ಭಾರತದಲ್ಲಿ 74 ಲಕ್ಷಕ್ಕೂ ಹೆಚ್ಚು ವಾಟ್ಸ್​​​​ಆ್ಯಪ್​ ಖಾತೆಗಳು ಬಂದ್: ಕಾರಣ ಹೀಗಿದೆ..

whatsapp
Published on

ದೆಹಲಿ: ಮೆಟಾ ಮಾಲೀಕತ್ವದ ವಾಟ್ಸ್​​​​ಆ್ಯಪ್​ ಕಂಪನಿಯು 2023ರ ಏಪ್ರಿಲ್​ನಲ್ಲಿ ಭಾರತದ 74 ಲಕ್ಷ ಖಾತೆಗಳನ್ನು ನಿಷೇಧಿಸಿದೆ. 2021ರ ಐಟಿ ನಿಯಮಗಳ ಅನುಸಾರವಾಗಿ ಕಂಪನಿಯು ಮಾಸಿಕ ವರದಿಯನ್ನು ಪ್ರಕಟಿಸಿದ್ದು, ಇದರಲ್ಲಿ ಎಲ್ಲ ವಿವರಗಳನ್ನು ನಮೂದಿಸಲಾಗಿದೆ.

ಈ ವರದಿಯು 2023ರ ಏಪ್ರಿಲ್ 1ರಿಂದ ಏಪ್ರಿಲ್ 30ರ ನಡುವಿನ ಅವಧಿಯದಾಗಿದ್ದು, ಭಾರತದ ಬಳಕೆದಾರರ ಕುಂದುಕೊರತೆಗಳಿಗೆ ಪ್ರತಿಕ್ರಿಯೆಯಾಗಿ ವಾಟ್ಸ್​​​​ಆ್ಯಪ್​​ ತೆಗೆದುಕೊಂಡ ಕ್ರಮ ಹಾಗೂ ಕಾನೂನು, ಸೇವಾ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಮೇಲ್ಮನವಿ ಸಮಿತಿಯಿಂದ ತೆಗೆದುಕೊಳ್ಳಲಾದ ಕ್ರಮ ಮತ್ತು ಖಾತೆಗಳ ಕುರಿತಾದ ಮಾಹಿತಿಯನ್ನು ಒಳಗೊಂಡಿದೆ.

ಈ ಕುರಿತು ವಾಟ್ಸ್​​​​ಆ್ಯಪ್​​ ವಕ್ತಾರರು ಮಾತನಾಡಿದ್ದು, 2021ರ ಐಟಿ ನಿಯಮಗಳ ಅನುಸಾರವಾಗಿ ನಾವು ಏಪ್ರಿಲ್ ತಿಂಗಳ ವರದಿಯನ್ನು ಪ್ರಕಟಿಸಿದ್ದೇವೆ. ಬಳಕೆದಾರ ಸುರಕ್ಷತಾ ವರದಿಯು, ಗ್ರಾಹಕರಿಂದ ಸ್ವೀಕರಿಸಿದ ದೂರುಗಳ ಆಧಾರಕ್ಕನುಗುಣವಾದ ತೆಗೆದುಕೊಳ್ಳಲಾದ ಕ್ರಮ ಮತ್ತು ನಮ್ಮ ಪ್ಲಾಟ್‌ಫಾರ್ಮ್‌ಗೆ ಅನುಸಾರವಾಗಿ ತೆಗೆದುಕೊಂಡಿರುವ ಕ್ರಮಗಳ ವಿವರಗಳನ್ನು ಒಳಗೊಂಡಿದೆ ಎಂದು ತಿಳಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net