ಜೆಡಿಎಸ್ ಜಿಲ್ಲಾಧ್ಯಕ್ಷ ಎಂದು ಹೇಳಿಕೊಂಡು ಮದುವೆ ಆಗೋದಾಗಿ ನಂಬಿಸಿದಾತನಿಗೆ ಧರ್ಮದೇಟು ನೀಡಿದ ಯುವತಿ!

JDS
Published on

ಬೆಂಗಳೂರು: ಉತ್ತರ ಕನ್ನಡದ ಜಿಲ್ಲೆಯ ಜೆಡಿಎಸ್ ಜಿಲ್ಲಾಧ್ಯಕ್ಷ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬ ಯುವತಿಗೆ ವಂಚನೆ ಮಾಡಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ಇದೀಗ ಯುವತಿ ಜಿ.ಕೆ.ಗೌಡ ಎಂಬಾತನ ಮನೆಗೆ ನುಗ್ಗಿ ಧರ್ಮದೇಟು ನೀಡಿದ್ದಾಳೆ. ಈ ಘಟನೆ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಜಿ.ಕೆ ಗೌಡ ಎಂಬಾತ ಮದುವೆ ಆಗುವುದಾಗಿ ಹೇಳಿ ನಂಬಿಸಿ ಅನೇಕ ಬಾರಿ ದೈಹಿಕವಾಗಿ ಬಳಸಿಕೊಂಡಿದ್ದಾನೆ. ಈಗಾಗಲೇ ಮೂರು ಬಾರಿ ಅಬಾರ್ಷನ್ ಮಾಡಿಸಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ. ಜತೆಗೆ ಆಕೆಯಿಂದ 20 ಲಕ್ಷ ರೂಪಾಯಿ ಹಣ ತೆಗೆದುಕೊಂಡಿದ್ದಾನೆ ಎಂದು ಹೇಳಿಕೊಂಡಿದ್ದಾಳೆ.

ಇದೀಗ ಯುವತಿ ಜಿ.ಕೆ.ಗೌಡ ವಾಸವಿದ್ದಲ್ಲಿ ಸಂಘಟನೆ‌ ಸಹಾಯದೊಂದಿಗೆ ತೆರಳಿ ನ್ಯಾಯ ಕೇಳಲು ಹೋದ ವೇಳೆ ಗಲಾಟೆ ನಡೆದಿದೆ. ಸದ್ಯ ಯುವತಿ ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net