More

    ಗುಡುಗು, ಆಲಿಕಲ್ಲು ಸಹಿತ ಭಾರೀ ಮಳೆ; ಮಳೆರಾಯನ ಅಬ್ಬರಕ್ಕೆ ಬೆಚ್ಚಿ ಬಿದ್ದ ಬೆಂಗಳೂರಿಗರು

    ಬೆಂಗಳೂರು: ನಗರದ ಹಲವೆಡೆ  ಸಂಜೆ ವೇಳೆಗೆ ಗುಡುಗು ಆಲಿಕಲ್ಲು ಸಹಿತ ಭಾರಿ ಮಳೆಯಾಗಿದೆ. ಕಳೆದ ಕೆಲವು ದಿನಗಳಿಂದ ರಾಜ್ಯದ ವಿವಿಧೆಡೆ ತಾಪಮಾನ ಹೆಚ್ಚಾಗಿ ಸೆಖೆಯಿಂದ ಜನರು ಪರಿತಪಿಸುತ್ತಿದ್ದರು. ಇಂದು ಬೆಂಗಳೂರು ಸೇರಿದಂತೆ ವಿವಿಧೆಡೆ ಮಳೆಯಾಗಿದ್ದು, ಜನರಿಗೆ ತುಸು ಕೂಲ್‌ ಕೂಲ್‌ ಅನುಭವವಾಗಿದೆ.

    ಇದನ್ನೂ ಓದಿ: ಬಿಕಿನಿ ತೊಟ್ಟು ಕ್ಯಾಮೆರಾಗೆ ಪೋಸ್​ ನೀಡಿದ ನಟಿ, ನಿರೂಪಕಿ ಅನಸೂಯ! ಫೋಟೋಗಳು ವೈರಲ್​

    ಬೆಂಗಳೂರಿನ ವಿವಿಧ ಬಡಾವಣೆಗಳಲ್ಲಿ ಗುಡುಗು, ಆಲಿಕಲ್ಲು ಸಹಿತ ಭಾರೀ ಮಳೆಯಾಗಿದೆ. ವಿವಿಧ ಕಡೆ ಮರಗಳು ಉರುಳಿ ಬಿದ್ದು, ವಾಹನ ಸಂಚಾರ ಏರುಪೇರಾಗಿದೆ. ಮಲ್ಲೇಶ್ವರಂ, ಚಾಮರಾಜಪೇಟೆ, ಕಾರ್ಪೊರೇಷನ್, ವಿಧಾನಸೌದ, ಮೆಜೆಸ್ಟಿಕ್ ಸೇರಿದಂತೆ ವಿವಿಧೆಡೆ ಧಾರಕಾರ ಮಳೆಯಾಗಿದೆ.

    ಗುಡುಗು ಮತ್ತು ಗಾಳಿ ಸಹಿತ ಮಳೆಗೆ ಬೆಂಗಳೂರಿಗರು ಬೆಚ್ಚಿ ಬಿದ್ದಿದ್ದಾರೆ. ನಿನ್ನೆ ರೀತಿಯೇ ಬೃಹತ್ ಪ್ರಮಾಣದಲ್ಲಿ ಸುರಿಯುತ್ತಿರುವ ಮಳೆಗೆ ಇಂದು ಸಹ ನಗರದಲ್ಲಿ ಭಾರೀ ಅವಾಂತರ ಸೃಷ್ಟಿ ಆಗುವ ಸಾಧ್ಯತೆ ಇದೆ. ವರುಣನ ಆರ್ಭಟಕ್ಕೆ ವಾಹನ ಸವಾರರ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇಂದು ನಡೆಯುವ RCB ಪಂದ್ಯಕ್ಕೂ ಮಳೆ ಅಡ್ಡಿ ಆಗುವ ಸಾಧ್ಯತೆ ಎನ್ನಲಾಗುತ್ತಿದೆ.

    ಮುಂದಿನ 24 ಗಂಟೆಯೂ ರಾಜ್ಯದ ವಿವಿಧೆಡೆ ಗುಡುಗು ಮಿಂಚು ಸಹಿತ ಮಳೆಯಾಗಲಿದೆ. ದಕ್ಷಿಣ ಒಳನಾಡಿನ ಬಹುತೇಕ ಕಡೆ ಮತ್ತು ಉತ್ತರ ಒಳನಾಡು, ಕರಾವಳಿಯ ಕೆಲವು ಕಡೆ ಗುಡುಗು ಮಿಂಚು ಸಹಿತ ಹಗುರ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಬಿಸಿಲಿಗೆ ಕಪ್ಪಾದ ಕಾಲು ಪಳ ಪಳ ಅಂತಾ ಹೊಳೆಯ ಬೇಕಾ? ಈ ಮನೆ ಮದ್ದುಗಳನ್ನು ಬಳಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts