ಇಂದಿನಿಂದ ಈ ರಾಶಿಯವರ ಜೀವನದಲ್ಲಿ ದೊಡ್ಡ ಟರ್ನಿಂಗ್ ಪಾಯಿಂಟ್! Astrology

Daily-horoscope-June-2-star-sign-astrology-zodiac-today-1290049
Published on

Astrology: ಕಾರ್ತಿಕ ಪೂರ್ಣಿಮೆಯ ರಾತ್ರಿ ಬಹಳ ವಿಶೇಷವಾಗಿದೆ. ಈ ದಿನದಂದು ಎಲ್ಲಾ ದೇವತೆಗಳು ಹಬ್ಬವನ್ನು ಆಚರಿಸಲು ಭೂಮಿಗೆ ಬರುತ್ತಾರೆ ಎಂದು ನಂಬಲಾಗಿದೆ. ನವೆಂಬರ್​ 5 ಬಹಳ ವಿಶೇಷವಾದ ದಿನವಾಗಿದ್ದರಿಂದ ಈ ರಾಶಿಯವರಿಗೆ ಉತ್ತಮ ಫಲವಿದೆ ಎಂದು ತಿಳಿದುಬಂದಿದೆ. ಈ ವೇಳೆ ಶುಕ್ರ ಗ್ರಹನು ರಾಶಿಗಳಲ್ಲಿ ಸಂಚಾರ ಮಾಡುವುದರಿಂದ ಈ 4 ರಾಶಿಗಳಿಗೆ ಬಹಳ ಶುಭದಿನವಾಗಿದೆ. ಹಾಗಿದ್ದರೆ ಆ ರಾಶಿಗಳು ಯಾವುದು? ಯಾವ ಫಲವಿದೆ ಎಂದು ನೋಡೋಣ ಬನ್ನಿ...

ಮೇಷ ರಾಶಿ

ಮೇಷ ರಾಶಿಯವರಿಗೆ ಈ ದಿನ ಶುಭ ಎಂದು ಸೂಚಿಸುತ್ತದೆ. ಈ ದಿನಗಳಲ್ಲಿ ಅವರ ಆಸೆಗಳು ಈಡೇರುತ್ತವೆ. ವ್ಯವಹಾರಗಳಲ್ಲಿ ಉತ್ತಮ ಲಾಭ ಕಾಣಬಹುದು. ಯಶಸ್ಸನ್ನು ಸಾಧಿಸಲು ಉತ್ತಮ ಸಮಯ ಇದಾಗಿದೆ. ಹೊಸ ಕೆಲಸಗಳನ್ನು ಪ್ರಾರಂಭಿಸಲು ನಿರ್ಧರಿಸುವವರಿಗೆ ಈ ದಿನ ಶುಭವಾಗಿದೆ. ದಿನಾಂತ್ಯದಲ್ಲಿ ಒಳ್ಳೆಯ ವಿಚಾರಗಳನ್ನು ಕೇಳಬಹುದು.

ಕರ್ಕಾಟಕ ರಾಶಿ

ಕರ್ಕಾಟಕ ರಾಶಿಯವರಿಗೆ ಈ ಹುಣ್ಣಿಮೆಯು ಶುಭದಾಯಕ ಎಂದು ಗುರುತಿಸಲಾಗಿದೆ. ಈ ದಿನಗಳಲ್ಲಿ ನಿರುದ್ಯೋಗಿಗಳು ಉದ್ಯೋಗ ಪಡೆಯುವ ಸಾಧ್ಯತೆ ಇದೆ. ಉದ್ಯಮಿಗಳು ಎದುರಿಸುತ್ತಿರುವ ದೊಡ್ಡ ತೊಂದರೆಗಳು ಅಂತಿಮಗೊಳ್ಳಬಹುದು. ಕೆಲಸದ ಸ್ಥಳದಲ್ಲಿ ಗೌರವ, ಬಡ್ತಿ ಸಿಗುವಂತಹ ಸಮಯ ಇದಾಗಿದ್ದು, ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುನ್ನ ಸ್ವಲ್ಪ ಜಾಗರೂಕರಾಗಿರಿ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರು, ಈ ದಿನಗಳಲ್ಲಿ ವೃತ್ತಿಜೀವನದಲ್ಲಿ ಪ್ರಗತಿಯನ್ನು ಕಾಣಬಹುದಾಗಿದೆ. ನಿಮ್ಮ ಪಾಲಕರ ಬೆಂಬಲವು ನಿಮ್ಮ ಯಶಸ್ಸಿಗೆ ಕಾರಣವಾಗಬಹುದು. ಇಂದಿನ ದಿನ ನೀವು ಗೌರವ ಮತ್ತು ಸಂಪತ್ತನ್ನು ಹೊಂದುತ್ತೀರಿ. ವಿದ್ಯಾರ್ಥಿಗಳಿಗೆ ಇದು ಯಶಸ್ಸಿನ ಸಮಯವಾಗಿದ್ದು, ಓದುವ ಛಲವನ್ನು ಎಂದಿಗೂ ಬಿಡಬೇಡಿ.

ಮೀನ ರಾಶಿ

ಈ ದಿನದಂದು ಮೀನ ರಾಶಿಯವರಿಗೆ ಸಂತೋಷ, ಸಮೃದ್ಧಿ ತರುವಂತಹ ಸಮಯ ಇದಾಗಿದೆ. ಇದು ಜೀವನದಲ್ಲಿ ಸಕರಾತ್ಮಕ ಬದಲಾವಣೆಗಳನ್ನು ತರಲು ಸಹಾಯ ಮಾಡುತ್ತದೆ. ಹಾಗೆಯೇ, ಸೋಮಾರಿತನ ನಿರ್ಲಕ್ಷ್ಯದಿಂದಾಗಿ ಒದಗಿ ಬಂದಂತಹ ಬದಲಾವಣೆಗಳನ್ನು ಕಳೆದುಕೊಳ್ಳಬೇಡಿ. ಹಾಗಾಗಿ ಕೆಲಸದ ಮೇಲೆ ಶ್ರದ್ಧೆ ವಹಿಸುವುದು ಉತ್ತಮ. (ಏಜೆನ್ಸೀಸ್​)ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net