More

    ವರ್ಷದ ಕೊನೆಯ ಚಿತ್ರವಾಗಿ ಬಿಡುಗಡೆಯಾಗಲಿದೆ ಧನಂಜಯ್​ ಅಭಿನಯದ ‘ಜಮಾಲಿಗುಡ್ಡ’

    ಬೆಂಗಳೂರು: ಈಗಾಗಲೇ 2022ರಲ್ಲಿ ಧನಂಜಯ್​ ಅಭಿನಯದ 5 ಚಿತ್ರಗಳು ಬಿಡುಗಡೆಯಾಗಿವೆ. ’21 ಅವರ್ಸ್​’ನಿಂದ ಪ್ರಾರಂಭವಾದ ಈ ವರ್ಷದಲ್ಲಿ ‘ಬೈರಾಗಿ’, ‘ಮಾನ್ಸೂನ್​ ರಾಗ’, ‘ತೋತಾಪುರಿ’, ‘ಹೆಡ್​-ಬುಷ್​’ ಚಿತ್ರಗಳು ಬಿಡುಗಡೆಯಾಗಿವೆ. ಈಗ ಅವರ ಇನ್ನೊಂದು ಚಿತ್ರ ಬಿಡುಗಡೆಯಾಗಲಿದ್ದು, ಅದು ಈ ವರ್ಷದ ಕೊನೆಯ ಚಿತ್ರವಾಗಲಿದೆ ಎಂಬುದೇ ವಿಶೇಷ. ಅದೇ ‘ಒನ್ಸ್​ ಅಪಾನ್​ ಎ ಟೈಮ್​ ಇನ್​ ಜಮಾಲಿಗುಡ್ಡ’.

    ಇದನ್ನೂ ಓದಿ: ತಾಯಿಯಾದ ಸಂತಸದಲ್ಲಿ ಬಿಪಾಶಾ; ಹೆಣ್ಣು ಮಗು ಜನಿಸುತ್ತಿದ್ದಂತೆ ಹೆಸರಿಟ್ಟ ನಟಿ!

    ಎಲ್ಲ ಅಂದುಕೊಂಡಂತೆ ಆಗಿದ್ದರೆ, ‘ಒನ್ಸ್​ ಅಪಾನ್​ ಎ ಟೈಮ್​ ಇನ್​ ಜಮಾಲಿಗುಡ್ಡ’ ಚಿತ್ರವು ಸೆ. 9ರಂದು ರಾಜ್ಯಾದ್ಯಂತ ಬಿಡುಡೆಯಾಗಬೇಕಿತ್ತು. ಚಿತ್ರತಂಡದವರು ಅಧಿಕೃತ ದಿನಾಂಕವನ್ನೂ ಘೋಷಿಸಿದ್ದರು. ಕಾರಣಾಂತರಗಳಿಂದ ಚಿತ್ರ ಮುಂದೂಡಲ್ಪಟ್ಟು, ಡಿ. 30ಕ್ಕೆ ಬಿಡುಗಡೆಯಾಗುತ್ತಿದೆ. ಈ ಮೂಲಕ ಚಿತ್ರವು ವರ್ಷದ ಕೊನೆಯ ಚಿತ್ರವಾಗಲಿದೆ.

    ಈ ವರ್ಷ ಧನಂಜಯ್​ ಅಭಿನಯದ ಬೇರೆಬೇರೆ ಜಾನರ್​ನ ಚಿತ್ರಗಳು ಬಿಡುಗಡೆಯಾಗಿವೆ. ‘ಒನ್ಸ್​ ಅಪಾನ್​ ಎ ಟೈಮ್​ ಇನ್​ ಜಮಾಲಿಗುಡ್ಡ’ ಚಿತ್ರವು ಹೊಸ ಪ್ರಯತ್ನವಾಗಿದ್ದು, ಧನಂಜಯ್‌, ಮೊದಲ ಬಾರಿಗೆ ಒಂದು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ. ಕನ್ನಡ ಹಾಗೂ ತೆಲುಗಿನಲ್ಲಿ ತೆರೆಗೆ ಬರುತ್ತಿರುವ ಈ ಚಿತ್ರದಲ್ಲಿ ಧನಂಜಯ್​ಗೆ ನಾಯಕಿಯಾಗಿ ಅದಿತಿ ಪ್ರಭುದೇವ ನಟಿಸುತ್ತಿದ್ದಾರೆ.

    ಇದನ್ನೂ ಓದಿ: ಬಾಲಿವುಡ್​ ಚಿತ್ರ ನಿರ್ದೇಶನಕ್ಕೆ ನೋ ಎಂದ ರಿಷಭ್; ಕನ್ನಡದಲ್ಲಿ ನಿರ್ದೇಶನ ಮಾಡುವುದಾಗಿ ಹೇಳಿಕೆ …

    ಧನಂಜಯ್​ ಮತ್ತು ಅದಿತಿ ಜತೆಗೆ ಬಾಲನಟಿ ಪ್ರಾಣ್ಯ ರಾವ್​, ಭಾವನಾ ರಾಮಯ್ಯ, ಯಶ್​ ಶೆಟ್ಟಿ ಮುಂತಾದವರು ಕಾಣಿಸಿಕೊಂಡಿದ್ದಾರೆ. ಕುಶಾಲ್‌ ಗೌಡ ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದು, ‘ಸಾಗಿದೆ’ ಎಂಬ ಹಾಡು ಈಗಾಗಲೇ ಜನಪ್ರಿಯವಾಗಿದೆ. ಶ್ರೀಹರಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.

    ನ್ಯಾಯಾಲಯಕ್ಕೆ ತಲೆಬಾಗಿದ ‘ಕಾಂತಾರ’ ಚಿತ್ರತಂಡ; ಯೂಟ್ಯೂಬ್​ನಿಂದ ‘ವರಾಹ ರೂಪಂ’ ಹಾಡು ಡಿಲೀಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts