ಪ್ರೇಮವೈಫಲ್ಯಕ್ಕೆ ಯುವತಿ ಬಲಿ; ಚಾಕುವಿನಿಂದ ದಾಳಿ ನಡೆಸಿ ಕೊಂದ ಪ್ರೇಮಿ

Crime
Published on

ಪುತ್ತೂರು: ಪ್ರೇಮವೈಫಲ್ಯಕ್ಕೆ ಯುವತಿಯೊಬ್ಬಳು ಬಲಿಯಾದ ಪ್ರಕರಣದ ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಪ್ರಿಯಕರ ಈಕೆಯ ಕುತ್ತಿಗೆ ಮೇಲೆ ನಾಲ್ಕು ಬಾರಿ ಚೂರಿಯಿಂದ ದಾಳಿ ಮಾಡಿ ಕೊಂದು ಹಾಕಿದ್ದಾನೆ. ಪುತ್ತೂರಿನ ಮಹಿಳಾ ಪೊಲೀಸ್ ಠಾಣೆ ಬಳಿ ಈ ಪ್ರಕರಣ ನಡೆದಿದೆ.

ಪುತ್ತೂರಿನ ವಿಟ್ಲ ಸಮೀಪದ ಅಳಿಕೆ ನಿವಾಸಿ ಗೌರಿ (25) ಕೊಲೆಗೀಡಾದ ಯುವತಿ. ಈಕೆ ಸರ್ಕಾರಿ ಬಸ್ ನಿಲ್ದಾಣದ ಬಳಿಯ ಅಂಗಡಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದಳು. ಸರಪಾಡಿ ಮೂಲದ ಪದ್ಮರಾಜ್​ (30) ಕೊಲೆ ಆರೋಪಿ. ಕಳೆದ ಎರಡು ವರ್ಷಗಳಿಂದ ಇಬ್ಬರೂ ಪ್ರೀತಿಸುತ್ತಿದ್ದರು ಎನ್ನಲಾಗಿದೆ.

ಇಂದು ಇಬ್ಬರ ಮಧ್ಯೆ ವಾಗ್ವಾದ ನಡೆದಿತ್ತು. ಬಳಿಕ ಪದ್ಮರಾಜ್ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಪುಷ್ಕರಣಿ ಹಾಗೂ ಮಹಿಳಾ ಪೊಲೀಸ್ ಠಾಣೆಯ ನಡುವಿನ ಜಾಗದಲ್ಲಿ ಸಿಕ್ಕ ಗೌರಿ ಕುತ್ತಿಗೆಗೆ ಚಾಕುವಿನಿಂದ 3-4 ಬಾರಿ ದಾಳಿ ನಡೆಸಿದ್ದ. ಗಂಭೀರ ಗಾಯಗೊಂಡ ಯುವತಿಗೆ ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ವರ್ಗಾಯಿಸಲಾಯ್ತು. ಅದಾಗ್ಯೂ ಆಕೆಯನ್ನು ಉಳಿಸಿಕೊಳ್ಳಲು ಆಗಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net