30 ಕೋಟಿ ರೂಪಾಯಿಯ ವಾಚ್​ಗಳಿದ್ದರೂ ಈತನ ಟೈಮ್​ ಸರಿ ಇರಲಿಲ್ಲ!

Watches
Published on

ಕೋಲ್ಕತ: ಅತ್ಯಂತ ದುಬಾರಿ ಬೆಲೆಯ ವಾಚ್​ ಇದ್ದ ಮಾತ್ರಕ್ಕೆ ನಮ್ಮ ಸಮಯ ಚೆನ್ನಾಗಿರಬೇಕಂತೇನೂ ಇಲ್ಲ ಎಂಬುದಕ್ಕೆ ಈ ಪ್ರಕರಣ ನಿದರ್ಶನವಾಗಬಲ್ಲದು. ಏಕೆಂದರೆ ಇಲ್ಲೊಬ್ಬನ ಬಳಿ 30 ಕೋಟಿ ರೂಪಾಯಿಯ ವಾಚ್​ಗಳಿದ್ದರೂ ಈತನ ಟೈಮ್​ ಮಾತ್ರ ಸರಿ ಇರಲಿಲ್ಲ.

ಹೌದು.. ಕೋಲ್ಕತ ವಿಮಾನನಿಲ್ದಾಣದಲ್ಲಿ ವ್ಯಕ್ತಿಯೊಬ್ಬನನ್ನು ಆತನ ಬಳಿ ಇದ್ದ ದುಬಾರಿ ಬೆಲೆಯ ವಾಚ್​ನೊಂದಿಗೆ ವಶಕ್ಕೆ ಪಡೆಯಲಾಗಿದೆ. ಡೈರೆಕ್ಟೊರೇಟ್ ಆಫ್ ರೆವಿನ್ಯೂ ಇಂಟೆಲಿಜೆನ್ಸ್​ (ಡಿಆರ್​ಐ) ಅಧಿಕಾರಿಗಳು ಈ ಕ್ರಮ ಜರುಗಿಸಿದ್ದಾರೆ. ಅತ್ಯಂತ ದುಬಾರಿ ಬೆಲೆಯ ವಾಚ್​ ಕಳ್ಳಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ ಡಿಆರ್​ಐ ಅಧಿಕಾರಿಗಳು ಈತನನ್ನು ಬಂಧಿಸಿದ್ದಾರೆ.

ಬಳಿಕ ಈತನ ಮನೆ ಮೇಲೆ ದಾಳಿ ನಡೆಸಿ ಪರಿಶೀಲಿಸಿದಾಗ ಹಲವಾರು ವಾಚ್​ಗಳು ಸಿಕ್ಕಿವೆ. ಈತನ ಬಳಿ ವಿವಿಧ ಪ್ರತಿಷ್ಠಿತ ಕಂಪನಿಗಳ ದುಬಾರಿ ಬೆಲೆಯ ಒಟ್ಟು 34 ವಾಚ್​ಗಳು ಪತ್ತೆಯಾಗಿವೆ. ಇವುಗಳ ಒಟ್ಟು ಮೊತ್ತ 30 ಕೋಟಿ ರೂ. ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಆರೋಪಿ ಸಿಂಗಾಪುರದಿಂದ ಬಂದು ಕೋಲ್ಕತ ವಿಮಾನ ನಿಲ್ದಾಣದಲ್ಲಿ ಇಳಿದಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net