More

    ಪುಷ್ಪ ಚಿತ್ರದ​ ಕಲೆಕ್ಷನ್​​ ರೆಕಾರ್ಡ್​ ಬ್ರೇಕ್ ಮಾಡಿದ ಕಾಂತಾರ: ಪುಷ್ಪರಾಜ್ ಎದುರು ಗೆದ್ದು ಬೀಗಿದ ಡಿವೈನ್​​​​ ಸ್ಟಾರ್

    ಬೆಂಗಳೂರು: ಕಲೆಕ್ಷನ್ ವಿಷಯದಲ್ಲಿ ಅಲ್ಲು ಅರ್ಜುನ್ (Allu Arjun) ನಟನೆಯ ಪುಷ್ಪ ಸಿನಿಮಾವನ್ನು ಕೂಡ ಇದೀಗ ರಿಷಭ್ ಶೆಟ್ಟಿ (Rishab Shetty) ನಟನೆಯ ಕಾಂತಾರ (Kantara) ಸಿನಿಮಾ ಹಿಂದಿಕ್ಕಿದೆ. ಪುಷ್ಪರಾಜ್ ಎದುರು “ಮೈ ಝುಕೂಂಗಾ ನಹಿ” ಎಂದು ಬೀಗಿದ್ದಾನೆ ಡಿವೈನ್​​​​ ಸ್ಟಾರ್!

    ಪುಷ್ಪ (Pushpa) ಚಿತ್ರ ಬಿಡುಗಡೆಯಾದಾಗಿನಿಂದ ಕೊನೆಯ ಪ್ರದರ್ಶನದವರೆಗೆ ಲೈಫ್​​​ ಟೈಮ್ ಗಳಿಸಿದ್ದು 355ರಿಂದ 365 ಕೋಟಿ ರೂಪಾಯಿ. ಆದರೆ ಕಾಂತಾರ ಚಿತ್ರ ನಲವತ್ತೆರಡೇ ದಿನಗಳಲ್ಲಿ 355 ಕೋಟಿ 19 ಲಕ್ಷ ರೂಪಾಯಿ ಗಳಿಸಿ, ಪುಷ್ಪದ ಕಲೆಕ್ಷನ್​​ ರೆಕಾರ್ಡನ್ನು​ ಬ್ರೇಕ್ ಮಾಡಿದೆ.

    ವಿಕಿಪೀಡಿಯ ಮಾಹಿತಿ ಪ್ರಕಾರ ಕಾಂತಾರ ಇದುವರೆಗೆ 355 ಕೋಟಿ 19 ಲಕ್ಷ ಕಲೆಕ್ಷನ್ ಮಾಡಿದೆ. ಈಗಾಗಲೇ  ಕೆಜಿಎಫ್​ ಚಿತ್ರದ ದಾಖಲೆಯನ್ನು ಮುರಿದಿರುವ ಕಾಂತಾರ ಈಗ ಪುಷ್ಪ ಚಿತ್ರದ ದಾಖಲೆಯನ್ನೂ ಉಡೀಸ್ ಮಾಡಿದೆ.

    ಕೆಜಿಎಫ್​-1 (KGF Chapter 1) ಸಿನಿಮಾದ ಲೈಫ್​ಟೈಮ್ ಕಲೆಕ್ಷನ್ 250 ಕೋಟಿ ರೂಪಾಯಿ ಆಗಿತ್ತು. ಆದರೆ ಅಖಾಡಕ್ಕಿಳಿದ ಮೂರೇ ವಾರದಲ್ಲಿ ಕೆಜಿಎಫ್​​​ ರೆಕಾರ್ಡನ್ನು​ ಕಾಂತಾರ ಸರಿಗಟ್ಟಿತ್ತು.

    ಅಂದಹಾಗೆ ಆ ಎಲ್ಲ ಚಿತ್ರಗಳ ನಿರ್ಮಾಣದ ಬಜೆಟ್‌ಗೆ ಹೋಲಿಸಿದರೆ ಕಾಂತಾರ ನಿರ್ಮಾಣಕ್ಕೆ ಮಾಡಿರುವ ಖರ್ಚು ಏನೇನೂ ಅಲ್ಲ. ಕೇವಲ 16 ಕೋಟಿ ರೂಪಾಯಿ ಬಜೆಟ್‌ನ ಕಾಂತಾರ​, ಅತಿ ಅಲ್ಪ ಅವಧಿಯಲ್ಲಿ 365 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಅಚ್ಚರಿ ಮೂಡಿಸಿದೆ.

    ಕಾಂತಾರ ಕರ್ನಾಟಕದಲ್ಲಿ ಒಂದು ಕೋಟಿ ಟಿಕೆಟ್ ಮಾರಾಟ

    ‘ಕಾಂತಾರ’ ಸಹ ನನ್ನ ಚಿತ್ರವೇ ಎಂದ ಯಶ್​

    ನ.18ಕ್ಕೆ ಅಮೇಜಾನ್​ ಪ್ರೈಮ್​ನಲ್ಲಿ ರಿಷಭ್​ ಶೆಟ್ಟಿ ಅಭಿನಯದ ‘ಕಾಂತಾರ’?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts