ತೆಲಂಗಾಣ: ಜನ್ಮದಿನದಂದು ಹೃದಯಾಘಾತದಿಂದ 16 ವರ್ಷದ ಬಾಲಕ ಸಾವನ್ನಪ್ಪಿದ್ದು, ಪೋಷಕರು ಕಣ್ಣೀರು ಹಾಕುತ್ತಾ ಅವನ ದೇಹದ ಪಕ್ಕದಲ್ಲಿ ಕೇಕ್ ಕತ್ತರಿಸಿದ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಸಿಎಚ್ ಸಚಿನ್( 16) ಮೃತ ಬಾಲಕ. ತೆಲಂಗಾಣದ ಆಸಿಫಾಬಾದ್ ಜಿಲ್ಲೆಯ ನಿವಾಸಿಯಾದ ಬಾಲಕ ತನ್ನ ಹುಟ್ಟುಹಬ್ಬದ ದಿನವೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ.
ಇದನ್ನೂ ಓದಿ: ಬಿಕಿನಿ ತೊಟ್ಟು ಕ್ಯಾಮೆರಾಗೆ ಪೋಸ್ ನೀಡಿದ ನಟಿ, ನಿರೂಪಕಿ ಅನಸೂಯ! ಫೋಟೋಗಳು ವೈರಲ್
ಬಾಲಕನ ಹುಟ್ಟುಹಬ್ಬವನ್ನು ಅವರ ಮನೆಯಲ್ಲಿ ಆಚರಿಸಲು ಸ್ನೇಹಿತರು, ಕುಟುಂಬ ಮತ್ತು ನೆರೆಹೊರೆಯವರು ಜಮಾಯಿಸಿದ್ದರು. ಸಚಿನ್ ಕುಟುಂಬದವರು ಅದ್ಧೂರಿ ಆಚರಣೆಯನ್ನು ಯೋಜಿಸಿ ಕೇಕ್ ಖರೀದಿಸಿದರು. ಸಂಭ್ರಮಾಚರಣೆಯ ನಡುವೆಯೇ ಸಚಿನ್ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾನೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಹೃದಯಾಘಾತದಿಂದ ಸಚಿನ್ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ನಂತರ ದುಃಖತಪ್ತ ಕುಟುಂಬದವರು ಸಚಿನ್ ಅವರ ಪಾರ್ಥಿವ ಶರೀರದೊಂದಿಗೆ ಕೇಕ್ ಕತ್ತರಿಸಿ ಗೌರವ ಸಲ್ಲಿಸುತ್ತಿರುವ ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ಮೃತ ಯುವಕನ ಸ್ನೇಹಿತರು ಮತ್ತು ಸಂಬಂಧಿಕರು ಅವರ ಹುಟ್ಟುಹಬ್ಬದ ಹಾಡನ್ನು ಹೇಳುತ್ತಾ ಮೃತ ದೇಹದ ಮುಂದೆ ಕಣ್ಣೀರು ಹಾಕಿದ್ದಾರೆ.
ಹಗರಣಗಳ ತನಿಖೆಗೆ ಸ್ವಾಗತ, ಬಿಜೆಪಿಗೆ ಚಿಂತೆಯಿಲ್ಲ: ಮಾಜಿ ಸಿಎಂ ಬಿಎಸ್ವೈ