More

    ಸುಳ್ಳು ಸುದ್ದಿ ಹರಡಿದ ಆರೋಪ; 9 ಯುಟ್ಯೂಬ್​ ಚಾನೆಲ್​ಗಳ ಪಟ್ಟಿ ಬಿಡುಗಡೆ ಮಾಡಿದ ಸರ್ಕಾರ

    ನವದೆಹಲಿ: ಸಾಮಾಜಿಕ ಜಾಲತಾಣ ಹಾಗೂ ಯುಟ್ಯೂಬ್​ನಲ್ಲಿ ಸುಳ್ಳುಸುದ್ದಿ ಹರಡಿದ ಆರೋಪ ಎದರಿಸುತ್ತಿರುವ 9 ಯುಟ್ಯೂಬ್ ಚಾನಲ್‌ಗಳ ಪಟ್ಟಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.

    ಪ್ರೆಸ್​ ಇನ್​​ಫಾರ್ಮೆಶನ್​ ಬ್ಯೂರೋ (PIB) ಫ್ಯಾಕ್ಟ್ ಚೆಕ್ ವಿಭಾಗ, ಸುಳ್ಳು ಸುದ್ದಿಗಳನ್ನು ಹರಡುವ 9 ಯುಟ್ಯೂಬ್ ಚಾನಲ್‌ಗಳ ಹೆಸರುಗಳನ್ನು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಹಂಚಿಕೊಂಡಿದೆ.

    Sarkari Yojana Official, Sansani Live, Bajrang Education, Aapke Guruji, BJ News, Ab Bolega Bharat, GVT News, Daily Study, Bharat Ekta News ಎಂಬ 9 ಯುಟ್ಯೂಬ್ ಚಾನಲ್‌ಗಳು ಸುಳ್ಳು ಸುದ್ದಿಗಳನ್ನು ಹರಡುತ್ತಿವೆ ಎಂದು ದೂರಿದೆ. ಹೆಸರಿಸಲಾಗಿರುವ 9 ಯುಟ್ಯೂಬ್​ ಚಾನೆಲ್​ಗಳು 83 ಲಕ್ಷಕ್ಕೂ ಅಧಿಕ ಚಂದಾದಾರರನ್ನು ಹೊಂದಿದ್ದವು ಎಂದು ತಿಳಿಸಿದೆ. ಈ ಪೈಕಿ Aapke Guruji and Bajrang Education ಚಾನಲ್ ಗಳು 34 ಲಕ್ಷ ಮತ್ತು 24 ಲಕ್ಷ ಚಂದಾದಾರರನ್ನು ಹೊಂದಿವೆ. 

    ಇದನ್ನೂ ಓದಿ: ಮಿಜೋರಾಂ ವಿಧಾನಸಭೆ ಚುನಾವಣೆ; ಮತ ಎಣಿಕೆ ಮುಂದೂಡಿದ ಚುಣಾವಣಾ ಆಯೋಗ

    “PIB ಫ್ಯಾಕ್ ಚೆಕ್ ಯುನಿಟ್ ಬಹಿರಂಗಪಡಿಸಿದ ಯೂಟ್ಯೂಬ್ ಚಾನೆಲ್‌ಗಳು ಭಾರತದ ಮುಖ್ಯ ನ್ಯಾಯಮೂರ್ತಿ, ಭಾರತದ ಪ್ರಧಾನ ಮಂತ್ರಿ ಮತ್ತು ಮುಖ್ಯ ಚುನಾವಣಾ ಆಯುಕ್ತರು ಸೇರಿದಂತೆ ಸಾಂವಿಧಾನಿಕ ಸ್ಥಾನಗಳನ್ನು ಹೊಂದಿರುವ ವ್ಯಕ್ತಿಗಳ ಬಗ್ಗೆ ಅವಹೇಳನಕಾರಿ ಹೇಳಿಕೆ, ವರದಿಗಳನ್ನು ತಪ್ಪಾಗಿ ನೀಡುತ್ತಿವೆ ಎಂದು ಆರೋಪಿಸಲಾಗಿದೆ.

    ರಾಷ್ಟ್ರೀಯ ಭದ್ರತೆ, ಭಾರತದ ವಿದೇಶಿ ಸಂಬಂಧಗಳು ಮತ್ತು ಸಾರ್ವಜನಿಕ ಸುವ್ಯವಸ್ಥೆಯ ದೃಷ್ಟಿಕೋನದಿಂದ ಸೂಕ್ಷ್ಮ ವಿಷಯಗಳ ಮೇಲೆ ಅಸ್ವಸ್ಥತೆಯನ್ನು ಸೃಷ್ಟಿಸುವ ಮತ್ತು ತಪ್ಪು ಮಾಹಿತಿಯನ್ನು ಹರಡುವ ಉದ್ದೇಶದಿಂದ ನಕಲಿ ಮಾಹಿತಿಯನ್ನು ಹರಡುವ ಉದ್ದೇಶದಿಂದ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳು ಮತ್ತು ಡಿಜಿಟಲ್ ಚಾನೆಲ್‌ಗಳನ್ನು ನಿರ್ಬಂಧಿಸಲು ಸಚಿವಾಲಯವು ನಿರ್ದೇಶನಗಳನ್ನು ನೀಡುತ್ತಿದೆ ಎಂದು ಹೇಳಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts