

ನೊಯ್ಡಾ: ನಡುರಸ್ತೆಯಲ್ಲಿ ಡೆಲಿವರಿ ಬಾಯ್‌ಗೆ ಮನಸ್ಸಿಗೆ ಬಂದಂತೆ ಥಳಿಸಿರುವ ಘಟನೆ ಉತ್ತರಪ್ರದೇಶದ ನೊಯ್ಡಾದ ಸೆಕ್ಟರ್ 99ರಲ್ಲಿ ನಡೆದಿದೆ. ಸೊಸೈಟಿಯ ನಿವಾಸಿಯೊಬ್ಬರು ಅಮಾನುಷವಾಗಿ ಹಲ್ಲೆ ನಡೆಸಿರುವ ಕೃತ್ಯವು ಕ್ಯಾಮರಾದಲ್ಲಿ ಸೆರೆಯಾಗಿದೆ.
ಒನ್-ಟೈಮ್ ಪಾಸ್‌ವರ್ಡ್(OTP) ಕಾರಣದಿಂದಾಗಿ ಡೆಲಿವರಿ ಬಾಯ್ ಮೇಲೆ ಹಲ್ಲೆ ನಡೆಸಲಾಗಿದ್ದು, ಈ ಘಟನೆಯು ನೆಟ್ಟಿಗರ ಹಾಗೂ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ದೃಶ್ಯದಲ್ಲಿ ಏನಿದೆ?
24 ಸೆಕೆಂಡುಗಳ ಅವಧಿಯ ವೀಡಿಯೊ ಕ್ಲಿಪ್‌ನಲ್ಲಿ, ಕೋಪಗೊಂಡ ವ್ಯಕ್ತಿ ರೆಸಿಡೆನ್ಶಿಯಲ್ ಸೊಸೈಟಿಯೊಳಗೆ ರಸ್ತೆಯ ಮಧ್ಯದಲ್ಲಿ ಡೆಲಿವರಿ ಬಾಯ್ನನ್ನು ಹಿಂಸಾತ್ಮಕವಾಗಿ ಥಳಿಸುತ್ತಿರುವುದನ್ನು ಕಾಣಬಹುದು. ನಿರಂತರ ಹಲ್ಲೆಯ ಮಧ್ಯೆ, ಡೆಲಿವರಿ ಬಾಯ್ ದೂರ ಸರಿಯುವ ಮೂಲಕ ತನ್ನನ್ನು ತಾನು ರಕ್ಷಿಸಿಕೊಳ್ಳುತ್ತಿರುವುದನ್ನು ಕಾಣಬಹುದಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಹರಿದಾಡುತ್ತಿದ್ದು ಪೊಲೀಸರು ಎಫ್‌ಐಆರ್ ದಾಖಲಿಸಿ, ಆರೋಪಿಯನ್ನು ಬಂಧಿಸಿದ್ದಾರೆ.(ಏಜೆನ್ಸೀಸ್)