ಹಗರಣಗಳ ತನಿಖೆಗೆ ಸ್ವಾಗತ, ಬಿಜೆಪಿಗೆ ಚಿಂತೆಯಿಲ್ಲ: ಮಾಜಿ ಸಿಎಂ ಬಿಎಸ್​ವೈ

bsy
Published on

ಬೆಂಗಳೂರು: ಬಿಜೆಪಿ ಆಡಳಿತಾವಧಿಯಲ್ಲಿ ಹಗರಣಗಳು ಆಗಿದ್ದರೆ ತನಿಖೆಗೆ ಮುಕ್ತ ಸ್ವಾಗತವಿದೆ‌. ಇದಕ್ಕಾಗಿ ಬಿಜೆಪಿ ಚಿಂತೆ ಮಾಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸವಾಲು ಹಾಕಿದ್ದಾರೆ.

ಶಿಕಾರಿಪುರಕ್ಕೆ ತೆರಳುವ ಮುನ್ನ ಸುದ್ದಿಗಾರರಿಗೆ ಭಾನುವಾರ ಪ್ರತಿಕ್ರಿಯಿಸಿದ ಅವರು, ಹಗರಣಗಳಿದ್ದರೆ ಪತ್ತೆ ಹಚ್ಚಿ ತನಿಖೆ ನಡೆಸಲಿ, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ. ಹಗರಣಗಳ ತನಿಖೆ ಮಾಡುತ್ತೇವೆ ಎಂಬ ಹೇಳಿಕೆಯಿಂದ ಬಿಜೆಪಿ ಹೆದರುವುದಿಲ್ಲ. ಆಡಳಿತದ ಚುಕ್ಕಾಣಿ ಹಿಡಿದ ಹೊಸತರಲ್ಲಿ ಹೀಗೆ ಹೇಳುವುದು ಸಹಜವೆಂದು ಹೇಳಿದ್ದಾರೆ.

ಕಾದು ನೋಡೋಣ..ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳು, ಐದು ಪ್ರಮುಖ ಗ್ಯಾರಂಟಿಗಳನ್ನು ಜಾರಿಗೊಳಿಸುವ ವಿಶ್ವಾಸವಿದೆ. ಮೊದಲ ಸಚಿವ ಸಂಪುಟ ಸಭೆಯಲ್ಲಿ ತಾತ್ವಿಕ ಒಪ್ಪಿಗೆ ನೀಡಿದೆ. ಮುಂದೇನು ಮಾಡುತ್ತಾರೆ ಎನ್ನುವುದು ಕಾದು ನೋಡೋಣ. ಈಗಲೇ ಆ ಬಗ್ಗೆ ಟೀಕೆ, ಟಿಪ್ಪಣಿ ಮಾಡುವುದು ಸರಿಯಲ್ಲ ಎಂದು ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net