

ನವದೆಹಲಿ: ಆನ್ಲೈನ್ನಲ್ಲಿ ಐಫೋನ್ 14 ಮೊಬೈಲ್ ಬುಕ್ ಮಾಡಿದ್ದಾತ ಮೋಸ ಹೋಗಿರುವ ಘಟನೆ ನಡೆದಿದೆ. ಅಕ್ಷಯ್ ತುಂಗಾ ಎಂಬಾತ, ಅಮೆಜಾನ್‌ನಿಂದ ಐಫೋನ್ 14 ಪ್ರೊ ಮ್ಯಾಕ್ಸ್ ಮೊಬೈಲ್ ಬುಕ್ ಮಾಡಿದ್ದರು. ಸಂತಸದಲ್ಲಿಯೇ ಮೊಬೈಲ್ ಸ್ವಿಚ್ ಆನ್ ಮಾಡಿದಾಗ ನಕಲಿ ಫೋನ್ ಎಂಬುದು ಗೊತ್ತಾಗಿದೆ.
ಈ ಬಗ್ಗೆ ಅಕ್ಷಯ್ ಪ್ರತಿಕ್ರಿಯಿಸಿ, ಸ್ವಿಚ್ ಆನ್ ಮಾಡಿದಾಗ ಸೆಟ್ಟಿಂಗ್ಸ್ ಆಪ್ಶನ್ ಕೇಳಲಿಲ್ಲ. ಜತೆಗೆ ಫೇಸ್‌ಬುಕ್, ಟ್ವಿಟರ್, ವಾಟ್ಸಾಪ್ ಆ್ಯಪ್ಗಳು ಮೊದಲೇ ಇನ್ಸ್ಟಾಲ್ ಆಗಿದ್ದವು. ಅಕ್ಷರಗಳ ಮತ್ತು ಕ್ಯಾಮರಾದಲ್ಲಿ ಐಫೋನ್ನ ಗುಣಮಟ್ಟ ಇರಲಿಲ್ಲ. ಹೀಗಾಗಿ ಅನುಮಾನ ಬಂದು ಪರೀಕ್ಷಿಸಿದಾಗ ನಕಲಿ ಫೋನ್ ಕಳುಹಿಸಲಾಗಿರುವುದು ಪತ್ತೆಯಾಗಿದೆ ಎಂದಿದ್ದಾರೆ.
ನಕಲಿ ಐಫೋನ್ ಎಂಬುದು ಖಚಿತವಾಗುತ್ತಿದ್ದಂತೆ ಅಕ್ಷಯ್ ಆ್ಯಪಲ್ ಸ್ಟೋರ್‌ಗೆ ಭೇಟಿ ನೀಡಿ ವಿಚಾರಿಸಿದ್ದಾರೆ. ಮೊಬೈಲ್ ಬಾಕ್ಸ್ನಲ್ಲಿದ್ದ ಕೋಡ್ ನಂಬರ್ಗಳನ್ನು ಪರಿಶೀಲಿಸಿದಾಗ ಅಮೇರಿಕಾದಲ್ಲಿ ತಯಾರಾದ ಮೊಬೈಲ್ ಎಂದು ಸೂಚಿಸಿದೆ ಎಂದು ಅಕ್ಷಯ್ ತುಂಗ ಹೇಳಿಕೊಂಡಿದ್ದಾರೆ. ಇದೀಗ ನಕಲಿ ಫೋನ್ ಬಂದಿರುವ ಬಗ್ಗೆ ಪೊಲೀಸ್ ದೂರು ದಾಖಲಿಸಿದ್ದಾರೆ.