More

    ಕಾಂಡೋಮ್‌ ತೆಗೆಯಲು ಮಹಿಳೆಯ ಸಮ್ಮತಿ ಅಗತ್ಯ- ಇಲ್ಲದಿದ್ದರೆ ಶಿಕ್ಷೆ: ಬರಲಿದೆ ಹೀಗೊಂದು ಕಾನೂನು

    ಕ್ಯಾಲಿಫೋರ್ನಿಯಾ: ಲೈಂಗಿಕ ಕ್ರಿಯೆ ನಡೆಸುವ ಸಮಯದಲ್ಲಿ ಮಹಿಳೆಯ ಒಪ್ಪಿಗೆ ಪಡೆಯದೇ ಕಾಂಡೋಮ್ ತೆಗೆದು ಹಾಕಿದರೆ ಇನ್ನುಮುಂದೆ ಶಿಕ್ಷೆ ಅನುಭವಿಸಬೇಕಾಗುತ್ತದೆ, ಏಕೆಂದರೆ ಇದು ಇನ್ನುಮುಂದೆ ಕಾನೂನುಬಾಹಿರವಾಗಲಿದ್ದು, ಇಂಥದ್ದೊಂದು ಕಾನೂನು ಜಾರಿಗೆ ಬರಲಿದೆ.

    ಮಹಿಳೆಯ ಒಪ್ಪಿಗೆಯಿಲ್ಲದೆ ಲೈಂಗಿಕ ಸಮಯದಲ್ಲಿ ಪುರುಷ ಕಾಂಡೋಮ್ ಅನ್ನು ತೆಗೆದುಹಾಕುವ ಕ್ರಿಯೆಯನ್ನು – ’ಸ್ಟೆಲ್ಟಿಂಗ್’ ಎಂದು ಕರೆಯುತ್ತಾರೆ. ಇದನ್ನು ಕಾನೂನುಬಾಹಿರ ಮಾಡಲಾಗುವುದು. ಅಷ್ಟಕ್ಕೂ ಇಂಥದ್ದೊಂದು ಕಾನೂನು ಜಾರಿಗೆ ಮಾಡಲಿರುವುದು ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ. ಈ ಕಾಯ್ದೆ ಜಾರಿಗೆ ತರಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದ್ದು, ಶೀಘ್ರದಲ್ಲೇ ಅನುಮೋದನೆ ಸಿಗಲಿದೆ ಎಂದು ವರದಿಯಾಗಿದೆ.

    ಕ್ಯಾಲಿಫೋರ್ನಿಯಾ ಅಸೆಂಬ್ಲಿ ಸದಸ್ಯೆ ಕ್ರಿಸ್ಟೀನಾ ಗರ್ಸಿಯಾ, ಈ ಪ್ರಸ್ತಾವವನ್ನು ಅಧಿವೇಶನದಲ್ಲಿ ಮಂಡಿಸಿದ್ದಾರೆ. ಈ ಪ್ರಸ್ತಾವದ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಶೀಘ್ರವೇ ಇದು ಕಾನೂನು ರೂಪದಲ್ಲಿ ಜಾರಿಗೆ ಬರಲಿದೆ ಎಂದು ಹೇಳಲಾಗುತ್ತಿದೆ. ಮಹಿಳೆಯ ಒಪ್ಪಿಗೆ ಇಲ್ಲದೆಯೇ ಕಾಂಡೋಮ್‌ ತೆಗೆಯುವುದು ಲೈಂಗಿಕ ಕಿರುಕುಳಕ್ಕೆ ಸಮ. ಆಕೆಯ ಅನುಮತಿ ಇಲ್ಲದೇ ಆಕೆಯನ್ನ ಸ್ಪರ್ಶಿಸೋದು, ಸೆಕ್ಸ್‌ಗೆ ಆಹ್ವಾನ ನೀಡುವುದು ಕಾನೂನು ಬಾಹಿರ. ಇದು ಅನುಮತಿ ಇಲ್ಲದೇ ಕಾಂಡೋಮ್ ತೆಗೆಯುವುದನ್ನ ಅಪರಾಧ ಎಂದು ಸ್ಪಷ್ಟವಾಗಿ ಹೇಳುತ್ತದೆ ಎಂದು ಕ್ರಿಸ್ಟೀನಾ ಹೇಳಿದ್ದಾರೆ.

    ಒಂದು ವೇಳೆ ಈ ಮಸೂದೆ ಅಂಗೀಕಾರಗೊಂಡರೆ ಇಂಥದ್ದೊಂದು ಅಪರೂಪದ ಕಾಯ್ದೆಯನ್ನು ಜಾರಿ ಮಾಡಿರುವ ಮೊದಲ ರಾಜ್ಯ ಕ್ಯಾಲಿಫೋರ್ನಿಯಾ ಆಗಲಿದೆ.

    ಗರ್ಭಧಾರಣೆ ಹಾಗೂ ಲೈಂಗಿಕವಾಗಿ ಹರಡುವ ರೋಗಗಳಿಗೆ ಕಾಂಡೋಮ್‌ ಇಲ್ಲದೇ ಮಾಡುವ ಸೆಕ್ಸ್‌ಗಳು ಅವಕಾಶ ನೀಡುವ ಸಾಧ್ಯತೆ ಇದೆ. ಇದು ಮಹಿಳೆಯ ಮೇಲೆ ದೌರ್ಜನ್ಯ ಎಸಗಿದಂತೆ. ದೈಹಿಕ ಹಾಗೂ ಮಾನಸಿಕವಾಗಿಯೂ ಇದು ದೌರ್ಜನ್ಯವೇ. ಆದರೆ ಇಂಥ ವಿಷಯಗಳು ಬಂದಾಗ ಜನರು ಅದರ ಬಗ್ಗೆ ಚರ್ಚೆ ಮಾಡಲು ಹಿಂಜರಿಯುತ್ತಾರೆ. ಇದೊಂದು ಸಮಸ್ಯೆ ಎಂದು ನಂಬದವರೇ ಹೆಚ್ಚು ಎನ್ನುವ ವಾದನವನ್ನು ಸ್ತ್ರೀವಾದಿಗಳನ್ನು ಮಾಡುತ್ತಿದ್ದಾರೆ.

    ಲಾರಿ, ಬಸ್‌ ನಡುವೆ ಬೆಳ್ಳಂಬೆಳಗ್ಗೆ ಭೀಕರ ಅಪಘಾತ: 14 ಮಂದಿ ದುರ್ಮರಣ- ಕೆಲವರ ಸ್ಥಿತಿ ಚಿಂತಾಜನಕ

    ಕಾಲೇಜಿನ ಕುಸ್ತಿ ಅಖಾಡಾದಲ್ಲಿ ಗುಂಡಿನ ದಾಳಿ- ಐದು ಮಂದಿಯ ಸಾವು; ಹಲವರ ಸ್ಥಿತಿ ಗಂಭೀರ

    ಬಂಜಾರ ನಾಯಕಿ, ಟಿಕ್‌ಟಾಕ್‌ ಸ್ಟಾರ್‌ ನಿಗೂಢ ಸಾವು- ಆಡಿಯೋ ಕ್ಲಿಪ್ಪಿಂಗ್‌ನಲ್ಲಿ ಮಹಾರಾಷ್ಟ್ರ ಸಚಿವನ ಹೆಸರು!

    ರಾಮಸೇತು ನಿರ್ಮಾಣಕ್ಕೆ 48 ಅಡಿ ಉದ್ದದ ಕೇಕ್‌ ಮೇಲೆ ಕಲ್ಲುಹೊತ್ತು ಸಾಗುತಿದೆ ವಾನರಸೇನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts