More

  ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಭಾವ ನಾಪತ್ತೆ; ಕಿಡ್ನಾಪ್ ಶಂಕೆ

  ರಾಮನಗರ: ರಾಜ್ಯ ಬಿಜೆಪಿ ಘಟಕದ ಪ್ರಭಾವಿ ನಾಯಕ ಎಂದೇ ಗುರುತಿಸಿಕೊಂಡಿರುವ ಮಾಜಿ ಸಚಿವ, ವಿಧಾನಪರಿಷತ್ ಸದಸ್ಯ ಸಿ.ಪಿ ಯೋಗೇಶ್ವರ್​ ಅವರ ಭಾವ ಮಹದೇವಯ್ಯ ಚನ್ನಪಟ್ಟಣ ತಾಲ್ಲೂಕಿನ ಚಕ್ಕೆರೆ ಗ್ರಾಮದಲ್ಲಿರುವ ತಮ್ಮ ತೋಟದ ಮನೆಯಿಂದ ಶನಿವಾರ ಕಾಣೆಯಾಗಿದ್ದಾರೆ ಎಂದು ತಿಳಿದು ಬಂದಿದೆ.

  ಯೋಗೇಶ್ವರವರ ಸಹೋದರಿ ಪುಷ್ಪ ಅವರ ಪತಿಯಾದ ಮಹದೇವಯ್ಯ ಉದ್ಯಮಿಯಾಗಿದ್ದು ಕುಟುಂಬ ಸಮೇತರಾಗಿ ಬೆಂಗಳೂರಿನಲ್ಲಿ ವಾಸವಾಗಿದ್ದರು. ಚಕ್ಕರೆಯಲ್ಲಿರುವ ತಮ್ಮ ತೋಟದ ಮನೆಗೆ ಆಗಮಿಸಿದ್ದ ಮಹದೇವಯ್ಯ ಇದೀಗ ನಾಪತ್ತೆಯಾಗಿದ್ದಾರೆ.

  CPY Brother In Law

  ಇದನ್ನೂ ಓದಿ: ಏಕದಿನ ವಿಶ್ವಚಾಂಪಿಯನ್ನರಿಗೆ ಮುಖಭಂಗ; ಆಸೀಸ್​ ವಿರುದ್ಧ ಟಿ20 ಸರಣಿ ಗೆದ್ದ ಭಾರತ

  ಶುಕ್ರವಾರ ರಾತ್ರಿ ಇಲ್ಲವೇ ಶನಿವಾರ ಮುಂಜಾನೆ ಮಹದೇವಯ್ಯ ಅವರು ತೋಟದ ಮನೆಯಿಂದ ಕಾಣೆಯಾಗಿದ್ದು ಅಪಹರಣ ನಡೆದಿರುವ ಶಂಕೆ ವ್ಯಕ್ತವಾಗಿದೆ. ತೋಟದ ಮನೆಯಲ್ಲಿನ ಬಾಗಿಲು ಹೊಡೆದಿದ್ದು , ಮನೆಯಲ್ಲಿರುವ ವಸ್ತುಗಳು ಚಲ್ಲಾಪಿಲ್ಲಿಯಾಗಿ ಬಿದ್ದಿವೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

  ಈ ಕುರಿತು ಪ್ರತಿಕ್ರಿಯಿಸಿರುವ ಸಿ.ಪಿ. ಯೋಗೇಶ್ವರ್ ತೋಟದ ಮನೆಗೆ ಬಂದು ನೋಡಿದಾಗ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿ ಆಗಿತ್ತು. ಬೇರೆ ಬೇರೆ ಕಾರು ಓಡಾಡಿರುವ ಸಾಧ್ಯತೆ ಇದೆ. ಹೀಗಾಗಿ ಮಹದೇವಯ್ಯರನ್ನು ಅಪಹರಣ ಮಾಡಿರುವ ಅನುಮಾನ ಇದೆ. ಅದಕ್ಕೆ ನಾವು ಪೊಲೀಸರಿಗೆ ಇರುವ ವಿಚಾರ ಹೇಳಿದ್ದೇವೆ ಎಂದು ತಿಳಿಸಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts