ಇದರ ಸಲುವಾಗಿ ಬಹಳ ಗುದ್ದಾಡ್ತಾರೆ, ಹೆಣ ಬೀಳ್ತವೆ: ದರ್ಗಾದಲ್ಲಿ ಕೇಸರಿ ಬಟ್ಟೆ ಹಿಡಿದು ಭವಿಷ್ಯ ನುಡಿದ ಲಾಲಸಾಬ್​

Dargah
Published on

ಬಾಗಲಕೋಟೆ: ಹಸಿರು ಬಟ್ಟೆ ಧರಿಸಿದ್ದ ವ್ಯಕ್ತಿಯೊಬ್ಬ ದರ್ಗಾದಲ್ಲಿ ಕೇಸರಿ ಬಟ್ಟೆ ಹಿಡಿದು ತೋರಿ ಭವಿಷ್ಯ ಹೇಳಿದ ಪ್ರಸಂಗವೊಂದು ನಡೆದಿದೆ. ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ಈ ಭವಿಷ್ಯ ನುಡಿಯಲಾಗಿದೆ.

ಹೆಬ್ಬಳ್ಳಿ ಗ್ರಾಮದ ಪ್ರಸಿದ್ದ ಲಾಲಸಾಬವಲಿ ದರ್ಗಾದಲ್ಲಿ ಲಾಲಸಾಬ್ ಅಜ್ಜ ಮೊಹರಂ ಹಬ್ಬದ ಸಂದರ್ಭದಲ್ಲಿ ನುಡಿದ ಈ ಭವಿಷ್ಯದ ವಿಡಿಯೋ ತುಣುಕು ಗಮನ ಸೆಳೆದಿದ್ದು, ವೈರಲ್ ಆಗಲಾರಂಭಿಸಿದೆ. ಕೇಸರಿ ಬಟ್ಟೆಯ ತುಂಡೊಂದನ್ನು ಹಿಡಿದು ಮಾತನಾಡಿದ ಅವರು ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂಬುದನ್ನು ಸೂಚ್ಯವಾಗಿ ಹೇಳಿದ್ದಾರೆ.

ಕೇಸರಿ ವಸ್ತ್ರ ಹಿಡಿದು ಮಾತನಾಡಿದ ಅವರು, ಇದರ ಸಲುವಾಗಿ ಬಹಳ ಗುದ್ದಾಡುತ್ತಾರೆ, ಬಹಳ ಹೆಣಗಳು ಉರುಳುತ್ತವೆ, ಬರೆದಿಟ್ಟುಕೊಳ್ಳಿ. ಆದರೆ ಕುರ್ಚಿ ಮಾತ್ರ ಗಟ್ಟಿ ಇದೆ ಎನ್ನುವ ಮೂಲಕ ಅವರು ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಪರೋಕ್ಷವಾಗಿ ಹೇಳಿದ್ದಾರೆ. ಲಾಲಸಾಬ್ ನುಡಿದ ಈ ಭವಿಷ್ಯ ಕುತೂಹಲ ಕೆರಳಿಸಿದ್ದು, ಚರ್ಚೆಗೆ ಒಳಗಾಗಿದೆ.

hospital

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net