ಸಿನಿಮಾ

ಬಿಸಿಲಿಗೆ ಕಪ್ಪಾದ ಕಾಲು ಪಳ ಪಳ ಅಂತಾ ಹೊಳೆಯ ಬೇಕಾ? ಈ ಮನೆ ಮದ್ದುಗಳನ್ನು ಬಳಸಿ

ಬೆಂಗಳೂರು: ಮಹಿಳೆಯರು ಸೌಂದರ್ಯ ಪ್ರಿಯರು. ಸೌಂದರ್ಯ ವರ್ಧಕ ಹಾಗೂ ಕೆಲವು ಮನೆ ಮದ್ದುಗಳನ್ನು ತಮಗೇ ತಾವೇ ತಯಾರಿಸಿಕೊಂಡು ಸೌಂದರ್ಯದ ಕುರಿತಾಗಿ ಕಾಳಜಿ ಹೊಂದಿರುತ್ತಾರೆ. ಬಹುತೇಕ ಜನರು ಕಾಲಿನ ಸೌಂದರ್ಯದ ಕುರಿತು ಅಷ್ಟೊಂದು ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಕೈ ಕಾಲುಗಳು ಅಂದವಾಗಿ ಕಾಣದಿದ್ದರೆ ಸೌಂದರ್ಯಕ್ಕೆ ಧಕ್ಕೆಯಾಗುತ್ತದೆ.

ಬೇಸಿಗೆಯಲ್ಲಿ ಬಿಸಿಲಿಗೆ ಚರ್ಮ ಟ್ಯಾನ್ ಆಗುತ್ತದೆ. ಚರ್ಮ ಟ್ಯಾನ್ ಆದರೆ ಸೌಂದರ್ಯ ಸ್ವಲ್ಪ ಮಟ್ಟಿಗೆ ಕುಗ್ಗುವುದು ಸಹಜ. ಬಿಸಿಲಿಗೆ ಕೈ, ಕಾಲು, ಬೆನ್ನು ಕಪ್ಪಾಗುತ್ತದೆ. ಹೀಗಾಗಿ ನೀವು ಈ ಟೀಪ್ಸ್​​ ಫಾಲೋ ಮಾಡಬಹುದಾಗಿದೆ.

ಹಾಲು ಮತ್ತು ಅಕ್ಕಿ ಹಿಟ್ಟು ಒಂದು ಬೌಲ್ಗೆ ಎರಡು ಚಮಚ ಅಕ್ಕಿ ಹಿಟ್ಟು ಮತ್ತು ಸ್ವಲ್ಪ ಹಸಿ ಹಾಲನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಕಾಲಿನ ಪಾದದ ಮೇಲೆ ಹಾಗೂ ಕೆಳಗೆ ಚೆನ್ನಾಗಿ ಹಚ್ಚಿಕೊಳ್ಳಿ. ನಂತರ ಕೈಗಳಿಂದ ಲಘುವಾಗಿ ಮಸಾಜ್ ಮಾಡಿ.

ಅರಿಶಿನ, ಕಡಲೆ ಹಿಟ್ಟು ಸ್ವಲ್ಪ ರೋಸ್ ವಾಟರ್ ಹಾಕಿ. ನಯವಾದ ಪೇಸ್ಟ್ ಸಿದ್ಧಪಡಿಸಿಕೊಳ್ಳಿ. ಇದನ್ನು ಕಾಲಿನ ಪಾದಗಳ ಮೇಲೆ ಹಚ್ಚಿ.

ಇದನ್ನೂ ಓದಿ: ಬಿಕಿನಿ ತೊಟ್ಟು ಕ್ಯಾಮೆರಾಗೆ ಪೋಸ್​ ನೀಡಿದ ನಟಿ, ನಿರೂಪಕಿ ಅನಸೂಯ! ಫೋಟೋಗಳು ವೈರಲ್​

ಸೋಡಾ, ಮೊಸರು ಒಂದು ಬೌಲ್ಗೆ ಹಾಕಿ. ಅದಕ್ಕೆ ಸ್ವಲ್ಪ ನಿಂಬೆಹಣ್ಣಿನ ಸೇರಿಸಿ ಮಿಶ್ರಣ ಮಾಡಿ ನಿಮ್ಮ ಪಾದಗಳಿಗೆ ಹಚ್ಚುತ್ತಾ ಬನ್ನಿ ದಿನ ಕಳೆದಂತೆ ಪಾದದ ಬಣ್ಣ ಬದಲಾಗುತ್ತದೆ.

ಅಲೋವೆರಾ ಜೆಲ್​ಗೆ ಸ್ವಲ್ಪ ಸೋಡಾ ಸೇರಿಸಿ ಕಾಲಿಗೆ ಹಚ್ಚಿ ಚೆನ್ನಾಗಿ ಮಸಾಜ್​ ಮಾಡಿ.

ಜನ್ಮದಿನದಂದು ಹೃದಯಾಘಾತ; ಮೃತ ದೇಹದ ಪಕ್ಕದಲ್ಲಿ ಕೇಕ್ ಕತ್ತರಿಸಿದ ಪೋಷಕರು!

Latest Posts

ಲೈಫ್‌ಸ್ಟೈಲ್