More

  ಮಹಿಳೆಯರು ಸ್ವಾವಲಂಬಿಯಾಗಬೇಕು

  ಚಿಕ್ಕಮಗಳೂರು: ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಯಾಗಬೇಕು. ಆ ನಿಟ್ಟಿನಲ್ಲಿ ಸ್ವಯಂ ಉದ್ಯೋಗ ಕೈಗೊಳ್ಳಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಕರೆ ನೀಡಿದರು.
  ನಗರದ ಬಸವನಹಳ್ಳಿಯ ಶಂಕರಮಠ ಕಾಂಪ್ಲೆಕ್ಸ್‌ನಲ್ಲಿ ನೂತನವಾಗಿ ಆರಂಭಿಸಿರುವ ಅಟೋಕರ್ ಫ್ಯಾಷನ್ ಡಿಸೈನ್ ಟ್ರೈನಿಂಗ್ ಸೆಂಟರ್ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರು, ಹಲವು ಕ್ಷೇತ್ರಗಳಲ್ಲಿ ದುಡಿಯುತ್ತಿದ್ದಾರೆ. ಹಾಗಾಗಿ ವಿದ್ಯಾವಂತ ಮಹಿಳೆಯರು ಹಾಗೂ ಯುವತಿಯರು ಟೈಲರಿಂಗ್, ಬ್ಯೂಟಿಷಿಯನ್ ತರಬೇತಿ ಪಡೆದು ಸ್ವಯಂ ಉದ್ಯೋಗ ಕೈಗೊಳ್ಳಬೇಕು. ಅದರಿಂದ ಕುಟುಂಬಕ್ಕೆ ಆರ್ಥಿಕವಾಗಿ ಸಹಾಯವಾಗುತ್ತದೆ ಎಂದು ಹೇಳಿದರು.
  ಇದೇ ಸಂದರ್ಭದಲ್ಲಿ ಇಂಜಿನಿಯರ್ ನಾಗೇಂದ್ರ, ಕಾಫಿ ವರ್ತಕ ಅರುಣ್, ಟ್ರೈನಿಂಗ್ ಸೆಂಟರ್ ಮುಖ್ಯಸ್ಥೆ ಆರ್.ಪ್ರೇಮಾ, ಪ್ರಮುಖರಾದ ನಾಗರಾಜ್, ರಂಗಪ್ಪ, ರುಕ್ಮಿಣಿ, ಪುಷ್ಪ , ತಾರಾನಾಥ್ ಮತ್ತಿತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts