ಹೆಲ್ಮೆಟ್ ಬದಲು ತಲೆಗೆ ಬಾಣಲೆ ಹಾಕಿಕೊಂಡು ಬೈಕ್​ ರೈಡ್ ನಡೆಸಿದ ಭೂಪ! ವಿಡಿಯೋ ವೈರಲ್​...Riding Bike

untitled-design-12-690b01228052e
Published on

ಬೆಂಗಳೂರು: ಬೆಂಗಳೂರು ಎಂದರೆ ನೆನಪಾಗುವುದೇ ಜನದಟ್ಟಣೆ, ಟ್ರಾಫಿಕ್​ ಹಾಗೂ ಎಚ್ಚರಿಕೆ ನೀಡಲು ನಿಂತಿರುವ ಪೊಲೀಸರು. ಈ ನಡುವೆಯೂ ಕೆಲವೊಂದು ವಾಹನ ಸವಾರರು ಸಂಚಾರ ಉಲ್ಲಂಘನೆ ಮಾಡುವುದನ್ನು ನಾವು ನೋಡಿರುತ್ತೇವೆ. ಆದರೆ, ಜನನಿಬಿಡ ರಸ್ತೆಯಲ್ಲಿ ವ್ಯಕ್ತಿಯೊಬ್ಬ ದ್ವಿಚಕ್ರ ವಾಹನದಲ್ಲಿ ಚಲಾಯಿಸುತ್ತಿದ್ದಾಗ ( Riding Bike) ಹೆಲ್ಮೆಟ್​ ಧರಿಸುವ ಬದಲು ತಲೆಗೆ ಬಾಣಲೆಯನ್ನು ಹಿಡಿದುಕೊಂಡು ಹೋಗುತ್ತಿರುವ ದೃಶ್ಯ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್​ ಆಗಿದೆ.

ವಿಡಿಯೋದಲ್ಲೇನಿದೆ?

ಜನನಿಬಿಡ ರಸ್ತೆಯಲ್ಲಿ ವಾಹನಗಳು ಸಂಚಾರ ನಡೆಸುತ್ತಿದ್ದು, ಈ ವೇಳೆ ಬೈಕ್​ನ ಹಿಂಬದಿ ಕುಳಿತಿದ್ದ ವ್ಯಕ್ತಿಯೊಬ್ಬ ಹೆಲ್ಮೆಟ್​ ಧರಿಸಿದೇ ಅಡುಗೆ ಮಾಡುವ ಬಾಣಲೆಯನ್ನು ತಲೆಯ ಮೇಲೆ ಇಟ್ಟುಕೊಂಡು ಪೊಲೀಸರನ್ನು ಯಾಮಾರಿಸಿ ಹೋಗುತ್ತಿರುವ ದೃಶ್ಯವನ್ನು ಕಾಣಬಹುದಾಗಿದೆ. ಈ ವೇಳೆ ಪಕ್ಕದಲ್ಲಿಯೇ ಇದ್ದಂತಹ ವಾಹನ ಸವಾರರೊಬ್ಬ ಈ ದೃಶ್ಯವನ್ನು ಸೆರೆಹಿಡಿದಿದ್ದಾನೆ.

ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆಯೇ ಮಡಿವಾಳ ಸಂಚಾರ ಪೊಲೀಸ್ ಇನ್ಸ್‌ಪೆಕ್ಟರ್ ಪ್ರತಿಕ್ರಿಯಿಸಿದ್ದು, ವಾಹನದ ನೋಂದಣಿ ಸಂಖ್ಯೆ ಹಾಗೂ ವಿಳಾಸವನ್ನು ಪತ್ತೆಹಚ್ಚಲಾಗಿದೆ. ನಿಯಮ ಉಲ್ಲಂಘಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಈ ವಿಡಿಯೋವನ್ನು ಗಮನಿಸಿದ ಸಾಮಾಜಿಕ ಮಾಧ್ಯಮದ ಬಳಕೆದಾರರು ವ್ಯಕ್ತಿಯ ಸೃಜನಶೀಲತೆ ಹಾಗೂ ಹಾಸ್ಯವನ್ನು ಬಣ್ಣಿಸಿದ್ದಾರೆ. ಒಬ್ಬ ಬಳಕೆದಾರರು ಬೆಂಗಳೂರಿನಲ್ಲಿ ಸಂಚಾರ ತುಂಬಾ ಹದಗೆಟ್ಟಿದೆ. ಅಡುಗೆ ಪಾತ್ರೆಗಳನ್ನು ರಕ್ಷಣಾತ್ಮಕ ಸಾಧನಗಳಾಗಿ ಬಳಸಲಾಗುತ್ತಿದೆ. ಮೊದಲು ಸುರಕ್ಷತೆ ನಂತರ ಉಪಹಾರ ಎಂದು ಕಮೆಂಟ್​ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರ ಜೀವನವು ನಿಮಗೆ ಚಲನ್ ನೀಡಿದಾಗ, ಕಡಾಯಿ ಪಡೆಯಿರಿ ಎಂದು ಪ್ರತಿಕ್ರಿಯಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net