ಮಹಿಳಾ ಪೊಲೀಸರಿಗೇ ಲೈಂಗಿಕ ಕಿರುಕುಳ ಕೊಟ್ಟ; ಮಾಸ್ಕ್ ಹಾಕಿಲ್ಲ ಎಂದು ತಡೆದಿದ್ದಕ್ಕೆ ಪೀಡಿಸಿದ...

Harassment-woman3
ಸಾಂದರ್ಭಿಕ ಚಿತ್ರ
Published on

ನವದೆಹಲಿ: ಮಾಸ್ಕ್ ಇಲ್ಲದೆ ಸಂಚರಿಸಿ ಕೋವಿಡ್​ ನಿಯಮ ಉಲ್ಲಂಘಿಸಿದ ವ್ಯಕ್ತಿಯೊಬ್ಬನನ್ನು ಮಹಿಳಾ ಪೊಲೀಸ್​ ಕಾನ್​ಸ್ಟೆಬಲ್​ಗಳಿಬ್ಬರು ತಡೆದು ಪ್ರಶ್ನಿಸಿದ್ದಾರೆ. ಆದರೆ ಆತ ಅವರಿಗೇ ಹೇಗ್ಹೇಗೋ ಪೀಡಿಸಿ ಲೈಂಗಿಕ ಕಿರುಕುಳ ಕೊಟ್ಟಿದ್ದಾನೆ.

ಮೊಹಮದ್ ಜೈದ್ ಎಂಬ ವ್ಯಕ್ತಿ ಇಂಥದ್ದೊಂದು ಕೃತ್ಯ ಎಸಗಿದ್ದಾನೆ. ಹತ್ತು ವರ್ಷದ ಬಾಲಕನೊಂದಿಗೆ ಬೈಕ್​ನಲ್ಲಿ ಮಾಸ್ಕ್​ ಧರಿಸದೆ ಬರುತ್ತಿದ್ದ ಈತನನ್ನು ಕರ್ತವ್ಯದ ಮೇಲಿದ್ದ ಈ ಇಬ್ಬರು ಮಹಿಳಾ ಪೊಲೀಸ್​ ಕಾನ್​ಸ್ಟೆಬಲ್​ಗಳು ತಡೆದು ಪ್ರಶ್ನಿಸಿದ್ದಾರೆ. ಅದಾಗ್ಯೂ ಉದ್ಧಟತನ ತೋರಿದ ಈತ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೆ ಲೈಂಗಿಕ ಕಿರುಕುಳ ನೀಡಿದ್ದಾನೆ.

ಪುಂಡಾಟಿಕೆ ತೋರುವವರನ್ನು ಹಿಡಿದು ಕ್ರಮ ಜರುಗಿಸಲೆಂದೇ ರೂಪಿಸಲಾಗಿರುವ ಆ್ಯಂಟಿ ರೋಮಿಯೋ ಸ್ಕ್ವಾಡ್​ನಲ್ಲಿದ್ದ ಈ ಮಹಿಳಾ ಕಾನ್​ಸ್ಟೆಬಲ್​ಗಳೇ ಲೈಂಗಿಕ ಕಿರುಕುಳ ಅನುಭವಿಸುವಂಥ ವಿಪರ್ಯಾಸ ಈ ಮೂಲಕ ಸಂಭವಿಸಿದೆ. ಸದ್ಯ ಈತನ ವಿರುದ್ಧ ಅಮ್ರೋಹ ಠಾಣಾ ಪೊಲೀಸರು ಲೈಂಗಿಕ ಕಿರುಕುಳ ಜತೆಗೆ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಕ್ಕೂ ಪ್ರಕರಣ ದಾಖಲಿಸಿಕೊಂಡಿದ್ದಾರೆ. ದುರಂತವೆಂದರೆ ಈ ಸಂದರ್ಭದಲ್ಲಿ ಯಾರೂ ಪೊಲೀಸರ ನೆರವಿಗೆ ಬರಲಿಲ್ಲ ಎನ್ನಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net