More

    ಸರ್ಕಾರ ಎಲ್ಲಾ ವಿಷಯಗಳ ಬಗ್ಗೆ ಚರ್ಚೆಗೆ ಸಿದ್ಧ, ಪ್ರತಿಪಕ್ಷಗಳು ಅನುಕೂಲಕರ ವಾತಾವರಣ ಖಾತ್ರಿಪಡಿಸಬೇಕು: ಪ್ರಲ್ಹಾದ್ ಜೋಶಿ

    ನವದೆಹಲಿ: ಡಿಸೆಂಬರ್​ 04ರಿಂದ ಶುರುವಾಗಲಿರುವ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರ ಎಲ್ಲಾ ವಿಚಾರಗಳ ಚರ್ಚೆಗೆ ಸಿದ್ದವಿದ್ದು, ವಿಪಕ್ಷಗಳು ಉಭಯ ಸದನದಲ್ಲಿ ಅನುಕೂಲಕರ ವಾತಾವರಣವನ್ನು ಖಾತ್ರಿಪಡಿಸಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಹೇಳಿದ್ದಾರೆ.

    ನವದೆಹಲಿಯಲ್ಲಿ ಈ ಕುರಿತು ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಎಲ್ಲಾ ವಿಷಯಗಳ ಬಗ್ಗೆ ಚರ್ಚೆಗೆ ಸಿದ್ಧ ಎಂದು ಸರ್ಕಾರ ಸಭೆಯಲ್ಲಿ ಸರ್ಕಾರ ಭರವಸೆ ನೀಡಿದೆ. ಆದರೆ, ಪ್ರತಿಪಕ್ಷಗಳು ಚರ್ಚೆಗೆ ಅನುವು ಮಾಡಿಕೊಡುವ ವಾತಾವರಣವನ್ನು ಖಚಿತಪಡಿಸಬೇಕು ಎಂದಿದ್ದಾರೆ.

    ಇದನ್ನೂ ಓದಿ: ಮಧ್ಯಪ್ರದೇಶ ವಿಧಾನಸಭೆ ಚುನಾವಣೆ; ಫಲಿತಾಂಶಕ್ಕೂ ಮುನ್ನ ನೂತನ ಸಿಎಂ ಕಮಲ್​ನಾಥ್​ ಬ್ಯಾನರ್​ಗಳ ಅಳವಡಿಕೆ

    ಸರ್ಕಾರವು ರಚನಾತ್ಮಕ ಚರ್ಚೆಗೆ ಸಂಪೂರ್ಣವಾಗಿ ಸಿದ್ಧವಾಗಿದೆ ಮತ್ತು ಸದನವು ಸುಗಮವಾಗಿ ನಡೆಯಲು ಪ್ರತಿಪಕ್ಷಗಳಿಗೆ ಮನವಿ ಮಾಡಿದೆ ಎಂದು ಜೋಶಿ ಹೇಳಿದರು. ಪ್ರತಿಪಕ್ಷಗಳ ಸಲಹೆಗಳನ್ನು ಸರ್ಕಾರ ಸಕಾರಾತ್ಮಕವಾಗಿ ಸ್ವೀಕರಿಸಿದೆ. 19 ಬಿಲ್‌ಗಳು ಮತ್ತು ಎರಡು ಹಣಕಾಸು ಅಂಶಗಳು ಪರಿಗಣನೆಯಲ್ಲಿವೆ ಎಂದು ತಿಳಿಸಿದ್ದಾರೆ.

    ಸಂಸತ್​ ಚಳಿಗಾಲದ ಅಧಿವೇಶನವು ಡಿಸೆಂಬರ್ 04ರಂದು ಶುರುವಾಗಲಿದ್ದು, 22ರವರೆಗೆ ನಡೆಯಲಿದೆ. ಈ ಸಂಬಂಧ ಕೇಂದ್ರ ಸರ್ಕಾರ ಶನಿವಾರ (ಡಿಸೆಂಬರ್ 02) ಸರ್ವಪಕ್ಷ ಸಭೆ ನಡೆಸಿತ್ತು. ಸಭೆಯಲ್ಲಿ 23 ಪಕ್ಷಗಳ 30ಕ್ಕೂ ಹೆಚ್ಚು ನಾಯಕರು ಭಾಗವಹಿಸಿದ್ದರು. ಕ್ರಿಮಿನಲ್ ಕಾನೂನುಗಳನ್ನು ಬದಲಿಸುವ ಮೂರು ಮಸೂದೆಗಳಿಗೆ ಇಂಗ್ಲಿಷ್ ನಾಮಕರಣ ಮಾಡಬೆಕೆಂದು ಒತ್ತಾಯಿಸಿದರು. ಜೊತೆಗೆ ಬೆಲೆ ಏರಿಕೆ ಮತ್ತು ಮಣಿಪುರದಲ್ಲಿ ತನಿಖಾ ಸಂಸ್ಥೆಗಳ “ದುರುಪಯೋಗ”ದಂತಹ ಸಮಸ್ಯೆಗಳ ಬಗ್ಗೆ ಜರೂರಾಗಿ ಚರ್ಚಗೆ ಅವಕಾಶ ನೀಡಬೇಕು ಎಂದು ಸಭೆಯಲ್ಲಿ ಆಗ್ರಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts