More

  ಖಾನ್ಸಾರ್​ ಸಾಮ್ರಾಜ್ಯದಲ್ಲಿ ಗದ್ದುಗೆಗಾಗಿ ಗುದ್ದಾಟ; ಬಹು ನಿರೀಕ್ಷಿತ ಸಲಾರ್​ ಟ್ರೈಲರ್​ ರಿಲೀಸ್

  ಬೆಂಗಳೂರು: ಯಂಗ್​ ರೆಬೆಲ್​​ ಸ್ಟಾರ್​ ಪ್ರಭಾಸ್ ಅಭಿನಯದ, ಪ್ರಶಾಂತ್​ ನೀಲ್​ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ಸಲಾರ್​ ಸಿನಿಮಾದ ಟ್ರೈಲರ್​ ಬಿಡುಗಡೆಯಾಗಿದ್ದು, ಚಿತ್ರದ ಬಗೆಗಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸದೆ.

  ಫ್ರೆಂಡ್‌ಶಿಪ್ ಜೊತೆ ಸೇಡಿನ ಕಥೆ ಹೊಂದಿರುವ ಈ ಸಿನಿಮಾದಲ್ಲಿ ರಕ್ತ ಸಿಕ್ತವಾಗಿ ಪ್ರಭಾಸ್ ಖಡಕ್ ಆಗಿ ಕಾಣಿಸಿಕೊಂಡಿದ್ದಾರೆ. 3 ನಿಮಿಷ 47 ಸೆಕೆಂಡ್ ಇರುವ ಈ ಟ್ರೈಲರ್‌ಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ.

  ‘ಸಲಾರ್‌’ ಕಥೆ ಶುರುವಾಗೋದು 1000 ವರ್ಷಗಳ ಹಿಂದೆ. ಯಾವುದೇ ವಿರೋಧವಿಲ್ಲದ ಕ್ರೂರ ಡಕಾಯಿತರು ಖಾನ್ಸಾರ್‌ ಎಂಬ ಕಾಡನ್ನ ಕೋಟೆಯಾಗಿ, ದೊಡ್ಡ ಸಾಮ್ರಾಜ್ಯವಾಗಿ ಬದಲಿಸಿಕೊಂಡಿರುತ್ತಾರೆ. ಖಾನ್ಸಾರ್‌ ಎಂಬ ಸಾಮ್ರಾಜ್ಯಕ್ಕೆ ರಾಜ ಮನ್ನಾರ್‌ನೇ ಅಧಿಪತಿ. ಬದುಕಿರುವಾಗಲೇ ಮಗ ವರದ ರಾಜ ಮನ್ನಾರ್‌ನ ದೊರೆಯಾಗಿ ನೋಡಬೇಕು ಅನ್ನೋದು ರಾಜ ಮನ್ನಾರ್‌ನ ಆಸೆ. ಹೀಗಿರುವಾಗಲೇ, ಕುರ್ಚಿಗಾಗಿ ಕುತಂತ್ರ ಶುರುವಾಗುತ್ತೆ.

  ಇದನ್ನೂ ಓದಿ: ಭಾರತ-ಆಸೀಸ್​ ಟಿ20 ಪಂದ್ಯ; ನಮ್ಮ ಮೆಟ್ರೋ ರೈಲುಗಳ ಸೇವೆ ವಿಸ್ತರಣೆ

  ವರದರಾಜ ಮನ್ನಾರ್‌ನ ಕೊಲ್ಲೋಕೆ ಸಂಚು ರೂಪಿಸುತ್ತಲಾಗುತ್ತದೆ. ಆಗ ವರದ ರಾಜ ಮನ್ನಾರ್‌ನ ಪರವಾಗಿ ಸೇನೆಯಾಗಿ ನಿಲ್ಲೋದು ದೇವ. ಸ್ನೇಹಿತ ವರದ ರಾಜ ಮನ್ನಾರ್‌ಗಾಗಿ ದೇವ ಗಾಳ ಆಗೋಕೂ ರೆಡಿ, ತಿಮಿಂಗಲ ಆಗೋಕೂ ರೆಡಿ. ವರದ ರಾಜ ಮನ್ನಾರ್‌ಗಾಗಿ ಸಮರಕ್ಕಿಳಿದು ವಿರೋಧಿಗಳ ಸದ್ದಡಗಿಸುವ ದೇವ ಕಥೆಯೇ ‘ಸಲಾರ್’.

  ಪ್ರಭಾಸ್​ ಹಾಗೂ ಪೃಥ್ವಿರಾಜ್​ ಸುಕುಮಾರನ್​ ಜುಗಲ್​ಬಂದಿಗೆ ಅಭಿಮಾನಿಗಳು ಫಿದಾ ಆಗಿದ್ದು, ಸಿನಿಮಾ ಟ್ರೈಲರ್ ನೋಡಿದ ಅನೇಕರು ಸಿನಿಮಾ ಸೂಪರ್ ಹಿಟ್ ಆಗೋದು ಫಿಕ್ಸ್ ಎನ್ನುತ್ತಿದ್ದಾರೆ. ಇನ್ನು ಕೆಲವರು ರಾಜಮೌಳಿ ಬಳಿಕ ಪ್ರಶಾಂತ್ ನೀಲ್​ ಪ್ರಭಾಸ್​ ಕಾಪಾಡಿದ್ದಾರೆ ಎಂದು ಕಮೆಂಟ್ ಮಾಡುತ್ತಿದ್ದಾರೆ. ​

  ಸಲಾರ್ ಚಿತ್ರವನ್ನು ಹೊಂಬಾಳೆ ಫಿಲಂಸ್ ನಿರ್ಮಾಣ ಮಾಡಿದ್ದು, ಚಿತ್ರ ಡಿಸೆಂಬರ್​ 22ರಂದು ವಿಶ್ವದಾದ್ಯಂತ ತೆರೆಕಾಣಲಿದೆ. ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರದಲ್ಲಿ ಪ್ರಭಾಸ್, ಶ್ರುತಿ ಹಾಸನ್, ಪೃಥ್ವಿರಾಜ್​ ಸುಕುಮಾರನ್, ಗುಳ್ಟು ನವೀನ್ ಶಂಕರ್, ಪ್ರಮೋದ್, ಜಗಪತಿ ಬಾಬು ಮೊದಲಾದವರು ನಟಿಸಿದ್ದಾರೆ. ಕೆಜಿಎಫ್ 2 ಚಿತ್ರದಲ್ಲಿ ಕೆಲಸ ಮಾಡಿದ ಬಹುತೇಕ ತಂತ್ರಜ್ಞರು ಇಲ್ಲಿಯೂ ಕೆಲಸ ಮಾಡಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts