

ಮುಂಬೈ: ಭಾರತದ ಬ್ಯಾಟಿಂಗ್ ಐಕಾನ್ ಮತ್ತು ಆಧುನಿಕ ಕ್ರಿಕೆಟ್ನ ಶ್ರೇಷ್ಠ ದಂಥಕತೆಯಾದ ವಿರಾಟ್ ಕೊಹ್ಲಿ(King Kohli), ಬುಧವಾರ, ನವೆಂಬರ್ 5 ರಂದು 37 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಅಲ್ಲದೆ, ಕಿಂಗ್ ಕೊಹ್ಲಿಯು 2008 ಆಗಸ್ಟ್ 18, ರಂದು ಶ್ರೀಲಂಕಾ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದರು.
ಇಂದು, ಕಿಂಗ್ ಕೊಹ್ಲಿಯು ಅಂತರರಾಷ್ಟ್ರೀಯ ಮಟ್ಟದಲ್ಲಿ ಒಂದೇ ಸ್ವರೂಪ ಮಾತ್ರ ಆಡುತ್ತಿದ್ದಾರೆ. ಕಳೆದ ವಿರಾಟ್ T20I ಮತ್ತು ಟೆಸ್ಟ್ಗಳಿಂದ ನಿವೃತ್ತರಾಗಿದ್ದಾರೆ. ಕ್ರಿಕೆಟ್ ವೃತ್ತಿ ಜೀವನದಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ. ವಿರಾಟ್ ಕೊಹ್ಲಿಯ ಬ್ಯಾಟ್ನಿಂದ ಇನ್ನಷ್ಟು ದಾಖಲೆಗಳಿಗಾಗಿ ಕಾಯುತ್ತಿರುವ ನಾವು, 37 ನೇ ಹುಟ್ಟುಹಬ್ಬದಂದು ಕಿಂಗ್ ಸಾಧಿಸಿದ 37 ಅದ್ಭುತ ದಾಖಲೆಗಳನ್ನು ನೋಡೋಣ ಬನ್ನಿ.
1) ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ಶತಕಗಳು - 51
2) ಎರಡನೇ ಅತಿ ಹೆಚ್ಚು ಅಂತರರಾಷ್ಟ್ರೀಯ ಶತಕಗಳು - 82 (ಟೆಸ್ಟ್: 30, ಏಕದಿನ: 51, ಟಿ20: 1)
3) ಏಕದಿನ ಪಂದ್ಯಗಳಲ್ಲಿ ವೇಗವಾಗಿ 14,000 ರನ್ ಗಳಿಸಿದ ಆಟಗಾರ
4) ಏಕದಿನ ಪಂದ್ಯಗಳಲ್ಲಿ ಚೇಸಿಂಗ್ ಮಾಡುವಾಗ ಅತಿ ಹೆಚ್ಚು ಶತಕ ಗಳಿಸಿದ ಆಟಗಾರ - 28
5) ಚೇಸಿಂಗ್ ಮಾಡುವಾಗ ಏಕದಿನ ಪಂದ್ಯದಲ್ಲಿ ಅತ್ಯಧಿಕ ಸರಾಸರಿ - 65.5
6) ಐಸಿಸಿ ವಿಶ್ವಕಪ್ 2023 ರಲ್ಲಿ ಅತಿ ಹೆಚ್ಚು ರನ್ - 765 ರನ್ಗಳು (ಇದು ಒಂದೇ ಆವೃತ್ತಿಗೆ ಅತಿಹೆಚ್ಚು ರನ್ಗಳಿಸಿದ ವಿಶ್ವ ದಾಖಲೆ)
7) ಟಿ20ಐಗಳಲ್ಲಿ 4,000 ರನ್ ಗಳಿಸಿದ ವಿಶ್ವದ ಮೊದಲ ಆಟಗಾರ
8) ಟಿ20ಐಗಳಲ್ಲಿ ಅತಿ ಹೆಚ್ಚು ಸರಣಿ ಶ್ರೇಷ್ಠ ಪ್ರಶಸ್ತಿಗಳು - 7
9) ಎಲ್ಲಾ ಸ್ವರೂಪಗಳಲ್ಲಿ ನಂಬರ್ 1 ಸ್ಥಾನ ಪಡೆದ ಏಕೈಕ ಭಾರತೀಯ ಬ್ಯಾಟ್ಸ್ಮನ್
10) ಟೆಸ್ಟ್ ಪಂದ್ಯಗಳಲ್ಲಿ ಅತ್ಯಂತ ಯಶಸ್ವಿ ಭಾರತೀಯ ನಾಯಕ - 68 ಪಂದ್ಯಗಳಲ್ಲಿ 40 ಗೆಲುವುಗಳು.
11) ಟೆಸ್ಟ್ ನಾಯಕನಾಗಿ ಅತಿ ಹೆಚ್ಚು ದ್ವಿಶತಕಗಳು - 7
12) ಟೆಸ್ಟ್ ಮಾದರಿಯಲ್ಲಿ ಭಾರತೀಯ ಬ್ಯಾಟ್ಸ್ಮನ್ನಿಂದ ಅತಿ ಹೆಚ್ಚು ದ್ವಿಶತಕಗಳು - 7
13) ತವರಿನಲ್ಲಿ ಟೆಸ್ಟ್ ಪಂದ್ಯಗಳಲ್ಲಿ ಅತ್ಯಧಿಕ ಗೆಲುವಿನ ಶೇಕಡಾವಾರು - ಶೇ. 77.41
14) ಟೆಸ್ಟ್ ವೃತ್ತಿಜೀವನದಲ್ಲಿ ಒಟ್ಟು ರನ್ಗಳು - 9,230
15) ಮೂರನೇ ಅತಿ ಹೆಚ್ಚು ಅಂತರರಾಷ್ಟ್ರೀಯ ರನ್ಗಳು - 27,673
16) 2010-2019 ರ ನಡುವೆ ಅತಿ ಹೆಚ್ಚು ಅಂತರರಾಷ್ಟ್ರೀಯ ರನ್ಗಳು (20,000 ಕ್ಕೂ ಹೆಚ್ಚು ರನ್ಗಳು)
17) 5 ಬಾರಿ ಐಸಿಸಿ ಟ್ರೋಫಿಗಳನ್ನು ಗೆದ್ದ ತಂಡದ ಭಾಗವಾಗಿದ್ದಾರೆ.
18) ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ರಲ್ಲಿ ಭಾರತಕ್ಕೆ ಅತಿ ಹೆಚ್ಚು ರನ್ - 747
19) ಅಂಡರ್ -19 ವಿಶ್ವಕಪ್ ವಿಜೇತ ನಾಯಕ (2008)
20) ಏಕದಿನ ಪಂದ್ಯದಲ್ಲಿ ಅತಿ ವೇಗದ ಶತಕ ಬಾರಿಸಿದ ಭಾರತೀಯ ಬ್ಯಾಟ್ಸ್ಮನ್ - 52 ಎಸೆತಗಳು
21) ಐಪಿಎಲ್ನಲ್ಲಿ ಅತಿ ಹೆಚ್ಚು ರನ್ಗಳು - 8,661
22) ಐಪಿಎಲ್ನಲ್ಲಿ ಅತಿ ಹೆಚ್ಚು 50 ಪ್ಲಸ್ ಸ್ಕೋರ್ಗಳು - 71
23) ಐಪಿಎಲ್ನಲ್ಲಿ ಅತಿ ಹೆಚ್ಚು ಬೌಂಡರಿಗಳು - 771
24) ಐಪಿಎಲ್ನಲ್ಲಿ ಅತಿ ಹೆಚ್ಚು ಬೌಂಡರಿಗಳು (ಬೌಂಡರಿ + ಸಿಕ್ಸರ್ಗಳು) - 1,000 ಕ್ಕೂ ಹೆಚ್ಚು
25) ಒಂದೇ ಐಪಿಎಲ್ ಋತುವಿನಲ್ಲಿ ಅತಿ ಹೆಚ್ಚು ರನ್ಗಳು - 973 (2016)
26) ಐಪಿಎಲ್ನಲ್ಲಿ ಸತತ 3 ಋತುಗಳಲ್ಲಿ 600 ಕ್ಕೂ ಹೆಚ್ಚು ರನ್ಗಳು (2023-2025)
27) ಐಪಿಎಲ್ ಸೀಸನ್ನಲ್ಲಿ ಗೆಲುವಿನ ಪಂದ್ಯಗಳಲ್ಲಿ ಅತಿ ಹೆಚ್ಚು 50+ ಸ್ಕೋರ್ಗಳು - 8
28) ಐಪಿಎಲ್ನಲ್ಲಿ (ಆರ್ಸಿಬಿ) ಒಂದು ತಂಡಕ್ಕೆ ಅತಿ ಹೆಚ್ಚು ಪಂದ್ಯಗಳು - 267
29) ಐಪಿಎಲ್ನಲ್ಲಿ ಒಂದೇ ತಂಡಕ್ಕಾಗಿ ಎಲ್ಲಾ ಋತುಗಳಲ್ಲಿ ಆಡಿದ ಮೊದಲ ಆಟಗಾರ (18 ಋತುಗಳು, ಆರ್ಸಿಬಿ)
30) ಟಿ20ಐಗಳಲ್ಲಿ ಭಾರತ ಪರ ಅತಿ ಹೆಚ್ಚು ರನ್ಗಳು - 13,543 ರನ್ಗಳು (ಎಲ್ಲಾ ಟಿ20 ಲೀಗ್ಗಳು ಸೇರಿ)
31) ಐಸಿಸಿ ಟಿ20 ವಿಶ್ವಕಪ್ನಲ್ಲಿ ಅತಿ ಹೆಚ್ಚು ರನ್ಗಳು - 1292
32) ಎಲ್ಲಾ ಸ್ವರೂಪಗಳಲ್ಲಿ ಒಟ್ಟು ರನ್ಗಳು - 26,000 ಕ್ಕೂ ಹೆಚ್ಚು ರನ್ಗಳು
33) ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ 300 ಕ್ಕೂ ಹೆಚ್ಚು ಕ್ಯಾಚ್ಗಳು
34) ಮೂರು ಬಾರಿ ಐಸಿಸಿ ವರ್ಷದ ಕ್ರಿಕೆಟಿಗ - 2017, 2018, 2023
35) ಐಸಿಸಿ ದಶಕದ ಪುರುಷರ ಆಟಗಾರ (2010-2020)
36) ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಪಂದ್ಯ ಪುರುಷೋತ್ತಮ ಪ್ರಶಸ್ತಿಗಳು - 69
37) ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಸರಣಿ ಪುರುಷೋತ್ತಮ ಪ್ರಶಸ್ತಿಗಳು - 21. (ಏಜೆನ್ಸೀಸ್)