ಜಾಕ್​ಲಿನ್​ರನ್ನು ಯಾಕೆ ಇನ್ನೂ ಅರೆಸ್ಟ್​ ಮಾಡಿಲ್ಲ: ದೆಹಲಿ ಕೋರ್ಟ್​ ಪ್ರಶ್ನೆ

Jacqueline Fernandes
Published on

ದೆಹಲಿ: ದೆಹಲಿಯ ಪಟಿಯಾಲ ಹೌಸ್​ ನ್ಯಾಯಾಲಯವು, ಬಾಲಿವುಡ್​ ನಟಿ ಜಾಕ್​​ಲಿನ್​ ಫರ್ನಾಂಡಿಸ್​ ಅವರನ್ನು ಇದುವರೆಗೂ ಯಾಕೆ ಬಂಧಿಸಿಲ್ಲ ಎಂದು ಇಡಿ ಅಧಿಕಾರಿಗಳನ್ನು ಪ್ರಶ್ನೆ ಮಾಡಿದೆ.

200 ಕೋಟಿ ಸುಲಿಗೆ ಪ್ರಕರಣದಲ್ಲಿ ಜಾಕ್​ಲಿನ್​ ಫರ್ನಾಂಡಿಸ್​ ಸಹ ಆರೋಪಿಯಾಗಿದ್ದು, ಆಕೆ ದೇಶ ಬಿಟ್ಟು ಹೋಗದಂತೆ ಇಡಿ ಅಧಿಕಾರಿಗಳು ಲುಕ್​ಔಟ್​ ನೋಟೀಸ್​ ಹೊರಡಿಸಿದ್ದಾರೆ. ಈ ಮಧ್ಯೆ, ಜಾಕ್​ಲೀನ್​ನ ಜಾಮೀನು ಅರ್ಜಿ ವಿಚಾರಣೆ ಪಟಿಯಾಲಾ ಕೋರ್ಟ್‌ನಲ್ಲಿ ನಡೆದಿದ್ದು ತೀರ್ಪನ್ನು ಇದೇ ತಿಂಗಳ 15ಕ್ಕೆ ಕಾಯ್ದಿರಿಸಲಾಗಿದೆ.

ಗುರುವಾರ ನಡೆದ ವಿಚಾರಣೆ ವೇಳೆ, ಜಾಕ್​ಲೀನ್​ ಮೇಲೆ ಅಷ್ಟೊಂದು ಗುರುತರವಾದ ಆರೋಪಗಳಿದ್ದರೂ, ಆಕೆಯನ್ನು ಇನ್ನೂ ಏಕೆ ಬಂಧಿಸಲಾಗಿಲ್ಲ ಎಂದು ನ್ಯಾಯಾಲಯವು ಇ.ಡಿ. ತನಿಖಾಧಿಕಾರಿಗಳನ್ನು ಪ್ರಶ್ನಿಸಿದೆ ಎಂದು ಹೇಳಲಾಗಿದೆ. ಪ್ರಕರಣದ ಹಲವು ಆರೋಪಿಗಳು ಜೈಲಿನಲ್ಲಿದ್ದರೂ ಜಾಕ್​ಲಿನ್​ ಅವರನ್ನು ಮಾತ್ರ ಯಾಕೆ ಇದುವರೆಗೂ ಬಂಧಿಸಿಲ್ಲ, ಈ ಪಕ್ಷಪಾತ ಯಾಕೆ ಎಂದು ಪ್ರಶ್ನಿಸಿದ್ದು, ಇದರಿಂದ ಅಧಿಕಾರಿಗಳು ತಬ್ಬಿಬ್ಬಾಗಿದ್ದಾರೆ.

ಅ.22ರಂದು ನ್ಯಾಯಾಲಯವು ನ್ಯಾಯಾಲಯವು ಜಾಕ್​ಲೀನ್​ಗೆ ಮಧ್ಯಂತರ ಜಾಮೀನು ನೀಡಿದ್ದು, ಅದು ನ. 10ಕ್ಕೆ ಮುಕ್ತಾಯವಾಗಿತ್ತು. ಇನ್ನೂ ನಾಲ್ಕು ದಿನಗಳ ಕಾಲ ಜಾಮೀನು ವಿಸ್ತಿರಿಸಿರುವ ನ್ಯಾಯಾಲಯವು, ತೀರ್ಪನ್ನು ನವೆಂಬರ್ 15ಕ್ಕೆ ತೀರ್ಪನ್ನು ಕಾಯ್ದಿರಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net