ದೇವರ ಹುಂಡಿ ಕದಿಯುವ ಮುನ್ನ ಕೈಮುಗಿದು ಪ್ರಾರ್ಥಿಸಿದ ಕಿರಾತಕ! ಸಿಸಿಟಿವಿಯಲ್ಲಿ ಸೆರೆಯಾಯ್ತು ಶಾಕಿಂಗ್ ವಿಚಾರ

WhatsApp Image 2024-03-18 at 7.17.01 AM
Published on

ರಾಜಸ್ಥಾನ: ರಾಜಸ್ಥಾನದ ಅಲ್ವಾರ್‌ನಲ್ಲಿ ವ್ಯಕ್ತಿಯೊಬ್ಬ ದೇವಸ್ಥಾನಕ್ಕೆ ನುಗ್ಗಿ ದೇವರ ಹುಂಡಿಯಲ್ಲಿನ ಹಣ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಕದಿಯುವ ಮೊದಲು ದೇವರಿಗೆ ಕೈಮುಗಿದು, ಪ್ರಾರ್ಥಿಸಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆರೋಪಿಯನ್ನು ಗೋಪೇಶ್ ಶರ್ಮಾ (37) ಎಂದು ಗುರುತಿಸಲಾಗಿದೆ.

ದೇವಸ್ಥಾನಗಳನ್ನು ಲೂಟಿ ಮಾಡುವುದು ಈತನ ಟಾರ್ಗೆಟ್​ ಆಗಿದ್ದು, ಸಿಸಿಟಿವಿ ದೃಶ್ಯಾವಳಿಯ ಮೂಲಕ ಇದೀಗ ಆರೋಪಿ ಪೊಲೀಸರ ಅತಿಥಿಯಾಗಿದ್ದಾನೆ. ಶನಿವಾರ ಬೆಳಗ್ಗೆ ತೆಗೆದ ಸಿಸಿಟಿವಿ ದೃಶ್ಯಾವಳಿಗಳು ಅಲ್ವಾರ್‌ನ ಆದರ್ಶ ನಗರ ಪ್ರದೇಶದ ದೇವಸ್ಥಾನದಲ್ಲಿ ಶರ್ಮಾ ಮೊದಲು ಪ್ರಾರ್ಥನೆ ಸಲ್ಲಿಸುತ್ತಿರುವುದನ್ನು ತೋರಿಸಿದ್ದು, ಅಂತಿಮವಾಗಿ ಕಾಣಿಕೆ ಪೆಟ್ಟಿಗೆಯಿಂದ ಹಣವನ್ನು ತೆಗೆಯುತ್ತಿರುವುದನ್ನು ಸೆರೆಹಿಡಿದಿದೆ.

ದೇವಸ್ಥಾನದ ಬೀಗ ಒಡೆದು ಬೆಳ್ಳಿ ಆಭರಣ, ಛತ್ರಿ, ಕಾಣಿಕೆ ಹುಂಡಿಯಲ್ಲಿದ್ದ ಹಣ ಮತ್ತಿತರ ವಸ್ತುಗಳನ್ನು ಕಳ್ಳತನ ಮಾಡಿದ್ದಾನೆ. ಕಳ್ಳತನದ ವೀಡಿಯೊ ವೈರಲ್ ಆಗುತ್ತಿದ್ದಂತೆ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ ಪೊಲೀಸರು ಗೋಪೇಶ್ ಶರ್ಮಾನನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಹಲವು ದೇವಸ್ಥಾನಗಳಲ್ಲಿ ಇದೇ ರೀತಿ ಕಳ್ಳತನ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net