More

    ಮಧ್ಯಪ್ರದೇಶ ವಿಧಾನಸಭೆ ಚುನಾವಣೆ; ಫಲಿತಾಂಶಕ್ಕೂ ಮುನ್ನ ನೂತನ ಸಿಎಂ ಕಮಲ್​ನಾಥ್​ ಬ್ಯಾನರ್​ಗಳ ಅಳವಡಿಕೆ

    ಭೋಪಾಲ್​: ರಾಷ್ಟ್ರ ರಾಜಕಾರಣದ ದಿಕ್ಸೂಚಿ ಎಂದೇ ಹೇಳಲಾಲಗುತ್ತಿರುವ ಪಂಚರಾಜ್ಯ ಚುನಾವಣೆಯ ಫಲಿತಾಂಶ ಡಿಸೆಂಬರ್​ 03ರಂದು ಹೊರಬೀಳಲಿದ್ದು, ಕಾಂಗ್ರೆಸ್​ ಹಾಗೂ ಬಿಜೆಪಿ ನಾಯಕರು ತಮ್ಮ ಪಕ್ಷ ಗೆದ್ದು ಸರ್ಕಾರ ರಚಿಸುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.

    ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿರುವ ಕಾಂಗ್ರೆಸ್​ ನಾಯಕರು ಒಂದು ಹೆಜ್ಜೆ ಮುಂದೆ ಎಂಬಂತೆ ಸಂಭಮಿಸುತ್ತಿದ್ದು, ಕಾಂಗ್ರೆಸ್​ ಕಚೇರಿ ಎದುರು ದೊಡ್ಡ ಬ್ಯಾನರ್​ಗಳನ್ನು ಹಾಕುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

    ಇದನ್ನೂ ಓದಿ: ಮಿಜೋರಾಂ ವಿಧಾನಸಭೆ ಚುನಾವಣೆ; ಮತ ಎಣಿಕೆ ಮುಂದೂಡಿದ ಚುಣಾವಣಾ ಆಯೋಗ

    ಭೋಪಾಲ್​ನಲ್ಲಿರುವ ಕಾಂಗ್ರೆಸ್​ ಕಚೇರಿ ಮುಂಭಾಗ ಮುಂದಿನ ಮುಖ್ಯಮಂತ್ರಿ ಕಮಲ್​ನಾಥ್​ ಎಂಬ ಬ್ಯಾನರ್​ ಹಾಕಲಾಗಿದ್ದು, ಚುನಾವಣೆಯ ಗೆಲುವಿಗೂ ಮುನ್ನವೇ ಮುಂದಿನ ಮುಖ್ಯಮಂತ್ರಿ ಯಾರು ಎಂಬುದರ ಚರ್ಚೆಯನ್ನು ಹುಟ್ಟುಹಾಕಿದೆ. ಈ ರೀತಿಯ ಅತಿರೇಕದ ವರ್ತನೆಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಹಲವು ಕಾಂಗ್ರೆಸ್​ ನಾಯಕರು ಪರೋಕ್ಷವಾಗಿ ಕಿಡಿಕಾರಿದ್ದಾರೆ.

    230 ಸದ್ಯಬಲದ ಮಧ್ಯಪ್ರದೇಶದ ವಿಧಾನಸಭೆಗೆ ನವೆಂಬರ್​ 17ರಂದು ಮತದಾನ ನಡೆದಿದ್ದು, ಡಿಸೆಂಬರ್​ 03ರಂದು ಫಲಿತಾಂಶ ಹೊರಬೀಳಲಿದೆ. ಈಗಾಗಲೇ ಎಕ್ಸಿಟ್​ ಪೋಲ್​ ಫಲಿತಾಂಶ ಬೊಇಡುಗಡೆಯಾಗಿದ್ದು, ಕೆಲವು ಬಿಜೆಪಿ, ಕೆಲವು ಕಾಂಗ್ರೆಸ್​ ಹಾಗೂ ಇನ್ನೂ ಕೆಲವು ಅತಂತ್ರ ವಿಧಾನಸಬೆ ನಿರ್ಮಾಣವಾಗಲಿದೆ ಎಂದು ಭೌಇಷ್ಯ ನುಡಿದಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts