ಪತ್ನಿಗೆ ಕರೆ ಮಾಡಿ ತನ್ನ ಸಾವಿಗೆ ತಾನೇ ಆಹ್ವಾನ ನೀಡಿದ ಸರ್ಕಾರಿ ನೌಕರ: ಬೆಳಗಾಗುವಷ್ಟರಲ್ಲಿ ದುರಂತ ಅಂತ್ಯ!

TN Govt Emplo
Published on

ಚೆನ್ನೈ: ವಿವಾಹೇತರ ಸಂಬಂಧಕ್ಕೆ ಅಡ್ಡಿಯಾದನೆಂದು ಗಂಡನ ಸಾವಿಗೆ ಸಂಚು ರೂಪಿಸಿದ ಮಹಿಳೆ, ಪ್ರಿಯಕರನ ಜತೆಗೂಡಿ ಪತಿಯನ್ನೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ರಾಜೇಶ್​ ಕಣ್ಣನ್​ (45) ಕೊಲೆಯಾದ ವ್ಯಕ್ತಿ. ಈತ ಥೇಣಿ ಅಲ್ಲಿನಗರಂ ಜಿಲ್ಲೆಯ ವೇರಪಾಂಡಿ ಬಳಿಯ ಕೊಟ್ಟೂರು ನಿವಾಸಿ. ತಮಿಳುನಾಡು ಸರ್ಕಾರಿ ಸಾರಿಗೆ ಸಂಸ್ಥೆ (ಆರ್​ಟಿಸಿ) ಉದ್ಯೋಗಿಯಾಗಿದ್ದ ರಾಜೇಶ್​, ಆರ್ಥಿಕವಾಗಿಯೂ ಬಹಳ ಸದೃಢನಾಗಿದ್ದ. ಸರ್ಕಾರಿ ಉದ್ಯೋಗ ಮಾತ್ರವಲ್ಲದೆ, ಒಂದು ಎಕರೆ ತೆಂಗಿನ ತೋಟವು ಸಹ ಹೊಂದಿದ್ದ.

ಮಣಿ ಮೇಘಲೈ (33) ಎಂಬಾಕೆಯನ್ನು ವರಿಸಿದ್ದ ರಾಜೇಶ್​ಗೆ ಇಬ್ಬರು ಮಕ್ಕಳಿದ್ದಾರೆ. ರಾಜೇಶ್​ ತನ್ನ ಕೆಲಸ ಮತ್ತು ತೋಟದ ಕೆಲಸದಲ್ಲಿ ಆಗಾಗ ಬಿಜಿಯಾಗಿರುತ್ತಿದ್ದ. ಈ ಸಮಯದಲ್ಲಿ ಮಣಿ ಮೇಘಲೈ, ರಾಜೇಶ್​ ಸ್ನೇಹಿತ ಮಲೈಸ್ವಾಮಿಯ ಪರಿಚಯವಾಗಿದೆ. ಮಲೈಸ್ವಾಮಿ ಆಗಾಗ ರಾಜೇಶ್​ ಮನೆಗೆ ಬಂದು, ಹೋಗುವುದು ಮಾಡುತ್ತಿದ್ದ. ರಾಜೇಶ್​ ಹೆಚ್ಚು ಸಮಯ ಆರ್​ಟಿಸಿ ಕೆಲಸ ಮತ್ತು ತೋಟದಲ್ಲೇ ಕಳೆಯುತ್ತಿದ್ದರಿಂದ ಇತ್ತ ಆಕೆ ಮತ್ತು ಮಲೈಸ್ವಾಮಿ ನಡುವಿನ ಪರಿಚಯ ಹೆಚ್ಚಾಯ್ತ ಹೋಯಿತು.

ಕೊನೆಗೆ ಇದೇ ಪರಿಚಯ ಇಬ್ಬರ ನಡುವೆ ವಿವಾಹೇತರ ಸಂಬಂಧ ಬೆಳೆಯುವಂತೆ ಮಾಡಿತು. ಮೊದಲೇ ಗಂಡ ಮನೆಯಲ್ಲಿ ಕಡಿಮೆ ಸಮಯ ಇರುತ್ತಿದ್ದರಿಂದ ಆಕೆ ಮತ್ತು ಮಲೈಸ್ವಾಮಿ ನಡುವಿನ ಸಂಬಂಧ ಹೆಚ್ಚು ಆಳವಾಗ ತೊಡಗಿತು. ಇಬ್ಬರು ಸ್ನೇಹಿತರಾಗಿದ್ದರು ಸಹ ಅನೇಕ ದಿನಗಳವರೆಗೆ ರಾಜೇಶ್​ಗೆ ಪತ್ನಿಯ ಅಕ್ರಮ ಸಂಬಂಧದ ಬಗ್ಗೆ ಗೊತ್ತಾಗಲೇ ಇಲ್ಲ. ಸಂಶಯವೇ ಬರದಂತೆ ಇಬ್ಬರು ತಮ್ಮ ಸಂಬಂಧವನ್ನು ನಿರ್ವಹಿಸಿಕೊಂಡು ಬಂದಿದ್ದರು. ಹೀಗೆ ಕಳೆದ ನಾಲ್ಕು ವರ್ಷಗಳಿಂದ ಇಬ್ಬರ ಸಂಬಂಧ ಗುಟ್ಟಾಗಿಯೇ ನಡೆದಿತ್ತು.

ಆದರೆ, ಎಲ್ಲಿಯವರೆಗೆ ತಾನೇ ಮುಚ್ಚಿಡಲು ಸಾಧ್ಯ. ಒಂದು ದಿನ ಇಬ್ಬರು ಬೆಡ್​ರೂಮ್​ನಲ್ಲಿ ಸರಸಸಲ್ಲಾಪದಲ್ಲಿ ತೊಡಗಿರುವುದು ರಾಜೇಶ್​ ಕಣ್ಣಿಗೆ ಬಿತ್ತು. ಇಬ್ಬರು ಸಹ ನೇರವವಾಗಿಯೇ ಸಿಕ್ಕಿಬಿದ್ದಿದ್ದರು. ಪತ್ನಿಯ ಮುಖವಾಡ ಬಯಲಾಗುತ್ತಿದ್ದಂತೆ ಗಂಡ, ಎಲ್ಲವನ್ನು ಇಲ್ಲಿಗೆ ನಿಲ್ಲಿಸುವಂತೆ ಎಚ್ಚರಿಕೆ ನೀಡಿದ್ದ. ಸ್ನೇಹಿತನನ್ನು ಬೈದು ಇನ್ನೆಂದು ಮುಖ ತೋರದಂತೆ ಉಗಿದು ಹೊರಹಾಕಿದ್ದ. ಇದಾದ ಬಳಿಕ ಕೆಲವು ದಿನಗಳವರೆಗೆ ಆಕೆ ಗರತಿಯಂತೆ ವರ್ತಿಸಿ, ಮತ್ತೆ ತನ್ನ ಹಳೇ ಕಸುಬು ಮುಂದುವರಿಸಿದ್ದಳು.

ಕಳೆದ ಸೋಮವಾರ ರಾಜೇಶ್​ ತನ್ನ ಕೆಲಸ ಮುಗಿಸಿ ಎಂದಿನಂತೆಯೇ ತೋಟಕ್ಕೆ ತೆರಳಿದ್ದ. ಕೆಲಸ ಮಾಡುತ್ತಾ ತನ್ನ ಪತ್ನಿಗೆ ಕರೆ ಮಾಡಿ, ಇಂದು ತುಂಬಾ ಕೆಲಸವಿದೆ. ತೋಟದಲ್ಲೇ ಈ ರಾತ್ರಿ ಉಳಿದುಕೊಳ್ಳುತ್ತೇನೆ. ಹುಷಾರಾಗಿರು ಎಂದು ಹೇಳಿದ್ದ. ಇದೇ ಒಳ್ಳೆಯ ಅವಕಾಶ ಎಂದು ಭಾವಿಸಿದ ಆಕೆ ತಕ್ಷಣ ಮಲೈಸ್ವಾಮಿಗೆ ಕರೆ ಮಾಡಿ ಬರುವಂತೆ ಹೇಳಿದ್ದಾಳೆ. ಅಲ್ಲದೆ, ಗಂಡನ ಬಗ್ಗೆಯು ತಿಳಿಸಿದ್ದಾಳೆ.

ಇದೇ ಅವಕಾಶ ಅಂದುಕೊಂಡ ಮಲೈಸ್ವಾಮಿ ಅದೇ ದಿನ ರಾತ್ರಿ ತೋಟಕ್ಕೆ ತೆರಳಿ ರಾಜೇಶ್​ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ, ತನಗೇನು ಗೊತ್ತಿಲ್ಲದಂತೆ ಮನೆಗೆ ಮರಳಿದ್ದಾನೆ. ಮರುದಿನ ತೋಟದ ಕೆಲಸಗಾರರು ಮಾಲೀಕನ ಶವ ಬಿದ್ದಿರುವುದನ್ನು ನೋಡಿ ಆಘಾತಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಕ್ಷಣ ತನಿಖೆ ಆರಂಭಿಸಿದ್ದಾರೆ.

ಈ ವೇಳೆ ಅಕ್ರಮ ಸಂಬಂಧ ವಿಚಾರ ಪೊಲೀಸರಿಗೆ ತಿಳಿದಿದೆ. ತಕ್ಷಣ ಮಲೈಸ್ವಾಮಿ ಮತ್ತು ಆಕೆಯನ್ನು ಬಂಧಿಸಿ ತಮ್ಮ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ಇಬ್ಬರು ತಪ್ಪೊಪ್ಪಿಕೊಂಡಿದ್ದಾರೆ. ಇದೀಗ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದು, ತಮ್ಮ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net