ಬೇರೊಬ್ಬನಿಗೆ ಪತ್ನಿಯನ್ನು ಮಾರಾಟ ಮಾಡಿ ಮದುವೆ ಮಾಡಿಸಿದ ಗಂಡ! ನಂತರ ನಡೆದದ್ದಿಷ್ಟು…

Husband Sales Wife
Published on

ಭುವನೇಶ್ವರ್​: ವ್ಯಕ್ತಿಯೊಬ್ಬತನ್ನ ಪತ್ನಿ (Wife)ಯನ್ನು ಮತ್ತೊಬ್ಬ ವ್ಯಕ್ತಿಗೆ ಮಾರಾಟ ಮಾಡಿರುವ ಆತಂಕಕಾರಿ ಘಟನೆ ಒಡಿಶಾದ ಕಲಹಂಡಿ ಜಿಲ್ಲೆಯಲ್ಲಿ ನಡೆದಿದೆ. ಪತ್ನಿಯನ್ನು (Man sells wife) ಮಾರಾಟ ಮಾಡಿದ ಬಳಿಕ ಬಲವಂತವಾಗಿ ಮದುವೆಯನ್ನೂ ಮಾಡಿಸಿದ್ದಾನೆ.

ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ ಖೀರಾ ಬೆರುಕ್ ಎಂಬಾತ ತನ್ನ ಪತ್ನಿ ಪೂರ್ಣಿಮಾ ಭೋಯ್ ಜೊತೆ ಕೆಲಸಕ್ಕೆಂದು ಅಕ್ಟೋಬರ್ 30 ರಂದು ದೆಹಲಿಗೆ ಹೊರಟನು. ದೆಹಲಿಗೆ ಹೋದ ಎರಡೇ ದಿನದಲ್ಲಿ ಹಣಕ್ಕಾಗಿ ತನ್ನ ಪತ್ನಿಯನ್ನು ಆರೋಪಿ ಬೆರುಕ್​ ಮತ್ತೊಬ್ಬ ವ್ಯಕ್ತಿಗೆ ಮಾರಾಟ ಮಾಡಿದ್ದಾನೆ. ಭಾರಿ ಮೊತ್ತದ ಹಣ ಪಡೆದ ಬಳಿಕ ಪತ್ನಿಯನ್ನು ಆತನೊಂದಿಗೆ ಮದುವೆ ಸಹ ಮಾಡಿಸಿದ್ದಾನೆ.

ನವೆಂಬರ್​ 5ರಂದು ತನ್ನ ತಂದೆ ಕುಲಮಣಿ ಭೋಯ್​ಗೆ ಕರೆ ಮಾಡಿದ ಪೂರ್ಣಿಮಾ ಭೋಯ್, ತನ್ನ ಗಂಡನ ಕೃತ್ಯವನ್ನು ಹೇಳಿದ್ದಾಳೆ. ಮಗಳ ಕಷ್ಟ ಕೇಳಿದ ತಂದೆ ತಕ್ಷಣ ಬೆರುಕ್​ ವಿರುದ್ಧ ನಾರ್ಲಾ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ನಾರ್ಲಾ ಪೊಲೀಸರು ಬೆರುಕ್​ನನ್ನು ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net