More

    ಏಕದಿನ ವಿಶ್ವಚಾಂಪಿಯನ್ನರಿಗೆ ಮುಖಭಂಗ; ಆಸೀಸ್​ ವಿರುದ್ಧ ಟಿ20 ಸರಣಿ ಗೆದ್ದ ಭಾರತ

    ರಾಯ್​ಪುರ: ಇಲ್ಲಿನ ಶಹೀದ್ ವೀರ್ ನಾರಾಯಣ ಸಿಂಗ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಾಲ್ಕನೇ ಟಿ-20 ಪಂದ್ಯದಲ್ಲಿ ಭಾರತ 20 ರನ್​ಗಳ ಜಯಗಳಿಸುವ ಮೂಲಕ ಸರಣಿಯನ್ನು ವಶಪಡಿಸಿಕೊಂಡಿದೆ.

    ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಭಾರತ ರಿಂಕು ಸಿಂಗ್ (46 ರನ್, 29 ಎಸೆತ, 4 ಬೌಂಡರಿ, 2 ಸಿಕ್ಸರ್), ಯಶಸ್ವಿ ಜೈಸ್ವಾಲ್ (37 ರನ್, 28 ಎಸೆತ, 6 ಬೌಂಡರಿ, 1 ಸಿಕ್ಸರ್), ಜಿತೇಶ್​ ಶರ್ಮಾ (35 ರನ್, 19 ಎಸೆತ, 1 ಬೌಂಡರಿ, 3 ಸಿಕ್ಸರ್) ಸ್ಪೋಟಕ ಬ್ಯಾಟಿಂಗ್ ಫಲವಾಗಿ 20 ಓವರ್​ಗಳಲ್ಲಿ 9 ವಿಕೆಟ್​ ನಷ್ಟಕ್ಕೆ 174 ರನ್​ ಗಳಿಸಿತ್ತು.

    ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್​ ಗೆಲುವು ಖಚಿತ; ಎಕ್ಸಿಟ್​ ಪೋಲ್​ ಫಲಿತಾಂಶವೆಲ್ಲಾ ಸುಳ್ಳು ಎಂದ ಕಮಲ್​ನಾಥ್​

    ಗುರಿ ಬೆನ್ನತ್ತಿದ್ದ ಆಸ್ಟ್ರೇಲಿಯಾ ತಂಡವನ್ನು ಇನ್ನಿಲ್ಲದಂತೆ ಕಾಡಿದ ಭಾರತದ ಬೌಲರ್​ಗಳು ಎದುರಾಳಿ ತಂಡವನ್ನು 154 ರನ್​ಗಳಿಗೆ ಕಟ್ಟಿ ಹಾಕುವ ಮೂಲಕ ತಂಡಕ್ಕೆ 20 ರನ್​ಗಳ ಗೆಲುವನ್ನು ತಂದುಕೊಟ್ಟರು. ಈ ಮೂಲಕ ಭಾರತ ಏಕದಿನ ವಿಶ್ವಕಪ್​ ಫಿನಾಲೆ ಸೋಲನ್ನು ಟಿ-20 ಸರಣಿ ವಶಪಡಿಸಿಕೊಳ್ಳುವ ಮೂಲಕ ಪರೋಕ್ಷವಾಗಿ ತೀರಿಸಿಕೊಂಡಿದೆ.

    ಭಾರತದ ಪರ ಅಕ್ಷರ್​ ಪಟೇಲ್​ (4-0-16-3), ದೀಪಕ್​ ಚಹರ್​ (4-0-44-2), ರವಿ ಬಿಷ್ಣೋಯಿ (4-0-17-1), ಆವೇಶ್​ ಖಾನ್ (4-0-33-1) ರನ್​ ನೀಡಿ ವಿಕೆಟ್​ ಪಡೆದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts