ಪ್ರೇಯಸಿಗಾಗಿ ಜಾರಿ ಬಿದ್ದ ಜಾಣನಿಗೆ ಸಿಕ್ಕಿದ್ದೇನು?

lady love
Published on

ಮಿಚಿಗನ್​: ಗಡ್ಡ ಎಳೆದವನ ಬಾಯಿಗೆ ಮಿಠಾಯಿ- ಇದು ಬೀರ್​ಬಲ್​ನ ಕಥೆ. ಇದನ್ನೇ ಇಂದಿಗೆ ಅನ್ವಯಿಸಿ ಹೇಳುವುದಾದರೆ ಪ್ರೇಯಸಿಗಾಗಿ ಜಾರಿ ಬಿದ್ದವನಿಗೆ ಸಿಕ್ಕಿದ್ದೇನು...?

ಪ್ರೇಮಿಗಳು ತಾವು ಪರಸ್ಪರ ಪ್ರೀತಿಯಲ್ಲಿ ಬಿದ್ದಿದ್ದೇಗೆ ಎಂದು ಅನುಭವವನ್ನು ಹೇಳಿಕೊಳ್ಳುತ್ತಿರುತ್ತಾರೆ. ಅಂತೆಯೇ, ಪ್ರೀತಿಯನ್ನು ನಿವೇದಿಸಿಕೊಳ್ಳಲು ಹೋದವ ಎದುರಿಸಿದ ವಿಚಿತ್ರ ಸನ್ನಿವೇಶವಿದು..! ಅಕ್ಷರಶಃ ನಿನ್ನ ಪ್ರೀತಿಯಲ್ಲಿ ನಾ ಬಿದ್ದೆ ಎಂಬಂತಾಗಿತ್ತು.

ಸಾಮಾನ್ಯವಾಗಿ ಪ್ರೀತಿಯ, ವಿವಾಹದ ನಿವೇದನೆಗಳು ರೋಮ್ಯಾಂಟಿಕ್​ ಆಗಿ, ಕೆಲವೊಮ್ಮೆ ಸಾಹಸಭರಿತವಾಗಿಯೂ ಇರುತ್ತವೆ. ಆಧರೆ, ಇದನ್ನು ನೋಡೊದರೆ ನಗೆಯುಕ್ಕಿ ಬರುತ್ತದೆ. ಮಿಚಿಗನ್​ ಕಡಲ ತೀರದ ನೀರಿನಲ್ಲಿ ಮರಿಯಾ ಗಗ್ಲಿಯೊಟ್ಟಾ ನಾಯಿಯೊಂದಿಗೆ ವಿಹರಿಸುತ್ತಿದ್ದಳು. ಇಂಥದ್ದೊಂದು ಸಂದರ್ಭ ಎದುರಾಗುತ್ತದೆ ಎಂದು ಆಕೆ ನಿರೀಕ್ಷಿಸಿಯೇ ಇರಲಿಲ್ಲ.

ಆಕೆಯ ಸಂಗಾತಿ ಲೋಗನ್​ ಜಾಕ್ಸನ್​ ವಿವಾಹದ ಪ್ರಸ್ತಾಪ ಇಡಲು ಮುಂದಾಗುತ್ತಾನೆ. ಅವಳ ಬಳಿಗೆ ಹೋಗುತ್ತಿದ್ದಾಗಲೇ ಜಾರಿ ನೀರಿಗೆ ಬೀಳುತ್ತಾನೆ. ಆದರೂ ಸಾವರಿಸಿಕೊಂಡ ಮೇಲೇಳುತ್ತಾನೆ. ಆಕೆಯೆದುರು ಮಂಡಿಯೂರಿ ಮದುವೆಯಾಗುತ್ತೀಯಾ ಎಂದು ಕೇಳುತ್ತಾನೆ.

ಕೆಲ ಕ್ಷಣಗಳ ಮುಂಚಿನ ಘಟನೆ ಆಕೆಯಲ್ಲಿ ನಗೆಯುಕ್ಕಿಸಿದರೂ, ಆತನ ಪ್ರೀತಿಗೆ ಒಪ್ಪಿ ಮುತ್ತಿಕ್ಕುತ್ತಾಳೆ. ಅಲ್ಲಿಗೆ ಜಾರಿ ಬಿದ್ದ ಜಾಣನಿಗೆ ಮನದನ್ನೆ ಸಿಕ್ಕಂತಾಯಿತು ಅಲ್ಲವೇ? ಪ್ರೇಯಸಿಯೇ ಫೇಸ್​ಬುಕ್​ನಲ್ಲಿ ಹಂಚಿಕೊಂಡ ಪಜೀತಿಗೊಳಗಾದ ಪ್ರೇಮ ನಿವೇದನೆಯ ವಿಡಿಯೋ ಇಲ್ಲಿದೆ...

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net