More

    ನೆಟ್ಟಿಗರು ಮೆಚ್ಚಿದ ಸಮಂತಾ ಅಭಿನಯದ ‘ಯಶೋದ’

    ಹೈದರಾಬಾದ್: ಸಮಂತಾ ಅಭಿನಯದ ‘ಯಶೋದ’ ಚತ್ರವು ಇಂದು ಐದು ಭಾಷೆಗಳಲ್ಲಿ ಜಗತ್ತಿನ ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ಈ ಚಿತ್ರಕ್ಕೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಷ್ಟೇ ಅಲ್ಲ, ಚಿತ್ರವನ್ನು ನೋಡಿದವರು ಇದು ಸಮಂತಾ ಅಭಿನಯದ ಬೆಸ್ಟ್​ ಚಿತ್ರ ಎಂದು ಹಾಡಿ ಹೊಗಳುತ್ತಿದ್ದಾರೆ.

    ಇದನ್ನೂ ಓದಿ: ಚಿತ್ರ ವಿಮರ್ಶೆ: ದುಷ್ಟರ ವಿರುದ್ಧ ‘ರಾಣ’ನ ಹೋರಾಟ

    ಸಮಂತಾ ಅಭಿನಯದ ಚಿತ್ರವೊಂದು ಬಿಡುಗಡೆಯಾಗಿ ಎರಡು ವರ್ಷಗಳೇ ಆಗಿವೆ. ಅದಾದ ಮೇಲೆ, ‘ದಿ ಫ್ಯಾಮಿಲಿ ಮ್ಯಾನ್​’ ಎಂಬ ಚಿತ್ರದಲ್ಲಿ ಸಮಂತಾ ನೆಗೆಟಿವ್​ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ‘ಪುಷ್ಪ’ ಚಿತ್ರದ ಐಟಂಸಾಂಗ್​ವೊಂದರಲ್ಲಿ ಕಾಣಿಸಿಕೊಂಡಿದ್ದರು. ಇವೆರಡೂ ಅವರ ಜನಪ್ರಿಯತೆಯನ್ನು ಹೆಚ್ಚಿಸಿತ್ತು. ಇದೆಲ್ಲದರಿಂದ ‘ಯಶೋದ’ ಚಿತ್ರದ ಮೇಲೆ ಪ್ರೇಕ್ಷಕರಿಗೆ ನಿರೀಕ್ಷೆ ಹೆಚ್ಚಿತ್ತು. ಇನ್ನು, ಇದು ವಿಭಿನ್ನ ಜಾನರ್​ನ ಚಿತ್ರವಾದ್ದರಿಂದ ಕುತೂಹಲ ಹೆಚ್ಚಿತ್ತು.

    ಇಂದು ಚಿತ್ರ ಬಿಡುಗಡೆಯಾಗಿದ್ದು, ಚಿತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಚಿತ್ರ ನೋಡಿದ ಪ್ರೇಕ್ಷಕರು ಸಮಂತಾ ಅಭಿನಯವನ್ನು, ಹೊಡೆದಾಟದ ದೃಶ್ಯಗಳನ್ನು, ವಿಭಿನ್ನ ಕಥಾಹಂದರವನ್ನು ಮೆಚ್ಚಿಕೊಂಡಿದ್ದಾರೆ. ಇದಕ್ಕೂ ಮುನ್ನ ಚಿತ್ರಕ್ಕೆ ಸಾಹಸ ಸಂಯೋಜನೆ ಮಾಡಿರುವ ಹಾಲಿವುಡ್​ನ ಸಾಹಸ ನಿರ್ದೇಶಕ ಯಾನಿಕ್​ ಬೆನ್, ಸಮಂತಾ ಪರಿಶ್ರಮವನ್ನು ಕೊಂಡಾಡಿದ್ದರು. ಈಗ ಚಿತ್ರ ನೋಡಿರುವ ಪ್ರೇಕ್ಷಕರು ಸಹ ಸಮಂತಾ ಹೊಡೆದಾಡಿರುವ ರೀತಿಯ ಬಗ್ಗೆ ಮೆಚ್ಚಿ ಮಾತನಾಡಿದ್ದಾರೆ.

    ‘ಯಶೋದ’ ಚಿತ್ರದ ಜೀವಾಳವೇ ಸಮಂತ ಎಂದು ಕೆಲವರು ಅಭಿಪ್ರಾಯಪಟ್ಟರೆ, ಒಂದು ಒಳ್ಳೆಯ ಸ್ಕ್ರಿಪ್ಟ್​ನ್ನು ಬಹಳ ಚೆನ್ನಾಗಿ ತೆರೆಯ ಮೇಲೆ ತರಲಾಗಿದೆ ಎಂದು ಇನ್ನೂ ಕೆಲವರು ಹೇಳಿಕೊಂಡಿದ್ದಾರೆ. ಇನ್ನು, ಬಾಡಿಗೆ ತಾಯ್ತನವನ್ನು ಹೇಗೆ ವ್ಯಾಪರೀಕರಣಗೊಳಿಸಲಾಗುತ್ತಿದೆ ಎಂದು ಚಿತ್ರದಲ್ಲಿ ಅದ್ಭುತವಾಗಿ ತೋರಿಸಲಾಗಿದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

    ಇದನ್ನೂ ಓದಿ: ಚಿತ್ರ ವಿಮರ್ಶೆ: ‘ದಿಲ್​ ಪಸಂದ್​’ನಲ್ಲಿ ಸ್ವಲ್ಪ ನಗುವಿದೆ, ಸ್ವಲ್ಪ ಅಳುವಿದೆ

    ಶ್ರೀದೇವಿ ಮೂವೀಸ್ ಅಡಿಯಲ್ಲಿ ಶಿವಲೆಂಕ ಕೃಷ್ಣ ಪ್ರಸಾದ್ ನಿರ್ಮಿಸಿರುವ ‘ಯಶೋದ’ ಚಿತ್ರದಲ್ಲಿ ಸಮಂತಾ ಜೊತೆಗೆ ವರಲಕ್ಷ್ಮಿ ಶರತ್‌ಕುಮಾರ್, ಉನ್ನಿ ಮುಕುಂದನ್, ರಾವ್ ರಮೇಶ್, ಮುರಳಿ ಶರ್ಮಾ ಮುಂತಾದವರು ನಟಿಸಿದ್ದಾರೆ.

    ಅವಳಿ ಮಕ್ಕಳಿಗೆ ಹೆಸರಿಟ್ಟ ಅಮೂಲ್ಯ-ಜಗದೀಶ್​; ಹೆಸರೇನು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts