More

    ‘ಪುಷ್ಪ’ ಚಿತ್ರದ ಮೊದಲ ವಾರ್ಷಿಕೋತ್ಸವಕ್ಕೆ ಚಿತ್ರತಂಡದಿಂದ ಸ್ಪೆಷಲ್​ ಗಿಫ್ಟ್​​ … ಏನು ಗೊತ್ತಾ?

    ಹೈದರಾಬಾದ್​: ಕಳೆದ ವರ್ಷ ಬಿಡುಗಡೆಯಾಗಿ ಬ್ಲಾಕ್​ಬಸ್ಟರ್​ ಆಗಿತ್ತು ಅಲ್ಲು ಅರ್ಜುನ್​ ಅಭಿನಯದ ‘ಪುಷ್ಪ’. 2021ರ ಡಿಸೆಂಬರ್​ 17ರಂದು ಬಿಡುಗಡೆಯಾದ ಚಿತ್ರವು, ಸದ್ಯದಲ್ಲೇ ಒಂದು ವರ್ಷ ಪೂರೈಸಲಿದೆ. ಈ ಮೊದಲ ಆನಿವರ್ಸರಿಯ ಅಂಗವಾಗಿ ಚಿತ್ರತಂಡವು ಅಭಿಮಾನಿಗಳಿಗೆ ಒಂದು ಸ್ಪೆಷಲ್​ ಗಿಫ್ಟ್​ ಕೊಡುವುದಕ್ಕೆ ಸಜ್ಜಾಗಿದೆ.

    ಇದನ್ನೂ ಓದಿ: ವರ್ಷದ ಕೊನೆಯ ಚಿತ್ರವಾಗಿ ಬಿಡುಗಡೆಯಾಗಲಿದೆ ಧನಂಜಯ್​ ಅಭಿನಯದ ‘ಜಮಾಲಿಗುಡ್ಡ

    ಅಂದಹಾಗೆ, ಚಿತ್ರತಂಡದವರು ಅಭಿಮಾನಿಗಳಿಗೆ ಕೊಡುತ್ತಿರುವ ಗಿಫ್ಟ್​ ಏನು ಗೊತ್ತಾ? ‘ಪುಷ್ಪ 2’ ಚಿತ್ರದ ಟೀಸರ್​. ಈಗಾಗಲೇ ‘ಪುಷ್ಪ 2’ ಚಿತ್ರದ ಶೂಟಿಂಗ್ ಪ್ರಾರಂಭವಾಗಿದ್ದು ಗೊತ್ತೇ ಇದೆ. ಹೀಗೆ ಚಿತ್ರೀಕರಣವಾದ ದೃಶ್ಯಗಳಲ್ಲಿ ಒಂದು ನಿಮಿಷ ಅವಧಿಯ ಒಂದು ಟೀಸರ್​ ಕಟ್​ ಮಾಡಿ, ಚಿತ್ರದ ಮೊದಲ ವಾರ್ಷಿಕೋತ್ಸವದ ಅಂಗವಾಗಿ ಬಿಡುಗಡೆ ಮಾಡುವುದು ಚಿತ್ರದ ಐಡಿಯಾ. ಒಂದು ಕಡೆ ಗಿಫ್ಟ್​ ಕೊಟ್ಟಂತೆಯೇ ಆಗುತ್ತದೆ. ಇನ್ನೊಂದು ಕಡೆ, ಚಿತ್ರದಲ್ಲೇನಿರಲಿದೆ ಎಂಬುದನ್ನು ತೋರಿಸಿದಂತೆಯೂ ಆಗುತ್ತದೆ ಎಂಬ ದೃಷ್ಟಿಯಿಂದ ಈ ಟೀಸರ್​ ಬಿಡುಗಡೆ ಮಾಡಲಾಗುತ್ತಿದೆಯಂತೆ.

    ಅಂದಹಾಗೆ, ಅಲ್ಲು ಅರ್ಜುನ್​ ಸದ್ಯಕ್ಕೆ ಫ್ಯಾಮಿಲಿಯ ಜತೆಗೆ ದಕ್ಷಿಣ ಆಫ್ರಿಕಾದಲ್ಲಿ ರಜೆ ಕಳೆಯುತ್ತಿದ್ದು, ಸದ್ಯದಲ್ಲೇ ವಾಪಸ್ಸಾಗಲಿದ್ದಾರಂತೆ. ಬ್ಯಾಂಕಾಕ್​ನಲ್ಲಿ ಚಿತ್ರೀಕರಣ ಶುರುವಾಗಿದ್ದು, ಅದರಲ್ಲಿ ಭಾಗವಹಿಸಲಿದ್ದಾರಂತೆ. ಮುಂದಿನ ಕೆಲವು ದಿನಗಳ ಕಾಲ ಮಹತ್ವದ ದೃಶ್ಯಗಳನ್ನು ಚಿತ್ರೀಕರಿಸಿ, ಅದರಲ್ಲಿ ಟೀಸರ್​  ಕಟ್​ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ.

    ಇದನ್ನೂ ಓದಿ: ಶಾರುಖ್‌ಗೆ ವಿಮಾನ ನಿಲ್ದಾಣದಲ್ಲೇ ಮಧ್ಯರಾತ್ರಿಯಿಂದ ಬೆಳಗ್ಗೆವರೆಗೆ ‘ಬಂಧನ’; ಕಾರಣ ಮಾತ್ರ ವಿಚಿತ್ರ …

    ಈ ಮಧ್ಯೆ, ‘ಪುಷ್ಪ 1’ ಚಿತ್ರವು ಸದ್ಯದಲ್ಲೇ ರಷ್ಯಾದಲ್ಲಿ ಬಿಡಗುಡೆಯಾಗಲಿದ್ದು, ಅಲ್ಲಿ ಚಿತ್ರವನ್ನು ಪ್ರಚಾರ ಮಾಡುವುದಕ್ಕೆ ಅಲ್ಲು ಅರ್ಜುನ್​ ಹೋಗಲಿದ್ದಾರಂತೆ. ಅಲ್ಲಿಂದ ವಾಪಸ್ಸಾದ ನಂತರ ‘ಪುಷ್ಪ 2’ ಚಿತ್ರದ ಚಿತ್ರೀಕರಣದಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳಲಿದ್ದಾರಂತೆ. ಅಲ್ಲು ಅರ್ಜುನ್​, ಧನಂಜಯ್​, ರಶ್ಮಿಕಾ ಮಂದಣ್ಣ, ಸುನೀಲ್​, ಅನಸೂಯ ಭಾರದ್ವಾಜ್, ಫಹಾದ್​ ಫಾಜಿಲ್​​ ಮುಂತಾದವರು ನಟಿಸಿರುವ ಈ ಚಿತ್ರವನ್ನು ಸುಕುಮಾರ್​ ನಿರ್ದೇಶನ ಮಾಡುತ್ತಿದ್ದು, ಮುಂದಿನ ವರ್ಷದ ಡಿಸೆಂಬರ್​ನಲ್ಲಿ ಚಿತ್ರ ಬಿಡುಗಡೆಯಾಗಲಿದೆ.

    ಕೋಟಿ ಕೋಟಿ ಬಾಚಿಕೊಳ್ಳುತ್ತಿರುವ ಕಾಂತಾರ ಸಿನಿಮಾ ಮತ್ತೊಂದು ವಿವಾದದ ಸುಳಿಯಲ್ಲಿ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts