ಅವಳಿ ಮಕ್ಕಳಿಗೆ ಹೆಸರಿಟ್ಟ ಅಮೂಲ್ಯ-ಜಗದೀಶ್​; ಹೆಸರೇನು ಗೊತ್ತಾ?

Amulya Sons
Published on

ಬೆಂಗಳೂರು: ಈ ವರ್ಷದ ಮಾರ್ಚ್​​ನಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದರು ನಟಿ ಅಮೂಲ್ಯ. ಇಷ್ಟು ದಿನ ಮಕ್ಕಳ ಪಾಲನೆಯಲ್ಲಿ ತೊಡಗಿಸಿಕೊಂಡಿದ್ದ ಅವರು, ಆಗಾಗಲ ಮಕ್ಕಳ ಫೋಟೋ ಶೂಟ್​ ಮಾಡಿಸಿ ಸೋಷಿಯಲ್​ ಮೀಡಿಯಾ ಮೂಲಕ ಹಂಚಿಕೊಳ್ಳುತ್ತಲೇ ಇದ್ದರು.

ಎಷ್ಟೇ ತರಹವೇರಿ ಫೋಟೋಗಳನ್ನು ಹಂಚಿಕೊಂಡರೂ, ಅವರು ತಮ್ಮ ಮಕ್ಕಳ ಹೆಸರೇನೆಂದು ಬಹಿರಂಗಪಡಿಸಿರಲಿಲ್ಲ. ನಿಜ ಹೇಳಬೇಕೆಂದರೆ, ಮಕ್ಕಳ ನಾಮಕರಣವೇ ಆಗಿರಲಿಲ್ಲ. ಇತ್ತೀಚೆಗೆ ಅಮೂಲ್ಯ ಅವರ ಅವಳಿ ಮಕ್ಕಳ ನಾಮಕರಣವಾಗಿದ್ದು, ಮಕ್ಕಳಿಗೆ ಹೆಸರಿಡಲಾಗಿದೆ. ಅಂದಹಾಗೆ, ಮಕ್ಕಳ ಹೆಸರೇನು ಗೊತ್ತಾ? ಅಥರ್ವ ಹಾಗೂ ಅಧವ್​.

ಗುರುವಾರ ನಡೆದ ನಾಮಕರಣ ಸಮಾರಂಭದಲ್ಲಿ ಅವಳಿ ಮಕ್ಕಳಿಗೆ ಅಥರ್ವ ಹಾಗೂ ಅಧವ್ ಎಂಬ ಹೆಸರುಗಳನ್ನು ಅಮೂಲ್ಯ ಇಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಅಥರ್ವ ಎಂಬ ಹೆಸರಿಗೆ ಜ್ನಾನ ಎಂಬ ಅರ್ಥವಿದ್ದು, ಅಧವ್​ಗೆ ದೇವರು ಎಂಬ ಅರ್ಥವಿದೆ. ಈ ಸಮಾರಂಭದಲ್ಲಿ ಚಂದನವನದ ಹಲವು ನಟ-ನಟಿಯರು ಭಾಗವಹಿಸುವುದರ ಜತೆಗೆ, ಕೆಲವು ರಾಜಕೀಯ ಮುಖಂಡರು ಸಹ ಇದ್ದರು.

ಮದುವೆಯಾದ ಮೇಲೆ ಅಮೂಲ್ಯ ಅಭಿನಯದಿಂದ ದೂರವಿದ್ದರೂ, ಚಿತ್ರರಂಗದಿಂದ ದೂರವಾಗಿಲ್ಲ. ಆಗಾಗ ಸಿನಿಮಾದ ಸಮಾರಂಭಗಳು ಮತ್ತು ನಟ-ನಟಿಯರ ಪಾರ್ಟಿಗಳಲ್ಲಿ ಗಂಡನ ಜತೆಗೆ ಕಾಣಿಸಿಕೊಳ್ಳುವ ಅಮೂಲ್ಯ, ಚಿತ್ರರಂಗದ ಹಲವರ ಜತೆಗೆ ಆತ್ಮೀಯ ಒಡನಾಟ ಹೊಂದಿದ್ದಾರೆ. ಈ ವರ್ಷದ ಆರಂಭದಲ್ಲಿ ನಡೆದ ಅಮೂಲ್ಯ ಅವರ ಸೀಮಂತಕ್ಕೆ ಕನ್ನಡ ಚಿತ್ರರಂಗದ ಹಲವರು ನಟ-ನಟಿಯರು ಆಗಮಿಸಿ, ಅವರಿಗೆ ಶುಭ ಕೋರಿದ್ದರು. ಈಗ ನಾಮಕರಣದಲ್ಲೂ ಭಾಗಿಯಾದ ಸ್ಯಾಂಡಲ್​ವುಡ್​ ಸೆಲೆಬ್ರಿಟಿಗಳು ಅಥರ್ವ ಹಾಗೂ ಅಧವ್​ಗೆ ಆಶೀರ್ವಾದ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net