More

    ನ್ಯಾಯಾಲಯಕ್ಕೆ ತಲೆಬಾಗಿದ ‘ಕಾಂತಾರ’ ಚಿತ್ರತಂಡ; ಯೂಟ್ಯೂಬ್​ನಿಂದ ‘ವರಾಹ ರೂಪಂ’ ಹಾಡು ಡಿಲೀಟ್

    ಬೆಂಗಳೂರು: ಅನುಮತಿ ಇಲ್ಲದೆ ‘ಕಾಂತಾರ’ ಚಿತ್ರದ ‘ವರಾಹ ರೂಪಂ’ ಹಾಡನ್ನು ಎಲ್ಲೂ ಬಳಸುವಂತಿಲ್ಲ ಎಂದು ಕೇರಳದ ಕೋರ್ಟ್​ ಆದೇಶ ನೀಡಿದ ಹಿನ್ನೆಲೆಯಲ್ಲಿ ಯೂಟ್ಯೂಬ್ ಸೇರಿದಂತೆ ಹಲವು ವೇದಿಕೆಗಳಿಂದ ಹಾಡನ್ನು ತೆಗೆಯಲಾಗಿದೆ.

    ಇದನ್ನೂ ಓದಿ: ಜಾಕ್​ಲಿನ್​ರನ್ನು ಯಾಕೆ ಇನ್ನೂ ಅರೆಸ್ಟ್​ ಮಾಡಿಲ್ಲ: ದೆಹಲಿ ಕೋರ್ಟ್​ ಪ್ರಶ್ನೆ

    ರಿಷಭ್​ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ‘ಕಾಂತಾರ’ ಚಿತ್ರದಲ್ಲಿರುವ ‘ವರಾಹ ರೂಪಂ’ ಹಾಡನ್ನು ‘ನವರಸಂ’ ಎಂಬ ಮಲಯಾಳಂ ಹಾಡಿನಿಂದ ಯಥಾವತ್ತಾಗಿ ಎರವಲು ಪಡೆಯಲಾಗಿದೆ ಎಂದು ಸುದ್ದಿಯಾಗಿತ್ತು. ಈ ಹಾಡನ್ನು ಮಲಯಾಳಂನ ಜನಪ್ರಿಯ ಬ್ರಾಂಡ್​ ಥಾಯ್ಕುಡಂ ಬ್ರಿಡ್ಜ್​ ರೂಪಿಸಿದ್ದು, ಚಿತ್ರತಂಡದವರ ಮೇಲೆ ಕೃತಿಚೌರ್ಯದ ಆರೋಪ ಹೊರಿಸಿತ್ತು. ಹಾಡನ್ನು ಬಳಿಸಿದ್ದಕ್ಕೆ ಕ್ರೆಡಿಟ್​ ಕೊಡಬೇಕು, ಇಲ್ಲ ಹಾಡನ್ನು ಬಳಸವುದಕ್ಕೆ ಅನುಮತಿ ನೀಡಬಾರದು ಎಂದು ಥಾಯ್ಕುಡಂ ಬ್ರಿಡ್ಜ್​, ಕೋರ್ಟ್​ಗೆ ಮನವಿ ಮಾಡಿತ್ತು.

    ಅರ್ಜಿ ವಿಚಾರಣೆ ನಡೆಸಿದ ಕೇರಳದ ಕೋರ್ಟ್​ ‘ವರಾಹ ರೂಪಂ …’ ಹಾಡಿನ ಮೇಲೆ ನಿರ್ಬಂಧ ಹೇರಿತ್ತು. ‘ಯೂಟ್ಯೂಬ್ ಸೇರಿದಂತೆ ಯಾವುದೇ ಪ್ಲಾಟ್​ಫಾರ್ಮ್​ಗಳಲ್ಲಿ ‘ಕಾಂತಾರ’ ಚಿತ್ರದ ‘ವರಾಹ ರೂಪಂ …’ ಹಾಡನ್ನು ಒಪ್ಪಿಗೆ ಇಲ್ಲದೆ ಬಳಸಬಾರದು’ ಎಂದು ಆದೇಶ ಹೊರಡಿಸಿತ್ತು.

    ಇದನ್ನೂ ಓದಿ: ಪುಷ್ಪ ಚಿತ್ರದ​ ಕಲೆಕ್ಷನ್​​ ರೆಕಾರ್ಡ್​ ಬ್ರೇಕ್ ಮಾಡಿದ ಕಾಂತಾರ: ಪುಷ್ಪರಾಜ್ ಎದುರು ಗೆದ್ದು ಬೀಗಿದ ಡಿವೈನ್​​​​ ಸ್ಟಾರ್

    ಇದಕ್ಕೆ ತಲೆ ಬಾಗಿರುವ ಚಿತ್ರತಂಡವು, ದೊಡ್ಡ ಸೆನ್ಸೇಷನ್​ ಹುಟ್ಟುಹಾಕಿದ್ದ ‘ವರಾಹ ರೂಪಂ’ ಹಾಡನ್ನು ಯೂಟ್ಯೂಬ್​ನ ಹೊಬಾಳೆ ಫಿಲಂಸ್​ನ ಚಾನಲ್​ ಸೇರಿದಂತೆ ಮ್ಯೂಸಿಕ್ ಆ್ಯಪ್​ಗಳಾದ ಸಾವನ್ ಮುಂತಾದ ಕಡೆಗಳಿಂದ ಹಾಡನ್ನು ಡಿಲೀಟ್​ ಮಾಡಿದೆ. ಇನ್ನು ಮುಂದೆ, ‘ವರಾಹ ರೂಪಂ’ ಹಾಡು ಯೂಟ್ಯೂಬ್​ ಆಗಲೀ ಅಥವಾ ಮಿಕ್ಕ ಹಾಡುಗಳ ಆಪ್​ಗಳಲ್ಲಿ ಲಭ್ಯವಿರುವುದಿಲ್ಲ.

    ರಣಬೀರ್​-ಆಲಿಯಾ ಮುದ್ದಿನ ಮಗಳನ್ನು ನೋಡೋಕೆ ಯಾರಿಗೂ ಅನುಮತಿ ಇಲ್ಲ … ಯಾಕೆ ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts