ರೈಲಿನಲ್ಲಿ ಊಟ ಆರ್ಡರ್ ಮಾಡಿದ ಪ್ರಯಾಣಿಕ: ಪಾರ್ಸೆಲ್​ ತೆರೆದು ನೋಡಿ ಬೆಚ್ಚಿಬಿದ್ದ..!

cockroch at railway food
Published on

ದೆಹಲಿ: ಪ್ರಯಾಣಿಕರಿಗೆ ಗುಣಮಟ್ಟದ ಊಟ ನೀಡುವಲ್ಲಿ ಇಂಡಿಯನ್ ರೈಲ್ವೇ ಕೇಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್(IRCTC) ಸಂಪೂರ್ಣ ವಿಫಲವಾಗಿದೆ ಎಂಬುದಕ್ಕೆ ಮತ್ತೊಂದು ಘಟನೆ ಸಾಕ್ಷಿಯಾಗಿದೆ.

ಇದನ್ನೂ ಓದಿ: ಕಪಿಲ್​ ದೇವ್​ ಬಳಗದ 1983ರ ವಿಶ್ವವಿಕ್ರಮಕ್ಕೆ 40ರ ಸಂಭ್ರಮ

ಇತ್ತೀಚೆಗೆ, ಉತ್ತರ ಪ್ರದೇಶದ ಪ್ರಯಾಣಿಕನೊಬ್ಬ ತಮ್ಮ ಪ್ರಯಾಣದ ವೇಳೆ ವೆಜ್ ಥಾಲಿಯನ್ನು ಆರ್ಡರ್ ಮಾಡಿದ್ದಾನೆ. ಆದರೆ ಪಾರ್ಸೆಲ್ ತೆರೆದು ನೋಡಿದಾಗ ಪ್ರಯಾಣಿಕ ಶಾಕ್ ಆಗಿದ್ದಾನೆ. ಏಕೆಂದರೆ ಆತ ಆರ್ಡರ್​​ ಮಾಡಿದ ವೆಜ್ ಥಾಲಿಯಲ್ಲಿ ಜಿರಳೆ ಕಂಡು ಬಂದಿದೆ.

ಕೂಡಲೇ ಪ್ರಯಾಣಿಕನು ಆ ವೆಜ್​ ಥಾಲಿಯ ಫೋಟೋ ತೆಗೆದು ಟ್ವಿಟ್ಟರ್​​​ನಲ್ಲಿ, ನಾನು ಆರ್ಡರ್​ ಮಾಡಿದ ಊಟದಲ್ಲಿ ಜಿರಳೆ ದೊರೆತಿದೆ. ನನಗೆ ನನ್ನ ಹಣವನ್ನು ಮರುಪಾವತಿಸಿ, ನಿಮ್ಮ ಸರ್ವಿಸ್​ ಅತ್ಯಂತ ಕೆಟ್ಟದ್ದಾಗಿದೆ ಎಂದು ಕೇಟರಿಂಗ್​​ದವರನ್ನು ತರಾಟೆಗೆ ತೆಗೆದುಕೊಂಡಿದ್ದಾನೆ.

ಇದನ್ನೂ ಓದಿ: ಬೆಕ್ಕುಗಳಿಗೆ ಆಹಾರ ಹಾಕಿ ಸಾಕುತ್ತಿದ್ದ ಯುವತಿಗೆ ಹಿಗ್ಗಾಮುಗ್ಗಾ ಹೊಡೆದ ನೆರೆಮನೆಯವರು!

ಆದರೆ ಐಆರ್​​ಸಿಟಿಸಿ ಇದಕ್ಕೆ ಪ್ರತಿಕ್ರಿಯೆ ನೀಡಿದ್ದು, ನಿಮ್ಮ ದೂರನ್ನು ದಾಖಲಿಸಲಾಗಿದೆ. ನಿಮ್ಮ ದೂರು ಸಂಖ್ಯೆಯನ್ನು ಎಸ್​​​ಎಂಎಸ್ ಮೂಲಕ ಕಳುಹಿಸಲಾಗಿದೆ ಎಂದು ಉತ್ತರ ನೀಡಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net