More

  ಪಡ್ಯಾರ ಮನೆ ಬ್ರಹ್ಮಕಲಶೋತ್ಸವದಲ್ಲಿ ಮಾಗಧ ವಧೆ ಯಕ್ಷಗಾನ ತಾಳಮದ್ದಳೆ

  ಮಂಗಳೂರು: ಶ್ರೀನಾಗವನ ಕಲ್ಲುರ್ಟಿ ಪಂಜುರ್ಲಿ ಸಪರಿವಾರ ದೈವಸ್ಥಾನ ಅಂಬ್ಲಮೊಗರು ನೂತನ ಧರ್ಮ ಚಾವಡಿ ಪ್ರವೇಶೋತ್ಸವ ಮತ್ತು ಪಡ್ಯಾರ ಮನೆ ಬ್ರಹ್ಮಕಲಶೋತ್ಸವ ಸಲುವಾಗಿ ಉಳ್ಳಾಲ ತಾಲೂಕು ಪಡ್ಯಾರ ಮನೆಯಲ್ಲಿ ಮಾಗಧ ವಧೆ ಯಕ್ಷಗಾನ ತಾಳಮದ್ದಳೆ ಇತ್ತೀಚೆಗೆ ಜರಗಿತು. ದಿ.ಕಲ್ಲಾಯಿ ವಿಠಲ ರೈ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲೆಯ ಪ್ರಸಿದ್ಧ ಕಲಾವಿದರು ಭಾಗವಹಿಸಿದ್ದರು.

  ಗಣೇಶ್ ಕುಮಾರ್ ಹೆಬ್ರಿ, ಹರಿಶ್ಚಂದ್ರ ನಾಯಗ ಮಾಡೂರು, ಜೀತೇಶ್ ಕೋಳ್ಯೂರು, ಸ್ಕಂದ ಕೊನ್ನಾರ್ ಹಿಮ್ಮೇಳದಲ್ಲಿದ್ದರು. ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ, ಜಬ್ಬಾರ್ ಸಮೋ ಸಂಪಾಜೆ, ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ಗಣೇಶ ಶೆಟ್ಟಿ ಕನ್ನಡಿಕಟ್ಟೆ, ಸಂಜೀವ ಶೆಟ್ಟಿ ಬಿ.ಸಿ.ರೋಡು ಅರ್ಥಧಾರಿಗಳಾಗಿದ್ದರು.

  ತಾಳಮದ್ದಳೆಯನ್ನು ಸಂಯೋಜಿಸಿದ ಯಕ್ಷಾಂಗಣ ಮಂಗಳೂರು ಇದರ ಕಾರ್ಯಾಧ್ಯಕ್ಷ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅವರನ್ನು ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ, ಸಂಗಂ ಫೈನಾನ್ಸ್ ನ ವಿಜಯಕುಮಾರ್ ಶೆಟ್ಟಿ ಪಡ್ಯಾರಮನೆ ಸನ್ಮಾನಿಸಿದರು.

  ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಪಡ್ಯಾರ ಮನೆ ಮಹಾಬಲ ಆಳ್ವ ಕಮ್ಮಾಜೆ, ಆಡಳಿತ ಮಂಡಳಿ ಅಧ್ಯಕ್ಷ ಸುಶಾಂತ್ ಭಂಡಾರಿ ಪಡ್ಯಾರ ಮನೆ, ಸಂಚಾಲಕರಾದ ಜಯಶೀಲ ಶೆಟ್ಟಿ ಪಡ್ಯಾರ ಮನೆ, ಕಲ್ಲಾಯಿ ಲಕ್ಷ್ಮೀ ನಾರಾಯಣ ರೈ ಹರೇಕಳ,ಪಡ್ಯಾರ ಮನೆ ಗಣೇಶ್ ಪೂಂಜಾ ಪೂಣೆ, ರಾಧಾಕೃಷ್ಣ ರೈ ಕೊಟ್ಟುಂಜ ಉಪಸ್ಥಿತರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts