

Fitness: ವಯಸ್ಸಾಗುತ್ತಿದ್ದಂತೆ ಜನರಲ್ಲಿ ಮಂಡಿ ನೋವು, ಆಯಾಸ, ಸುಸ್ತು ಈ ರೀತಿಯಾದಂತಹ ಅನುಭವಗಳನ್ನು ಅನುಭವಿಸುತ್ತಾರೆ. ಆದರೆ, ವ್ಯಾಯಾಮ ಇವೆಲ್ಲವನ್ನೂ ಸರಿದೂಗಿಸುವಂತಹ ವಿಧಾನವಾಗಿದೆ. ಇಂತಹ ಅಭ್ಯಾಸಗಳನ್ನು ಪ್ರತಿನಿತ್ಯ ನೀವು ಮಾಡುವುದರಿಂದ ನಿಮ್ಮ ಚಲನಶೀಲತೆಯಲ್ಲಿ ದೊಡ್ಡ ವ್ಯತ್ಯಾಸವನ್ನುಂಟು ಮಾಡುತ್ತದೆ. ಅಂದಹಾಗೆ, ಆಸ್ಟ್ರೇಲಿಯಾದ ಸಿಡ್ನಿಯಲ್ಲಿರುವ ಫಿಟ್ನೆಟ್ ತರಬೇತುದಾದ ಬ್ರೂಸ್ ಸ್ಕಾಟ್, ತಮ್ಮ ಇನ್ಸ್ಟಾಗ್ರಾಮ್ನಲ್ಲಿ ತಾವು 35 ವರ್ಷಗಳಿಂದಲೂ ಅಭ್ಯಾಸ ಮಾಡುತ್ತಿರುವಂತಹ ಜೀವನವನ್ನು ಬದಲಾಯಿಸುವಂತಹ ವ್ಯಾಯಾಮವೊಂದನ್ನು ಹಂಚಿಕೊಂಡಿದ್ದಾರೆ.
ಈ ವ್ಯಾಯಾಮ ನನ್ನ ಮೊದಲ ಶಿಕ್ಷಕರು ನನಗೆ ಕಲಿಸಿದ ಮೊದಲ ವ್ಯಾಯಾಮವಾಗಿದೆ. ಇದನ್ನು ನಾನು 35 ವರ್ಷಗಳಿಂದಲೂ ಮಾಡಿಕೊಂಡು ಬಂದಿದ್ದೇನೆ. ವರ್ಷದ 365 ದಿನಗಳೂ ಕೂಡಾ ಮಾಡುತ್ತೇನೆ. ಇದು ಈವರೆಗೂ ಕೆಲಸ ಮಾಡುತ್ತಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಅಪ್ಪು, ಟಪ್ಪು, ಪಪ್ಪು ಹೇಳಿಕೆ; ಸಿಎಂ ಯೋಗಿ ಕೋತಿಗಳ ಮಧ್ಯ ಕುಳಿತರೇ ಅವರನ್ನು ಯಾರೂ ಗುರುತಿಸಲ್ಲ ಎಂದು ಅಖಿಲೇಶ್ ತಿರುಗೇಟು| Akhilesh Yadav ಕ್ವಿ ಮೆಷಿನ್ ಎಂದು ಕರೆಯಲ್ಪಡುವ ಸ್ಕಾಟ್, ಈ ಚಲನೆಯ ಮೂಲಭೂತ ಅಂಶಗಳನ್ನು ತಿಳಿಸಿದ್ದಾರೆ. ಮೊದಲು ಮೊಣಕಾಲಿನಲ್ಲಿ ಡಬಲ್ ಬೌನ್ಸ್ ಅನ್ನು ಕಂಡುಹಿಡಿಯಿರಿ. ಮೊಣಕಾಳುಗಳ ಮೂಲಕ ನನ್ನ ತೂಕವನ್ನು ಇಳಿಸಿಕೊಂಡಿದ್ದೇನೆ. ಈ ರೀತಿಯಾಗಿ ವ್ಯಾಯಾಮ ಮಾಡುವುದರಿಂದ ಇದು ನಡೆಯಲು ಸ್ನಾಯುಗಳನ್ನು ಬಲಪಡಿಸುತ್ತದೆ. ಇದರಿಂದ ಅಸ್ಥಿರಜ್ಜುಗಳು, ಸ್ನಾಯುರಜ್ಜುಗಳು ಸರಿಯಾಗಿ ಕಾರ್ಯನಿರ್ವಹಿಸುತ್ತವೆ.
ಸ್ಕಾಟ್ ವ್ಯಾಯಾಮದ ಬಗ್ಗೆ ವಿವರಿಸಿದ್ದು, ಇದು ಕೇವಲ ಕಾಲುಗಳಿಗೆ ಮಾತ್ರ ಸೀಮಿತವಾಗಿಲ್ಲ. ಇದು ದೇಹಕ್ಕೂ ಒಳ್ಳೆಯ ಪರಿಣಾಮವನ್ನು ನೀಡುತ್ತದೆ. ಅಂದರೆ, ಕಣಕಾಲುಗಳು, ಮೊಣಕಾಲುಗಳು, ಸೊಂಟ, ಬೆನ್ನುಮೂಳೆ, ತೋಳುಗಳ ಮೂಲಕ ಉಸಿರಾಡಲು ಪ್ರಾರಂಭಿಸುತ್ತದೆ.
ಸ್ಕಾಟ್ ವ್ಯಾಯಾಗಳ ಪ್ರಯೋಜನದ ಬಗ್ಗೆ ಮಾತನಾಡಿದ್ದು, ಇದು ಇಡೀ ದೇಹದಾದ್ಯಂತ ರಕ್ತವನ್ನು ಪರಿಚಲನೆ ಮಾಡುತ್ತದೆ. ಚಯಾಪಚಯ ಕ್ರಿಯೆಗಳನ್ನು ಮಾಡಲು ಉ್ತತೇಜಿಸುತ್ತದೆ. ಮನಸ್ಸನ್ನು ಶಾಂತವಾಗಿರಿಸುತ್ತದೆ ಎಂದಿದ್ದಾರೆ.
ಈ ವ್ಯಾಯಾಮವು ಸರಳವಾದರೂ ಚಲನೆ, ಸ್ಥಿತಿಸ್ಥಾಪಕತ್ವ ಮತ್ತು ಮನಸ್ಸು ಮತ್ತು ದೇಹದ ನಡುವಿನ ಸಾಮರಸ್ಯವನ್ನು ಒತ್ತಿಹೇಳುತ್ತದೆ . 40 ರ ಮೇಲ್ಪಟ್ಟ ವಯಸ್ಸಿನವರು ಇದನ್ನು ಪ್ರತಿನಿತ್ಯ ಮಾಡುವುದರಿಂದ ಚೈತನ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಸ್ಕಾಟ್ ತಿಳಿಸಿದ್ದಾರೆ. (ಏಜೆನ್ಸೀಸ್)ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.