'ನಾ ನಿಂಗೊಬ್ಬಳಿಗೇ ಸೇರಿದವನಲ್ಲ, 10 ಮಹಿಳೆಯರಿಗೆ ಸೇರಿದವನು' ತಲಾಖ್​ ಹೇಳುವ ಮುನ್ನ ಶಾಕ್ ಕೊಟ್ಟ ಗಂಡ

talaq
Published on

ಮುಂಬೈ: ತ್ರಿವಳಿ ತಲಾಖ್​ ನಿಷೇಧಿಸಿ ವರ್ಷಗಳೇ ಕಳೆದಿವೆ. ಆದರೂ ಅಲ್ಲೊಂದು ಇಲ್ಲೊಂದು ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಮದುವೆಯಾಗಿದ್ದ ವ್ಯಕ್ತಿಯೊಬ್ಬ 10 ಹೆಣ್ಣು ಮಕ್ಕಳ ಜತೆಗೆ ಸಂಬಂಧ ಇಟ್ಟುಕೊಳ್ಳುವ ಸಲುವಾಗಿ ಪತ್ನಿಗೆ ತಲಾಖ್​ ನೀಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಬುಲ್ಧಾನ ಜಿಲ್ಲೆಯಲ್ಲಿ ಇಂತದ್ದೊಂದು ಪ್ರಕರಣ ವರದಿಯಾಗಿದೆ. ಮೊಹ್ಶಿನ್​ ಒಂದೂವರೆ ವರ್ಷದ ಹಿಂದೆ ಮದುವೆಯಾಗಿದ್ದಳು. ಮದುವೆಗೂ ಮೊದಲು ಆಕೆಯ ಪತಿಗೆ ಅಕ್ರಮ ಸಂಬಂಧವಿತ್ತಂತೆ. ಮದುವೆಯಾದ ಮೇಲೂ ಆ ಸಂಬಂಧಗಳು ಮುಂದುವರಿದಿವೆ. ಮೊಹ್ಶಿನ್​ ಅದೆಷ್ಟೇ ಹೇಳಿದರೂ ಆತ ಕೇಳಿಲ್ಲ. ಒಂದು ದಿನ ಇದೇ ವಿಚಾರದಲ್ಲಿ ಜಗಳವಾಗಿದೆ. ಆಗ ಸಿಟ್ಟಿಗೆದ್ದ ಪತಿರಾಯ, 'ನಾನು ನಿನಗೊಬ್ಬಳಿಗೇ ಸೇರಿದವನಲ್ಲ. ನಾನು ಇನ್ನೂ 10 ಹೆಣ್ಣು ಮಕ್ಕಳಿಗೆ ಸೇರಿದವನು' ಎಂದು ಚೀರಾಡಿದ್ದಾನೆ. ಹಾಗೆಂದವನೇ ಮೂರು ಬಾರಿ ತಲಾಖ್​ ಹೇಳಿ ಎಲ್ಲಿಂದ ಹೊರಟು ಹೋಗಿದ್ದಾನೆ.

ಗಂಡನ ಈ ನಡವಳಿಕೆಯಿಂದ ಮೊಹ್ಶಿನ್​ ಅಘಾತಕ್ಕೆ ಒಳಗಾಗಿದ್ದಾಳೆ. ಸ್ವಲ್ಪ ಸುಧಾರಿಸಿಕೊಂಡ ನಂತರ ಪೊಲೀಸ್​ ಠಾಣೆಗೆ ತೆರಳಿ ಗಂಡನ ವಿರುದ್ಧ ದೂರು ದಾಖಲಿಸಿದ್ದಾಳೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net