ಪ್ರೇಯಸಿಯನ್ನು ಕೊಂದು ಸ್ಟೇಟಸ್​​ಗೆ ಫೋಟೋ ಹಾಕಿದ ಪಾಪಿ ಪ್ರಿಯಕರ

Chennai Murder
Published on

ಚೆನ್ನೈ: ಆಘಾತಕಾರಿ ಘಟನೆಯೊಂದರಲ್ಲಿ ಪ್ರಿಯಕರನೊಬ್ಬ ತನ್ನ ಪ್ರೇಯಸಿಯನ್ನು ಹತ್ಯೆಗೈದು ಬಳಿಕ ಮೃತದೇಹದ ಪೋಟೋವನ್ನು ವಾಟ್ಸ್​ಅಪ್​ ಸ್ಟೇಟಸ್​ಗೆ ಹಾಕಿ ವಿಕೃತಿ ಮೆರೆದಿರುವ ಘಟನೆ ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ನಡೆದಿದೆ.

ಮೃತ ದುರ್ದೈವಿಯನ್ನು ಫೌಸಿಯಾ (20) ಎಂದು ಗುರುತಿಸಲಾಗಿದ್ದು, ಪೊಲೀಸರು ಈಕೆಯ ಪ್ರಿಯಕರ ಆಶಿಕ್​ (20)ನನ್ನು ವಶಕ್ಕೆ ಪಡೆದಿದ್ದಾರೆ. ಇಬ್ಬರು ಕೇರಳದ ಕೊಲ್ಲಂ ಮೂಲದವರು ಎಂದು ತಿಳಿದು ಬಂದಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ಆರೋಪಿ ಆಶಿಕ್​ ಹಾಗೂ ಫೌಸಿಯಾ ಇಬ್ಬರು ಪರಿಚುಸ್ಥರಾಗಿದ್ದು, ಮೃತ ಫೌಸಿಯಾ ಚೆನ್ನೈನಲ್ಲಿ ನರ್ಸಿಂಗ್​ ವ್ಯಾಸಂಗ ಮಾಡುತ್ತಿದ್ದಳು. ಇತ್ತೀಚಿಗೆ ಆಶಿಕ್​ ಬೇರೊಂದು ಹುಡುಗಿಯ ಜತೆ ಸ್ನೇಹ ಬೆಳೆಸಿದ್ದ ಈ ವಿಚಾರವಾಗಿ ಪ್ರೇಮಿಗಳ ನಡುವೆ ಗಲಾಟೆಯಾಗಿತ್ತು. ಇದೇ ವಿಚಾರವಾಗಿ ಮಾತನಾಡಲು ಶುಕ್ರವಾರ ಕ್ರೋಮ್​ಪೇಟ್​ ಪೊಲೀಸ್​ ಠಾಣೆ ವ್ಯಾಪ್ತಿಯ ಲಾಡ್ಜ್​ ಒಂದರಲ್ಲಿ ರೂಂ ಒಂದನ್ನು ಬಾಡಿಗೆಗೆ ಪಡೆದಿದ್ದರು.

ರೂಂ ಪ್ರವೇಶಿಸಿದ ಬಳಿಕ ಇಬ್ಬರ ನಡುವಿನ ಗಲಾಟೆ ವಿಕೋಪಕ್ಕೆ ತಿರುಗಿದ್ದು, ಸಿಟ್ಟಿಗೆದ್ದ ಆರೋಪಿ ಆಶಿಕ್​ ಆಕೆಯ ತಲೆಗೆ ಬಲವಾಗಿ ಹೊಡೆದಿದ್ದು, ಬಳಿಕ ಧರಿಸಿದ್ದ ಟಿ-ಶರ್ಟ್​ನಿಂದ ಆಕೆಯ ಕತ್ತಿಗೆ ಸುತ್ತಿ ಉಸಿರುಗಟ್ಟಿಸಿ ಹತ್ಯೆ ಮಾಡಿ ಬಳಿಕ ಆಕೆಯ ಮೃತದೇಹದ ಫೋಟೋವನ್ನು ವಾಟ್ಸ್​ಅಪ್​ ಸ್ಟೇಟ್ಸ್​ಗೆ ಹಾಕಿ ಹೋಟೆಲ್​ನಿಂದ ಪರಾರಿಯಾಗಿದ್ದ. ಸ್ಟೇಟಸ್​ ನೋಡಿದ ಫೌಸಿಯಾ ಸ್ನೇಹಿತರು ಕೂಡಲೇ ಪೊಲೀಸರಿಗೆ ಈ ವಿಚಾರ ತಿಳಿಸಿದ್ದು, ಘಟನೆ ನಡೆದ ಕೆಲವೇ ಘಂಟೆಗಳಲ್ಲಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಅಧಿಕಾರಿಗಳು ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಫೌಸಿಯಾ ಪೋಷಕರಿಗೆ ವಿಚಾರವನ್ನು ತಿಳಿಸಲಾಗಿದ್ದು, ಮರತದೇಹವನ್ನು ಕ್ರೋಮ್​ಪೇಟ್​ ಸರ್ಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net