುತೂಹಲಕಾರಿ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ.
ರೇಖಾ ಕೇವಲ 15 ವರ್ಷ ವಯಸ್ಸಿನವರಾಗಿದ್ದಾಗ 1969 ರಲ್ಲಿ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ಅಂಜಾನಾ ಸಫರ್ ಎಂಬ ಸಿನಿಮಾದಲ್ಲಿ ನಟಿಸುವಾಗ ನಟ ಬಿಸ್ವಜಿತ್ ಚಟರ್ಜಿಯು ಶೂಟಿಂಗ್ ವೇಳೆ ಬಲವಂತವಾಗಿ ತಮಗೆ ಚುಂಬಿಸಿದ್ದರು.
ಈ ದೃಶ್ಯ ಮೊದಲೇ ನಿಗದಿಯಾಗಿತ್ತು. ಆದರೆ ನಿರ್ದೇಶಕರು ತನಗೆ ಮಾಹಿತಿ ನೀಡಿರಲಿಲ್ಲ. ಆ ವೇಳೆ ತನಗೆ ಕೇವಲ 15 ವರ್ಷವಿದ್ದು, ಇದರಿಂದಾಗಿ ತುಂಬಾ ಭಯಭೀತಳಾಗಿದ್ದೆ ಎಂಬ ವಿಚಾರವನ್ನು ಬಹಿರಂಗಪಡಿಸಿದ್ದಾರೆ.(ಏಜೆನ್ಸೀಸ್)